ಆಭರಣ ಪ್ರಿಯರಿಗೆ ಡಬಲ್​ ಶಾಕ್ – ಮತ್ತೆ ಗಗನಕ್ಕೇರಿದ ಚಿನ್ನದ ಬೆಲೆ.. 1 ಲಕ್ಷ ದಾಟಿದ ಬೆಳ್ಳಿಯ ರೇಟ್​!

ನವದೆಹಲಿ : ಚಿನ್ನದ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈಗ ಮತ್ತೊಮ್ಮೆ ಚಿನ್ನದ ದರ ಏರಿಕೆಯಾಗಿ ದಾಖಲೆ ನಿರ್ಮಿಸಿದೆ. ಸಾರ್ವಕಾಲಿಕ ದಾಖಲೆಯ ಏರಿಕೆ ಕಂಡಿರುವ ಚಿನ್ನದ ದರ, ಪ್ರತಿ ಗ್ರಾಂಗೆ 1,300 ರೂಪಾಯಿಗಳಷ್ಟು ಹೆಚ್ಚಾಗಿದೆ.

ಅಖಿಲ ಭಾರತ ಸರಾಫಾ ಸಂಘ ಚಿನ್ನದ ದರ ಏರಿಕೆ ಬಗ್ಗೆ ಮಾಹಿತಿ ನೀಡಿದ್ದು, ಬೆಲೆ ಏರಿಕೆಯಿಂದಾಗಿ 10 ಗ್ರಾಂ ಚಿನ್ನದ ಬೆಲೆ 89,400 ರೂಪಾಯಿಗಳಷ್ಟಾಗಿದೆ ಎಂದು ತಿಳಿಸಿದೆ.

ಗುರುವಾರ (ಫೆ.13) ರಂದು ಶೇ.99.9 ರಷ್ಟು ಶುದ್ಧತೆಯ ಹಳದಿ ಲೋಹದ ದರ ಪ್ರತಿ 10 ಗ್ರಾಂಗೆ 88,100 ರೂಪಾಯಿಗಳಿತ್ತು. 99.5 ರಷ್ಟು ಶುದ್ಧತೆಯ ಚಿನ್ನದ ಬೆಲೆ 1,300 ರೂ. ಏರಿಕೆಯಾಗಿ 10 ಗ್ರಾಂಗೆ 89,000 ರೂ. ತಲುಪಿದೆ. ಹಿಂದಿನ 10 ಗ್ರಾಂಗೆ 87,700 ರೂ. ಇತ್ತು.

1 ಲಕ್ಷ ದಾಟಿದ ಕೆಜಿ ಬೆಳ್ಳಿಯ ದರ : ಶುಕ್ರವಾರ ಬೆಳ್ಳಿ ಬೆಲೆಯೂ 2,000 ರೂಪಾಯಿ ಏರಿಕೆಯಾಗಿ ಪ್ರತಿ ಕೆಜಿಗೆ 1 ಲಕ್ಷ ರೂಪಾಯಿ ತಲುಪಿದೆ. ಇದು ನಾಲ್ಕು ತಿಂಗಳ ಗರಿಷ್ಠ ಮಟ್ಟದ ದರವಾಗಿದೆ. ಗುರುವಾರ ಬೆಳ್ಳಿ ದರ ಕೆಜಿಗೆ 98,000 ರೂ.ಗಳಿತ್ತು. MCX ನಲ್ಲಿ ಫ್ಯೂಚರ್ಸ್ ವಹಿವಾಟಿನಲ್ಲಿ, ಏಪ್ರಿಲ್ ವಿತರಣೆಗೆ ಚಿನ್ನದ ಒಪ್ಪಂದಗಳು 10 ಗ್ರಾಂಗೆ 184 ರೂ.ಗಳಷ್ಟು ಏರಿಕೆಯಾಗಿ 85,993 ರೂ.ಗಳಿಗೆ ತಲುಪಿದೆ. ದುರ್ಬಲ ಡಾಲರ್ ಸೂಚ್ಯಂಕ ಮತ್ತು US ಸುಂಕ ನೀತಿಗಳಿಂದ ನಿರಂತರ ಬೆಂಬಲದಿಂದಾಗಿ ಚಿನ್ನದ ಬೆಲೆಗಳು ಏರುಗತಿಯಲ್ಲಿವೆ.

Btv Kannada
Author: Btv Kannada

Leave a Comment

Read More