ಪತಿಗೆ ಅಕ್ರಮ ಸಂಬಂಧದ ಶಂಕೆ – ಮಗಳನ್ನು ಕೊಂದು ಪತ್ನಿಯೂ ಆತ್ಮಹತ್ಯೆ!

ಬೆಂಗಳೂರು : ಗಂಡನ ಅನೈತಿಕ ಸಂಬಂಧದಿಂದ ಬೇಸತ್ತ ಪತ್ನಿ ಐದು ವರ್ಷದ ಮಗಳನ್ನು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಯ್ಯ ಲೇಔಟ್​ನಲ್ಲಿ ನಡೆದಿದೆ. 33 ವರ್ಷದ ಶ್ರುತಿ ಆತ್ಮಹತ್ಯೆಗೆ ಶರಣಾದ ಮಹಿಳೆ.

ಪತಿಗೆ ಅನೈತಿಕ ಸಂಬಂಧವಿದೆ ಎಂದು ಡೆತ್ ನೋಟ್ ಬರೆದು ಶ್ರುತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 10 ವರ್ಷದ ಹಿಂದೆ ಶ್ರುತಿ ಆಡಿಟಿಂಗ್ ಮಾಡ್ತಿದ್ದ ವ್ಯಕ್ತಿಯನ್ನ ಮದುವೆಯಾಗಿದ್ದರು. ಶ್ರುತಿ ಪಾವಗಡದ ಗ್ರಾಮ ಪಂಚಾಯತಿಯೊಂದರ ಅಧ್ಯಕ್ಷೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು.

ನಿನ್ನೆ ಸಂಜೆ ದೊಡ್ಡ ಮಗ ಹೊರಗಡೆ ಆಟವಾಡ್ತಿದ್ದ ವೇಳೆ ಶ್ರುತಿ 5 ವರ್ಷದ ಮಗಳು ರೋಶಿಣಿಯನ್ನು ಕೊಂದು, ನಂತರ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಗ ಆಟ ಮುಗಿಸಿಕೊಂಡು ಮನೆಗೆ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಮರಣೋತ್ತರ ಪರೀಕ್ಷೆ ಮುಗಿಸಿ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗಿದೆ.

ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ಪತಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : http://ಶಿವಕಾರ್ತಿಕೇಯನ್-ಮುರುಗದಾಸ್ ಹೊಸ ಸಿನಿಮಾಗೆ ‘ಮದರಾಸಿ’ ಟೈಟಲ್ ಫಿಕ್ಸ್!

Btv Kannada
Author: Btv Kannada

Leave a Comment

Read More