ಬೆಂಗಳೂರು : ಕಾಂಗ್ರೆಸ್ ಗ್ಯಾರಂಟಿ ನಿಲ್ಲಿಸಲು ಯಾರಿಂದಲೂ ಆಗಲ್ಲ. ನಿಲ್ಲಲ್ಲ.. ನಿಲ್ಲಲ್ಲ.. ಕಾಂಗ್ರೆಸ್ ಗ್ಯಾರಂಟಿ ನಿಲ್ಲಲ್ಲ. ಗ್ಯಾರಂಟಿ ನಿಲ್ಲಿಸಲು ಬಿಜೆಪಿ-ಜೆಡಿಎಸ್ ಹಣೆಯಲ್ಲೂ ಬರೆದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನ KPCC ಕಚೇರಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಬಿಜೆಪಿ ನಾಯಕರು ಪದೇ-ಪದೇ ಗ್ಯಾರಂಟಿ ನಿಲ್ಲುತ್ತೆ ಎನ್ನುತ್ತಿದ್ದಾರೆ. ಬಿಎಸ್ವೈ, ವಿಜಯೇಂದ್ರ, ಹೆಚ್ಡಿಕೆ ಹಣೆಯಲ್ಲಿ ಗ್ಯಾರಂಟಿ ನಿಲ್ಲಿಸಲು ಆಗಲ್ಲ. ಗ್ಯಾರಂಟಿ ನಿಲ್ಲಿಸಿದರೆ ನಮ್ಮ ತಾಯಂದಿರೇ ಇವರಿಗೆ ಉತ್ತರ ಕೊಡ್ತಾರೆ ಎಂದಿದ್ದಾರೆ.
ಹಾಗೆಯೇ, ಸೋಲಿನ ಭಯದಿಂದಲೇ ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಯಾವುದೇ ಕಾರಣಕ್ಕೂ ನಮ್ಮ ಗ್ಯಾರಂಟಿ ನಿಲ್ಲಿಸಲು ಆಗೋದಿಲ್ಲ ಎಂದು ಡಿಕೆಶಿ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ : ಬಿಜೆಪಿಗೆ ಬಿಗ್ ಶಾಕ್ – ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದ ಕರಡಿ ಸಂಗಣ್ಣ..!
Post Views: 195