Download Our App

Follow us

Home » ಅಪರಾಧ » ಭೂ ವಿಜ್ಞಾನಿ ಕೊಲೆ ಪ್ರಕರಣ : ನ್ಯಾಯಾಲಯಕ್ಕೆ 600 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ..!

ಭೂ ವಿಜ್ಞಾನಿ ಕೊಲೆ ಪ್ರಕರಣ : ನ್ಯಾಯಾಲಯಕ್ಕೆ 600 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ..!

ಬೆಂಗಳೂರು : ಬೆಂಗಳೂರು ನಗರ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಅಂತಿಮ ಹಂತಕ್ಕೆ ಬಂದಿದೆ. ಆರೋಪಿ ಕಿರಣ್ ವಿರುದ್ದ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ತಲಘಟ್ಟಪುರ ಇನ್ಸ್ ಪೆಕ್ಟರ್ ಎನ್.ಜಗದೀಶ್ ನೇತೃತ್ವದಲ್ಲಿ ತನಿಖೆ ನಡೆದಿದ್ದು, 2ನೇ ಎಸಿಎಂಎಂ ನ್ಯಾಯಾಲಯಕ್ಕೆ 600 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಚಾರ್ಜ್ ಶೀಟ್​ನಲ್ಲಿ ಆರೋಪಿ ಕಿರಣ್ ಹೇಳಿಕೆ, 70 ಮಂದಿ ಸಾಕ್ಷಿದಾರರ ಹೇಳಿಕೆ, ಸಿಸಿಟಿವಿ ಕ್ಯಾಮೆರಾ ದೃಶ್ಯಗಳು, ಡಿಜಿಟಲ್ ಸಾಕ್ಷ್ಯಾಧಾರಗಳ ಉಲ್ಲೇಖವಿದೆ.

ನ.4ರ ರಾತ್ರಿ ದೊಡ್ಡಕಲ್ಲಸಂದ್ರದ ಕುವೆಂಪು ನಗರದಲ್ಲಿದ್ದ ಪ್ರತಿಮಾ ಮನೆಗೆ ನುಗ್ಗಿದ್ದ ಆರೋಪಿ, ಕೊಲೆ ಮಾಡಿ ಪರಾರಿಯಾಗಿದ್ದ. ಈ ಕೊಲೆ ಪ್ರಕರಣ ಸುಬ್ರಮಣ್ಯಪುರ ಠಾಣೆಯಲ್ಲಿ ದಾಖಲಾಗಿತ್ತು.

ಹಂತಕ ಕಿರಣ್ ಅಧಿಕಾರಿ ಪ್ರತಿಮಾರನ್ನು 8 ನಿಮಿಷದಲ್ಲಿ ಕೊಲೆ ಮಾಡಿದ್ದ. ಮನೆ ಡೋರ್ ಓಪನ್ ಮಾಡುತ್ತಿದ್ದಂತೆ ಹಿಂಬದಿಯಿಂದ ಅಟ್ಯಾಕ್ ಮಾಡಿ ಮೈಮೇಲಿದ್ದ ದುಪ್ಪಟದಿಂದ ಕತ್ತು ಬಿಗಿದು ನಂತರ ಚಾಕುವಿನಿಂದ ಕತ್ತುಕೊಯ್ದು ಕೊಲೆ ಮಾಡಿದ್ದ. ಮಾತ್ರವಲ್ಲ ಮೈಮೇಲಿದ್ದ ಬಳೆ, ಬ್ರಾಸ್ಲೈಟ್ ಮೂಗುತಿ, ಕಬೋರ್ಡ್ ನಲ್ಲಿದ್ದ ಐದು ಲಕ್ಷ ರೂ, ಹಣದೊಂದಿಗೆ ದೋಚಿ ಪರಾರಿಯಾಗಿದ್ದ.

ಸ್ನೇಹಿತನಿಗೆ ಹಣ ಕೊಟ್ಟು ಮತ್ತಿಬ್ಬರ ಜೊತೆ ಮಲೈಮಹದೇಶ್ವರ ಬೆಟ್ಟಕ್ಕೆ ಪರಾರಿಯಾಗಿದ್ದ, ಲೊಕೇಶನ್ ಟ್ರ್ಯಾಪ್ ಮೂಲಕ ಆರೋಪಿಯನ್ನು ಬಂಧನ ಮಾಡಲಾಗಿತ್ತು. ಈ ಎಲ್ಲಾ ಮಾಹಿತಿಯನ್ನು ಪೊಲೀಸರು ಸಲ್ಲಿಸಿರುವ 600 ಪುಟಗಳ ಚಾರ್ಜ್ ಶೀಟ್​ನಲ್ಲಿ ಉಲ್ಲೇಖ ಮಾಡಿದ್ದಾರೆ.

ಇದನ್ನೂ ಓದಿ : ಬೆಂಗಳೂರು : ರಸ್ತೆ ಬದಿಯಲ್ಲಿ ತರಕಾರಿ ಮಾರುವವರ ಮೇಲೆ ಟ್ರಾಫಿಕ್ ಪೊಲೀಸ್ ದರ್ಪ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here