ನ್ಯೂಸ್ ಚಾನಲ್ ಸರ್ವರ್​ಗಳಿಗೆ ಕನ್ನ – ವಂಚಕ ಸಂತೋಷ್ ಅರೆಸ್ಟ್!

ಬೆಂಗಳೂರು : ನ್ಯೂಸ್ ಚಾನಲ್​ನ ಫೇಸ್​ಬುಕ್, ಇನ್ಟಾಗ್ರಾಂ, ಯೂಟ್ಯೂಬ್ ಹ್ಯಾಕ್ ಮಾಡಿ ಕನ್ನ ಹಾಕಲು ಮುಂದಾಗಿದ್ದ ಕೆ.ಸಂತೋಷ್ ಎಂಬ ವಂಚಕನ ವಿರುದ್ಧ FIR ದಾಖಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ.

ಈ ಹಿಂದೆ ಸೈಬರ್ ವಂಚಕ ಕೆ.ಸಂತೋಷ್ ಹಲವು ಸುದ್ದಿವಾಹಿನಿಗಳಲ್ಲಿ ಕೆಲಸ ಮಾಡಿದ್ದ. ಅಲ್ಲದೆ ಈ ವಂಚಕ ಗ್ಯಾಲಾಕ್ಸಿಟಿವಿ ಕನ್ನಡ ಎಂಬ ಯೂಟ್ಯೂಬ್ ಚಾನೆಲ್ ಮಾಡಿಕೊಂಡಿದ್ದ. ಈತ ಬೆಂಗಳೂರಿನ ವಿರೂಪಾಕ್ಷಪುರದ ಗಣೇಶ ನಗರದಲ್ಲಿ ವಾಸವಾಗಿದ್ದ.

ಹುಟ್ಟಾ ವಂಚಕನಾದ ಈತ ಆಫೀಸ್ ಪಾಸ್‌ವರ್ಡ್‌ಗಳನ್ನು ಕದ್ದು ಹ್ಯಾಕಿಂಗ್ ಸಾಫ್ಟ್‌ವೇರ್‌ಗಳನ್ನು ಬಳಸಿ ಫ್ರೀಡಂ ಟಿವಿಯ ಫೇಸ್ ಬುಕ್ ಹ್ಯಾಕ್ ಮಾಡಿಸಿ ಅಶ್ಲೀಲ ವಿಡಿಯೋ ಅಪ್‌ಲೋಡ್ ಮಾಡಿದ್ದ. ಅಲ್ಲದೆ ಫ್ರೀಡಂ ಟಿವಿಯ ಸರ್ವರ್ ವ್ಯವಸ್ಥೆ ವಿಫಲಗೊಳಿಸಲು ಪ್ರಯತ್ನಿಸಿದ್ದ.

Galaxytvkannada4@gmail.com ಎಂಬ ಇಮೇಲ್ ಐಡಿ ಮೂಲಕ ತಡರಾತ್ರಿಯಲ್ಲಿ ಸರ್ವರ್ ಪ್ರವೇಶಿಸಿ ಡಾಟಾ ನಾಶ ಹಾಗೂ ಟಿವಿ ವಾಹಿನಿಯ ಇಡೀ ಪ್ರಸಾರ ವ್ಯವಸ್ಥೆಯನ್ನು ತಡೆದು ನಿಲ್ಲಿಸಲು ಪ್ರಯತ್ನಿಸಿದ್ದ. ಕೂಡಲೇ ಎಚ್ಚೆತ್ತ ಫ್ರೀಡಂ ಟಿವಿಯ ಐಟಿ ಸಿಬ್ಬಂದಿ ಆತನ ಪ್ರಯತ್ನವನ್ನು ವಿಫಲಗೊಳಿಸಿ ಸೈಬರ್ ಠಾಣೆಯಲ್ಲಿ FIR ದಾಖಲಿಸಿದ್ದರು.

ಪ್ರಕರಣದ ಪ್ರಿಲಿಮಿನರಿ ಎನ್‌ಕ್ವೈರಿ ನಡೆಸಿದ ಎಸಿಪಿ ಹೇಮಂತ್ ಕುಮಾರ್, ಹಾಗೂ ಇನ್ಸ್‌ಪೆಕ್ಟರ್ ಸುರೇಶ್ ಅವರು ಐಟಿ ACT 2008 ಅಡಿ ಕೇಸ್ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಸಂತೋಷ್​​​​ನನ್ನು ಅರೆಸ್ಟ್ ಮಾಡಿದ್ದಾರೆ. ಈತನ ಜೊತೆ ಕೃತ್ಯದಲ್ಲಿ ಭಾಗಿಯಾದ ಇತರರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : http://ನ್ಯೂಸ್ ಚಾನಲ್ ಸರ್ವರ್​ಗಳಿಗೆ ಕನ್ನ – ವಂಚಕ ಸಂತೋಷ್ ಅರೆಸ್ಟ್!

Btv Kannada
Author: Btv Kannada

Leave a Comment

Read More