Download Our App

Follow us

Home » ರಾಜ್ಯ » ರಾಜ್ಯದಲ್ಲಿ ಮೊದಲ ಹಂತದ ಮತದಾನಕ್ಕೆ ಕೇವಲ 24 ಗಂಟೆ ಬಾಕಿ – ಎಲ್ಲೆಲ್ಲಿ ಮತದಾನ, ಮತದಾರರೆಷ್ಟು? ಇಲ್ಲಿದೆ ವಿವರ..!

ರಾಜ್ಯದಲ್ಲಿ ಮೊದಲ ಹಂತದ ಮತದಾನಕ್ಕೆ ಕೇವಲ 24 ಗಂಟೆ ಬಾಕಿ – ಎಲ್ಲೆಲ್ಲಿ ಮತದಾನ, ಮತದಾರರೆಷ್ಟು? ಇಲ್ಲಿದೆ ವಿವರ..!

ಬೆಂಗಳೂರು : ಲೋಕಸಭೆ ಚುನಾವಣೆ – ರಾಜ್ಯದಲ್ಲಿ ಮೊದಲ ಹಂತದ ಮತದಾನಕ್ಕೆ ಕೇವಲ 24 ಗಂಟೆ ಬಾಕಿ ಇದೆ. ಶುಕ್ರವಾರ ಬೆಳಗ್ಗೆ, ಅಂದರೆ ನಾಳೆ ಈ ಹೊತ್ತಿಗೆ ಮತದಾನ ಆರಂಭವಾಗಿರಲಿದೆ. ರಾಜ್ಯದಲ್ಲಿ ಮೊದಲ ಹಂತದಲ್ಲಿ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಇದಕ್ಕಾಗಿ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಬಹಿರಂಗ ಪ್ರಚಾರಕ್ಕೆ ಬುಧವಾರ ಸಂಜೆಯೇ ತೆರೆ ಬಿದ್ದಿದೆ. ಇಂದು ಮನೆ ಮನೆ ಪ್ರಚಾರ ನಡೆಯಲಿದೆ.

ಬೆಂಗಳೂರು ಸೇರಿ ಹಲವು ಕ್ಷೇತ್ರಗಳಲ್ಲಿ ನಿನ್ನೆ ಸಂಜೆಯಿಂದಲೇ ಸೆಕ್ಷನ್​ 144 ಜಾರಿ ಆಗಿದೆ. ಮದ್ಯದಂಗಡಿಗಳನ್ನೂ ಕೂಡ ಬಂದ್ ಮಾಡಲಾಗಿದೆ. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಮತದಾನಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ.

14ಕ್ಷೇತ್ರಗಳಲ್ಲಿ ಮತದಾರರ ಸಂಖ್ಯೆ ಎಷ್ಟಿದೆ? 14 ಕ್ಷೇತ್ರಗಳಲ್ಲಿ 30,602 ಮತಗಟ್ಟೆ ಇರಲಿದ್ದು, ಒಟ್ಟು 1.40 ಲಕ್ಷ ಸಿಬ್ಬಂದಿ ಇರಲಿದ್ದಾರೆ. ನಾಳೆ 2.88 ಕೋಟಿ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ವೋಟರ್​​ ಐಡಿ, ಆದಾರ್​​, ನರೇಗಾ ಕಾರ್ಡ್​, ಬ್ಯಾಂಕ್​​ ಅಕೌಂಟ್​ ಫೋಟೋ ಸಹಿತ ಪಾಸ್ ಬುಕ್​​​, ಡಿಎಲ್​​, ಪಾನ್​​, ಪಾಸ್​ಪೋರ್ಟ್​ ಯಾವುದಾದ್ರೂ ಒಂದನ್ನು ತೋರಿಸಿ ಮತ ಹಾಕಬಹುದಾಗಿದೆ.

ಮತದಾನದ ಸಮಯ – ನಾಳೆ 14 ಕ್ಷೇತ್ರದಲ್ಲಿ ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೂ ಮತದಾನ ನಡೆಯಲಿದೆ. 6 ಗಂಟೆ ನಂತತರ ಮತಗಟ್ಟಿಗೆ ನೋ ಎಂಟ್ರಿ ಬೋರ್ಡ್ ಹಾಕಲಾಗುತ್ತದೆ.

ಎಲ್ಲೆಲ್ಲಿ ಮತದಾನ?

 1. ಬೆಂಗಳೂರು ಕೇಂದ್ರ
 2. ಬೆಂಗಳೂರು ದಕ್ಷಿಣ
 3. ಬೆಂಗಳೂರು ಉತ್ತರ
 4. ಬೆಂಗಳೂರು ಗ್ರಾಮಾಂತರ
 5. ಕೋಲಾರ
 6. ತುಮಕೂರು
 7. ಮೈಸೂರು-ಕೊಡಗು
 8. ಚಾಮರಾಜನಗರ
 9. ದಕ್ಷಿಣ ಕನ್ನಡ
 10. ಚಿಕ್ಕಮಗಳೂರು-ಉಡುಪಿ
 11. ಹಾಸನ
 12. ಮಂಡ್ಯ
 13. ಚಿಕ್ಕಬಳ್ಳಾಪುರ
 14. ಚಿತ್ರದುರ್ಗ

Leave a Comment

RELATED LATEST NEWS

Top Headlines

ಪಠಾಣ್​ ಸಿನಿಮಾಗೆ ಸೆಡ್ಡು ಹೊಡೆದ ಕೆಡಿ : ದುಬಾರಿ ಮೊತ್ತಕ್ಕೆ ಚಿತ್ರದ ಆಡಿಯೋ ರೈಟ್ಸ್ ಸೇಲ್..!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾದ ರಿಲೀಸ್ ಡೇಟ್​​ನ್ನು ಇತ್ತೀಚೆಗಷ್ಟೆ ಘೋಷಿಸಲಾಗಿದೆ. ಅದರ ಬೆನ್ನಲೇ ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದ ಬಿಡುಗಡೆ ಬಗ್ಗೆ

Live Cricket

Add Your Heading Text Here