Download Our App

Follow us

Home » ರಾಜ್ಯ » ದೇಶದಲ್ಲಿಂದು 3ನೇ ಹಂತದ ಮತದಾನ – ಯಾವ್ಯಾವ ರಾಜ್ಯ? ಎಷ್ಟು ಕ್ಷೇತ್ರಗಳಲ್ಲಿಂದು ಚುನಾವಣೆ ನಡೆಯುತ್ತಿದೆ ಗೊತ್ತಾ?

ದೇಶದಲ್ಲಿಂದು 3ನೇ ಹಂತದ ಮತದಾನ – ಯಾವ್ಯಾವ ರಾಜ್ಯ? ಎಷ್ಟು ಕ್ಷೇತ್ರಗಳಲ್ಲಿಂದು ಚುನಾವಣೆ ನಡೆಯುತ್ತಿದೆ ಗೊತ್ತಾ?

ದೇಶದಲ್ಲಿಂದು 3ನೇ ಹಂತದ ಮತದಾನ ನಡೆಯುತ್ತಿದೆ. 12 ರಾಜ್ಯಗಳ 92 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಇಂದು ನಡೆಯುತ್ತಿರುವ ಚುನಾವಣೆಯಲ್ಲಿ 120 ಮಹಿಳೆಯರು ಸೇರಿದಂತೆ 1,300ಕ್ಕೂ ಹೆಚ್ಚು ಅಭ್ಯರ್ಥಿ ಸ್ಪರ್ಧಿಸುತ್ತಿದ್ದಾರೆ.

ಗುಜರಾತ್​ನ 26 ಕ್ಷೇತ್ರದಲ್ಲಿ ಇಂದು ಮತದಾನ ನಡೆದರೆ, ಕರ್ನಾಟಕದ 14, ಮಹಾರಾಷ್ಟ್ರದ 11, ಉತ್ತರ ಪ್ರದೇಶ 10, ಮಧ್ಯಪ್ರದೇಶ 8, ಛತ್ತೀಸ್​ಗಢ 7, ಬಿಹಾರ 5, ಅಸ್ಸಾಂ 4, ಪಶ್ಚಿಮ ಬಂಗಾಳ 4, ಗೋವಾ 2 ಮತ್ತು ದಾದ್ರಾ, ನಗರ್​ ಹಾವೆಲಿ ಮತ್ತು ದಿಯು ದಾಮನ್​ನಲ್ಲಿ 2 ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದೆ.

ದೇಶದ ಮೂರನೇ ಹಂತದ ಮತದಾನದಲ್ಲಿ ದಿಗ್ಗಜರು ಸ್ಪರ್ಧಿಸುತ್ತಿದ್ದಾರೆ. ಕೇಂದ್ರ ಸಚಿವ ಅಮಿತ್​ ಶಾ, ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ನತ್ತು ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ್​ ಜೋಶಿ ಸ್ಪರ್ಧಿಸುತ್ತಿದ್ದಾರೆ. ಇದಲ್ಲದೆ, ಶರದ್​ ಪವಾರ್​ ಮಗಳು ಸುಪ್ರಿಯಾ ಸುಳೆ, ಅಜಿತ್​ ಪವಾರ್​ ಪತ್ನಿ ಸುನೇತ್ರಾ ಪವಾರ್​ ಈ ಬಾರಿ ಚುನಾವಣೆಯಲ್ಲಿ ಪೈಪೋಟಿ ನೀಡುತ್ತಿದ್ದಾರೆ.

ಇನ್ನು ಸಮಾಜವಾದಿ ಪಕ್ಷದ ಮತ್ತು ಮಾಜಿ ಸಿಎಂ ಅಖಿಲೇಶ್ ಯಾದವ್​ ಪತ್ನಿ ಡಿಂಪಲ್​ ಯಾದವ್​, ಮಾಜಿ ಸಂಸದ ಅಕ್ಷಯ್​ ಯಾದವ್​, ರಾಮ್​ ಗೋಪಾಲ್​ ಯಾದವ್​ ಪುತ್ರ ಆದಿತ್ಯ ಯಾದವ್​, ಶಿಪಪಾಲ್​ ಸಿಂಗ್​ ಅವರ ಪುತ್ರ ಕೂಡ ಸ್ಫರ್ಧಿಸುತ್ತಿದ್ದಾರೆ. ಮೇ 13 ರಂದು ಮುಂದಿನ ಹಂತದ ಚುನಾವಣೆ ನಡೆಯಲಿದ್ದು, ಜೂನ್ 1 ರಂದು ಕೊನೆಯ ಹಂತದ ಚುನಾವಣೆ ಮುಗಿದ ನಂತರ ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ : ಇಂದು ರಾಜ್ಯದ 14 ಕ್ಷೇತ್ರಗಳಲ್ಲಿ 2ನೇ ಹಂತದ ವೋಟಿಂಗ್ – ಎಲ್ಲೆಲ್ಲಿ ಮತದಾನ? ಸಮಯ ಏನು? ಇಲ್ಲಿದೆ ವಿವರ..!

Leave a Comment

DG Ad

RELATED LATEST NEWS

Top Headlines

ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯ ಹತ್ಯೆ ಕೇಸ್​ – ಭೋಪಾಲ್​ನಲ್ಲಿ ಆರೋಪಿ ಅಭಿಷೇಕ್​ ಅರೆಸ್ಟ್​..!

ಬೆಂಗಳೂರು : ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಅಭಿಷೇಕ್​ನನ್ನು ಇದೀಗ ಬೆಂಗಳೂರು ಪೊಲೀಸರು ಭೂಪಾಲ್​ನಲ್ಲಿ ಬಂಧಿಸಿದ್ದಾರೆ. ಜು.23 ರಂದು ಕೋರಮಂಗಲದ

Live Cricket

Add Your Heading Text Here