‘ನಾನು ಹೈದರಾಬಾದ್​ನವಳು ಎಂದ ರಶ್ಮಿಕಾ’ – ನ್ಯಾಷನಲ್ ಕ್ರಶ್ ಮೇಲೆ ಕನ್ನಡಿಗರು ಗರಂ!

ನಟಿ ರಶ್ಮಿಕಾ ಮಂದಣ್ಣ ಬಹುಬೇಡಿಕೆಯ ನಟಿಯರ ಲಿಸ್ಟ್‌ನಲ್ಲಿ ಒಬ್ಬರು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಆದರೆ ಕಿರಿಕ್ ಬ್ಯೂಟಿಗೆ ಟ್ರೋಲ್ ಕಾಟ ತಪ್ಪುವುದಿಲ್ಲ. ಇದೀಗ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ‘ನಾನು ಹೈದರಾಬಾದ್‌ನವಳು’ ಅಂತೇಳಿ ರಶ್ಮಿಕಾ ಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದಲ್ಲದೇ, ಟ್ರೋಲರ್ಸ್​ಗಳ ಬಾಯಿಗೆ ಆಹಾರವಾಗಿದ್ದಾರೆ.

ಹೌದು.. ಮುಂಬೈನಲ್ಲಿ ನಡೆದ ʻಛಾವಾʼ ಸಿನಿಮಾದ ಈವೆಂಟ್‌ನಲ್ಲಿ ರಶ್ಮಿಕಾ ಮಂದಣ್ಣ, “ನಾನು ಹೈದರಾಬಾದ್‌ನವಳು, ನಾನು ಇಲ್ಲಿಯವರೆಗೂ ಒಬ್ಬಂಟಿಯಾಗಿ ಬಂದಿದ್ದೇನೆ. ಈಗ ನಾನೂ ಕೂಡ ನಿಮ್ಮ ಕುಟುಂಬದ ಭಾಗ ಆಗಿದ್ದೇನೆ” ಎಂದು ಹೇಳಿದ್ದಾರೆ.

ರಶ್ಮಿಕಾ ಮಂದಣ್ಣ ಅವರ ಈ ಮಾತು ಕನ್ನಡಿಗರ ಕೋಪಕ್ಕೆ ಗುರಿಯಾಗಿದೆ. ಅಲ್ಲದೇ ತೀವ್ರ ವಿರೋಧ ವ್ಯಕ್ತವಾಗಿದೆ. ಇದಕ್ಕೆ ಕೆಲವರು, “ರಶ್ಮಿಕಾ ಕಾಲಿಗೆ ಬಲವಾದ ಪೆಟ್ಟು ಬಿದ್ದಿದರಿಂದ ತಲೆ ಡ್ಯಾಮೇಜ್ ಆಗಿ ಮೆಮೋರಿ ಲಾಸ್ ಆಗಿದೆ. ಹಾಗಾಗಿ ತನ್ನ ಹುಟ್ಟೂರನ್ನೇ ರಶ್ಮಿಕಾ ಮರೆತಿದ್ದಾರೆ. ಮೆಡಿಕಲ್ ಕಂಡಿಷನ್‌ ದೂಷಿಸಬೇಕಾಗಿದೆ” ಎಂದು ಕಮೆಂಟ್ ಮಾಡಿದ್ದಾರೆ.

“ರಶ್ಮಿಕಾರನ್ನ ನೋಡುತ್ತಿದ್ದರೆ, ದೀಪಿಕಾ ಪಡುಕೋಣೆ ಮತ್ತು ಶಿಲ್ಪಾ ಶೆಟ್ಟಿ ಮೇಲೆ ಗೌರವ ಹೆಚ್ಚಾಗುತ್ತಿದೆ. ಅವರು ಕರ್ನಾಟಕದವರು ಅಂತ ತುಂಬಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ನಿಮಗೆ ನಾಚಿಕೆಯಾಗ್ಬೇಕು ಅವರನ್ನು ನೋಡಿ ಕಲಿಯಿರಿ. ತಮ್ಮ ಊರನ್ನು ಮರೆತವರು ಉದ್ದಾರ ಆಗಿರುವ ಇತಿಹಾಸವಿಲ್ಲ. ರಶ್ಮಿಕಾ ಇದನ್ನು ನೆನಪಿಟ್ಟುಕೊಳ್ಳಿ. ಹಾಗಾದರೆ, ನೀವು ಕನ್ನಡವರು ಅಲ್ವಾ..? ಮುಂದೊಂದು ದಿನ‌ ನಾನು ಪಾಕಿಸ್ತಾನದವಳು ಅಂತಲೂ ರಶ್ಮಿಕಾ ಹೇಳುತ್ತಾರೆ ಅದರಲ್ಲಿ ಎರಡು ಮಾತಿಲ್ಲ” ಅಂತೆಲ್ಲಾ ರಶ್ಮಿಕಾರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ಸದ್ಯ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಕ್ಕಿ ಕೌಶಲ್ ನಟನೆಯ ಛಾವಾ ಸಿನಿಮಾ ಇಂದು ರಿಲೀಸ್ ಆಗಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ‌ ಹಿಟ್ ಮೇಲೆ‌ ಹಿಟ್ ಬಾರಿಸುತ್ತಿರುವ ರಶ್ಮಿಕಾ ‘ಛಾವಾ’ ಮೂಲಕ ಹೇಗೆ ಸೌಂಡ್ ಮಾಡಲಿದ್ದಾರೆ ಅನ್ನೋದನ್ನು ಕಾದು‌ನೋಡಬೇಕಿದೆ.

ಇದನ್ನೂ ಓದಿ : http://‘ನಾನು ಹೈದರಾಬಾದ್​ನವಳು ಎಂದ ರಶ್ಮಿಕಾ’ – ನ್ಯಾಷನಲ್ ಕ್ರಶ್ ಮೇಲೆ ಕನ್ನಡಿಗರು ಗರಂ!

Btv Kannada
Author: Btv Kannada

Leave a Comment

Read More