Download Our App

Follow us

Home » ಅಪರಾಧ » 35 ಸಾವಿರ ಲಂಚಕ್ಕೆ ಬೇಡಿಕೆ – ಇಬ್ಬರು ಬಿಬಿಎಂಪಿ ಅಧಿಕಾರಿಗಳು ಲೋಕಾಯುಕ್ತ ಬಲೆಗೆ..!

35 ಸಾವಿರ ಲಂಚಕ್ಕೆ ಬೇಡಿಕೆ – ಇಬ್ಬರು ಬಿಬಿಎಂಪಿ ಅಧಿಕಾರಿಗಳು ಲೋಕಾಯುಕ್ತ ಬಲೆಗೆ..!

ಬೆಂಗಳೂರು : ಎಲೆಕ್ಟ್ರಿಕ್ ಕೇಬಲ್ ಅಳವಡಿಸಲು ಹಾಗೂ ರಸ್ತೆ ಅಗೆಯಲು ಅನುಮತಿ ನೀಡಲು 25 ಸಾವಿರ ಲಂಚ ಪಡೆಯುತ್ತಿದ್ದ ವೇಳೆಯೇ ಇಬ್ಬರು ಬಿಬಿಎಂಪಿ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಬಿಬಿಎಂಪಿ ಯ ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದು, ವಿಜಯನಗರದ ಪ್ರಶಾಂತ ನಗರ ವಾರ್ಡ್‌ನ ಬಿಬಿಎಂಪಿ ಅಸಿಸ್ಟೆಂಟ್ ಇಂಜಿನಿಯರ್ ಪ್ರವೀಣ್ ಬಿರಾದಾರ ಹಾಗೂ ಇದೇ ವಾರ್ಡ್‌ನ ವರ್ಕ್‌ ಇನ್ಸ್‌ಪೆಕ್ಟರ್ ಸುರೇಶ್ ಲಂಚ ಪಡೆಯುತ್ತಿರುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಎಲೆಕ್ಟ್ರಿಕ್ ಕೇಬಲ್ ಅಳವಡಿಸುವ ಮತ್ತು ರಸ್ತೆ ಅಗೆಯಲು ಅನುಮತಿ ನೀಡುವ ಸಲುವಾಗಿ 25 ಸಾವಿರ ರೂ. ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಲಾಕ್ ಆಗಿದ್ದಾರೆ. ಇನ್ನು ಆರೋಪಿಗಳು ಖಾಸಗಿ ಸಂಸ್ಥೆಯೊಂದರಿಂದ ಒಟ್ಟು 35 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ.

ದೂರುದಾರ ಖಾಸಗಿ ಫೀಲ್ಡ್ ಇಂಜಿನಿಯರ್ ರಘುನಂದನ್ ಅವರಿಗೆ 35 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಉಚಿತವಾಗಿ ಮಾಡಿಕೊಡಬೇಕಾದ ಕೆಲಸಕ್ಕೆ ಸರ್ಕಾರಿ ಶುಲ್ಕ ಬಿಟ್ಟು ಬೇರೇನೂ ಪಾವತಿಸಿಕೊಳ್ಳುವಂತಿಲ್ಲ. ಆದರೆ, ಈ ಇಬ್ಬರು ಅಧಿಕಾರಿಗಳು ನಿಮಗೆ ಅನುಮತಿ ಬೇಕಾದಲ್ಲಿ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು.

ಈ ಬಗ್ಗೆ ಲೋಕಾಯುಕ್ತ ಇಲಾಖೆಗೆ ರಘುನಂದನ್ ದೂರು ನೀಡಿದ್ದರು. ಲೋಕಾಯುಕ್ತ ಡಿವೈಎಸ್ ಪಿ ಬಸವರಾಜ್ ಮಗದುಂ ತಂಡ ಭರ್ಜರಿ ಕಾರ್ಯಚರಣೆ ನಡೆಸಿ ಇಬ್ಬರನ್ನೂ ಹಣ ಪಡೆಯುವ ವೇಳೆಯೇ ರೆಡ್‌ ಹ್ಯಾಂಡ್‌ ವಶಕ್ಕೆ ಪಡೆದಿದ್ದಾರೆ. ಇಬ್ಬರೂ ಆರೋಪಿಗಳ ವಶಕ್ಕೆ ಪಡೆದ ಲೋಕಾಯುಕ್ತ ಅಧಿಕಾರಿಗಳು ಮತ್ತಷ್ಟು ಪ್ರಕರಣಗಳನ್ನು ನಡೆಸಿರುವ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ : ರಾಮ ಪ್ರತಿಷ್ಠಾಪನೆ ದಿನ ರಜೆ ಕೊಡಿ – ಸರ್ಕಾರಕ್ಕೆ ಬೆಂಗಳೂರು ವಕೀಲರ ಸಂಘ ಮನವಿ..!

Leave a Comment

DG Ad

RELATED LATEST NEWS

Top Headlines

ಹರ್ಮನ್ ಪಡೆ ಅಬ್ಬರಕ್ಕೆ ಪಾಕ್ ಧೂಳಿಪಟ – ಏಷ್ಯಾಕಪ್‌ನಲ್ಲಿ ಭಾರತಕ್ಕೆ ಗೆಲುವಿನ ಶುಭಾರಂಭ..!

ದಂಬುಲ್ಲಾ : ಶ್ರೀಲಂಕಾದ ರಂಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಭಾರತ-ಪಾಕಿಸ್ತಾನ ಮಹಿಳಾ ತಂಡಗಳ ಏಷ್ಯಾಕಪ್ ಪಂದ್ಯದಲ್ಲಿ ಹರ್ಮನ್​ಪ್ರೀತ್ ಕೌರ್ ನಾಯಕತ್ವದ ಟೀಂ ಇಂಡಿಯಾ, ಪಾಕ್

Live Cricket

Add Your Heading Text Here