ಇಂದಿನಿಂದ ವುಮೆನ್ಸ್ ಪ್ರೀಮಿಯರ್ ಲೀಗ್.. ಮೊದಲ ಪಂದ್ಯದಲ್ಲಿ ಚಾಂಪಿಯನ್ RCBಗೆ ಗುಜರಾತ್ ಜೈಂಟ್ಸ್ ಸವಾಲು!

ಬಹುನಿರೀಕ್ಷಿತ ವುಮೆನ್ಸ್ ಪ್ರೀಮಿಯರ್ ಲೀಗ್ (WPL) ಸೀಸನ್-3 ಇಂದಿನಿಂದ (ಫೆ.14) ಶುರುವಾಗಲಿದೆ. ವಡೋದರಲ್ಲಿ ನಡೆಯಲಿರುವ ಈ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಈ ಬಾರಿಯ ಟೂರ್ನಿಯಲ್ಲೂ ಒಟ್ಟು 5 ತಂಡಗಳು ಕಣಕ್ಕಿಳಿಯಲಿದ್ದು, ಈ ತಂಡಗಳ ನಡುವಣ ಕದನಕ್ಕೆ ವೇದಿಕೆ ಸಿದ್ದವಾಗಿದೆ.

ಯಾವ ಚಾನೆಲ್​ನಲ್ಲಿ ನೇರ ಪ್ರಸಾರ? ವುಮೆನ್ಸ್ ಪ್ರೀಮಿಯರ್ ಲೀಗ್​ನ ಎಲ್ಲಾ ಪಂದ್ಯಗಳನ್ನು ಸ್ಪೋರ್ಟ್ಸ್​ 18 ಚಾನೆಲ್​ನಲ್ಲಿ ವೀಕ್ಷಿಸಬಹುದು. ಹಾಗೆಯೇ ಜಿಯೋ ಸಿನಿಮಾ ಆ್ಯಪ್ ಹಾಗೂ ವೆಬ್​ಸೈಟ್​ನಲ್ಲೂ ಲೈವ್ ಸ್ಟ್ರೀಮಿಂಗ್ ಇರಲಿದೆ. ಇನ್ನು ಈ ಟೂರ್ನಿಯ ಎಲ್ಲಾ ಪಂದ್ಯಗಳು ರಾತ್ರಿ 7.30 ಕ್ಕೆ ಶುರುವಾಗಲಿದ್ದು, 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.

ವೇಳಾಪಟ್ಟಿ ವಿವಿರ ಇಂತಿದೆ :

ಫೆ.14: ರಾಯಲ್ ಚಾಲೆಂಜರ್ಸ್ ಬೆಂಗಳೂರು VS ಗುಜರಾತ್‌ ಜೈಂಟ್ಸ್ (ವಡೋದರಾ)

ಫೆ.15: ಮುಂಬೈ ಇಂಡಿಯನ್ಸ್ VS ಡೆಲ್ಲಿ ಕ್ಯಾಪಿಟಲ್ಸ್ (ವಡೋದರಾ)

ಫೆ.16: ಗುಜರಾತ್‌ ಜೈಂಟ್ಸ್ Vs ಯುಪಿ ವಾರಿಯರ್ಸ್‌ (ವಡೋದರಾ)

ಫೆ.17: ಡೆಲ್ಲಿ ಕ್ಯಾಪಿಟಲ್ಸ್ Vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ವಡೋದರಾ)

ಫೆ.18: ಗುಜರಾತ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್ (ವಡೋದರಾ)

ಫೆ.19: ಯುಪಿ ವಾರಿಯರ್ಸ್ Vs ಡೆಲ್ಲಿ ಕ್ಯಾಪಿಟಲ್ಸ್ (ವಡೋದರಾ)

ಫೆ.21: ರಾಯಲ್ ಚಾಲೆಂಜರ್ಸ್ ಬೆಂಗಳೂರು VS ಮುಂಬೈ ಇಂಡಿಯನ್ಸ್ (ಬೆಂಗಳೂರು)

ಫೆ.22: ಡೆಲ್ಲಿ ಕ್ಯಾಪಿಟಲ್ಸ್ VS ಯುಪಿ ವಾರಿಯರ್ಸ್‌ (ಬೆಂಗಳೂರು)

ಫೆ.24: ರಾಯಲ್ ಚಾಲೆಂಜರ್ಸ್ ಬೆಂಗಳೂರು VS ಯುಪಿ ವಾರಿಯರ್ಸ್ (ಬೆಂಗಳೂರು)

ಫೆ.25: ಡೆಲ್ಲಿ ಕ್ಯಾಪಿಟಲ್ಸ್ Vs ಗುಜರಾತ್ ಜೈಂಟ್ಸ್ (ಬೆಂಗಳೂರು)

ಫೆ.26: ಮುಂಬೈ ಇಂಡಿಯನ್ಸ್ VS ಯುಪಿ ವಾರಿಯರ್ಸ್ (ಬೆಂಗಳೂರು)

ಫೆ.27: ರಾಯಲ್ ಚಾಲೆಂಜರ್ಸ್ ಬೆಂಗಳೂರು VS ಗುಜರಾತ್ ಜೈಂಟ್ಸ್ (ಬೆಂಗಳೂರು)

ಫೆ.28: ಡೆಲ್ಲಿ ಕ್ಯಾಪಿಟಲ್ಸ್ VS ಮುಂಬೈ ಇಂಡಿಯನ್ಸ್ (ಬೆಂಗಳೂರು)

ಮಾ.1: ಡೆಲ್ಲಿ ಕ್ಯಾಪಿಟಲ್ಸ್ VS ರಾಯಲ್ ಚಾಲೆಂಜರ್ಸ್ ಬೆಂಗಳೂರು (ಬೆಂಗಳೂರು)

ಮಾ.3: ಗುಜರಾತ್ ಜೈಂಟ್ಸ್ Vs ಯುಪಿ ವಾರಿಯರ್ಸ್‌ (ಲಕ್ಷ್ಮೀ)

ಮಾ.6: ಗುಜರಾತ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್‌ (ಲಕ್ಷ್ಮಿ)

ಮಾ.7: ಗುಜರಾತ್ ಜೈಂಟ್ಸ್ Vs ಡೆಲ್ಲಿ ಕ್ಯಾಪಿಟಲ್ಸ್ (ಲಕ್ಷ್ಮೀ)

ಮಾ.8: ರಾಯಲ್ ಚಾಲೆಂಜರ್ಸ್ ಬೆಂಗಳೂರು VS ಯುಪಿ ವಾರಿಯರ್ಸ್‌ (ಲಕ್ಷ್ಮೀ)

ಮಾ.10: ಗುಜರಾತ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್‌ (ಮುಂಬೈ)

ಮಾ.11: ಮುಂಬೈ ಇಂಡಿಯನ್ಸ್ VS ರಾಯಲ್ ಚಾಲೆಂಜರ್ಸ್ ಬೆಂಗಳೂರು (ಮುಂಬೈ)

ಮಾ.13: ಎಲಿಮಿನೇಟ‌ರ್ (ಮುಂಬೈ)

ಮಾ.15: ಫೈನಲ್ಸ್ (ಮುಂಬೈ)

Btv Kannada
Author: Btv Kannada

Leave a Comment

Read More