ಬೆಂಗಳೂರು : ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಜ್ವಲ್ ರೇವಣ್ಣ ಮಾಜಿ ಕಾರ್ ಡ್ರೈವರ್ ಪೆನ್ ಡ್ರೈವ್ ಕೇಸ್ನ ಪಿನ್ ಟು ಪಿನ್ ಮಾಹಿತಿ ಹಂಚಿಕೊಂಡಿದ್ದಾರೆ. 6 ನಿಮಿಷದ ವಿಡಿಯೋದಲ್ಲಿ ಪೆನ್ ಡ್ರೈವ್ನ ರಣರೋಚಕ ಮಾಹಿತಿ ನೀಡಿದ್ದಾರೆ.
ನಾನು 15 ವರ್ಷದಿಂದ ಪ್ರಜ್ವಲ್ ರೇವಣ್ಣ ಫ್ಯಾಮಿಲಿಗೆ ಕಾರ್ ಡ್ರೈವರ್ ಆಗಿದ್ದೆ, ಒಂದು ವರ್ಷದ ಹಿಂದೆಯೇ ನಾನು ಕೆಲಸ ಬಿಟ್ಟಿದ್ದೀನಿ. ನನ್ನ ಜಮೀನು ಬರೆಸಿಕೊಂಡು ನನ್ನ ಪತ್ನಿ ಮೇಲೆ ಹಲ್ಲೆ ಮಾಡಿದ್ರು, ಹಿಂಸೆ ಕೊಟ್ಟರು, ಹಲ್ಲೆ ಮಾಡಿದರು ಆದ್ದರಿಂದ ಮನೆಯಿಂದ ಹೊರಬಂದೆ. ನನ್ನ ಮೇಲೆ ಪ್ರಜ್ವಲ್ ರೇವಣ್ಣ ಕೋರ್ಟ್ನಿಂದ ಸ್ಟೇ ತಂದಿದ್ರು, ನನ್ನ ಬಳಿ ಇರುವ ಫೋಟೋ, ವಿಡಿಯೋ ಬಳಸದಂತೆ ಕೋರ್ಟ್ ಸ್ಟೇ ನೀಡಿತ್ತು ಎಂದು ಕಾರ್ ಡ್ರೈವರ್ ಕಾರ್ತಿಕ್ ಹೇಳಿದ್ದಾರೆ.
ಈ ವಿಚಾರವಾಗಿ ವಕೀಲರಾಗಿದ್ದ ದೇವರಾಜೇಗೌಡರನ್ನು ಭೇಟಿಯಾಗಿದ್ದೆ, ದೇವರಾಜೇಗೌಡ ಇವರ ಫ್ಯಾಮಿಲಿ ವಿರುದ್ಧ ಹೋರಾಟ ಮಾಡುತ್ತಿದ್ದರು. ಯಾರಿಂದಲೂ ನ್ಯಾಯ ಸಿಗಲ್ಲ ಅಂತ ದೇವರಾಜೇಗೌಡ ಬಳಿ ಹೋದೆ. ನಿನ್ನ ಬಳಿ ಇರುವ ಫೋಟೋ, ವಿಡಿಯೋ ನನಗೆ ಕೊಡು, ನಾನು ಜಡ್ಜ್ ಮುಂದೆ ಮಾತ್ರ ಪ್ರೊಡ್ಯೂಸ್ ಮಾಡುವೆ ಅಂತಾ ಮಾತು ಕೊಟ್ಟಿದ್ದರು. ಹೀಗಾಗಿ ಬಿಜೆಪಿಯ ದೇವರಾಜೇಗೌಡಗೆ ಮಾತ್ರ ನಾನು ಪೆನ್ಡ್ರೈವ್ ಕೊಟ್ಟಿದ್ದು, ಈ ವಿಡಿಯೋಗಳನ್ನು ದೇವರಾಜೇಗೌಡರೇ ಸ್ವಾರ್ಥಕ್ಕೆ ಉಪಯೋಗಿಸಿಕೊಂಡಿದ್ದಾರೆ.
ದೇವರಾಜೇಗೌಡರನ್ನು ಬಿಟ್ಟರೆ ಬೇರೆ ಯಾರಿಗೂ ಕೊಟ್ಟಿಲ್ಲ, ಪೆನ್ಡ್ರೈವ್ ಯಾರು ಹಂಚಿದರೂ ಗೊತ್ತಿಲ್ಲ. ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ, ನಾನು ಕಾಂಗ್ರೆಸ್ ಅವರಿಗೆ ಕೊಡುವುದಿದ್ದರೆ ದೇವರಾಜೇಗೌಡ ಬಳಿ ಏಕೆ ಹೋಗುತ್ತಿದೆ ಎಂದು ಕಾರ್ ಡ್ರೈವರ್ ಪೆನ್ಡ್ರೈವ್ ಬಗ್ಗೆ ರಹಸ್ಯ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ : ಮೋದಿ ನಂತರ ಉತ್ತರಕ್ಕೆ ನಾಳೆ ಅಮಿತ್ ಶಾ ಎಂಟ್ರಿ – ಪ್ರಹ್ಲಾದ್ ಜೋಶಿ, ಬೊಮ್ಮಾಯಿ ಪರ ಮತಬೇಟೆ..!