ಬೆಂಗಳೂರು : ಡಿ.ಕೆ. ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಜ್ಜಾಗುತ್ತಿದ್ದು, ಈ ನಡುವೆ ರಾಜ್ಯ ಕಾಂಗ್ರೆಸ್ ವಲಯದಲ್ಲಿ ಹೊಸ ಸಂಪುಟ ರಚನೆ ಕುರಿತು ಸಂಚಲನ ಸೃಷ್ಟಿಯಾಗಿದೆ. ಸಿಎಂ ಗದ್ದುಗೆ ಸಿಕ್ಕ ಬೆನ್ನಲ್ಲೇ ಈಗ ಹೈಕಮಾಂಡ್ ಹಂತದಲ್ಲಿ ಹೈವೋಲ್ಟೇಜ್ ಕಸರತ್ತು ಶುರುವಾಗಿದೆ.
ಈ ಬಾರಿ ಸಿದ್ದರಾಮಯ್ಯ ನೇತೃತ್ವದ ಹಳೇ ಸಂಪುಟದಲ್ಲಿದ್ದ ಬರೋಬ್ಬರಿ 15ಕ್ಕೂ ಹೆಚ್ಚು ಸಚಿವರಿಗೆ ಕೊಕ್ ಕೊಡುವ ಸಾಧ್ಯತೆಯಿದೆ. ಹೈಕಮಾಂಡ್ ಈ ಬಾರಿ ಹಳಬರನ್ನ ಕೈಬಿಟ್ಟು ಹೊಸಬರಿಗೆ ಮಣೆ ಹಾಕಲು ಮಾಸ್ಟರ್ ಪ್ಲಾನ್ ಮಾಡಿದೆ.
ಮಂತ್ರಿ ಸ್ಥಾನಕ್ಕೆ ಹೈಕಮಾಂಡ್ ಮೂರು ಪಾರ್ಮುಲಾ ರಚಿಸಿದ್ದು, ಅದರಂತೆ 2 ಅಥವಾ 3 ಡಿಸಿಎಂ ಹುದ್ದೆ, ಅನುಭವಿಗಳು ಮತ್ತು ಹೊಸಬರನ್ನೊಳಗೊಂಡ ಸಮ್ಮಿಶ್ರ ಸಂಪುಟ ರಚಿಸಲಿದೆ. ಈ ಹಿನ್ನೆಲೆ ದೆಹಲಿಯಲ್ಲಿಯೇ ತೀವ್ರ ಕಸರತ್ತು ನಡೆದಿದ್ದು, ಪಟ್ಟಿ ಬಹುತೇಕ ಫೈನಲ್ ಆಗಿದೆ ಎನ್ನಲಾಗುತ್ತಿದೆ.
ಸಿಎಂ ಸ್ಥಾನದ ಅಧಿಕಾರ ಹಂಚಿಕೆ ನಿರೀಕ್ಷಿಸಿದ್ದಕ್ಕಿಂತ ಸುಗಮವಾಗಿ ಆಗಿದೆ. ಆದರೆ ಉಪಮುಖ್ಯಮಂತ್ರಿಗಳು ಸೇರಿದಂತೆ ಸಚಿವ ಸಂಪುಟ ರಚನೆ ಸವಾಲಾಗಿದ್ದು, ಸಿದ್ಧರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ 15ಕ್ಕೂ ಹೆಚ್ಚು ಮಂದಿ ಸ್ಥಾನ ಕಳೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಅಷ್ಟೇ ಸಂಖ್ಯೆಯಲ್ಲಿ ಹೊಸಮುಖಗಳನ್ನು ಕ್ಯಾಬಿನೆಟ್ಗೆ ಸೇರಿಸಿಕೊಳ್ಳುವ ಉದ್ದೇಶವಿದೆ.
ಸಂಭಾವ್ಯ ಹೊಸ ಸಚಿವರು ಯಾರು?
ಡಾ. ಯತೀಂದ್ರ

ಯು.ಟಿ ಖಾದರ್

ಲಕ್ಷ್ಮಣ್ ಸವದಿ

ಬಿ.ಕೆ. ಸಂಗಮೇಶ್ವರ್

ಕೆ.ಎಂ ಶಿವಲಿಂಗೇಗೌಡ

ಎ.ಎಸ್ ಪೊನ್ನಣ್ಣ

ಶರತ್ ಬಚ್ಚೇಗೌಡ

ಬೇಳೂರು ಗೋಪಾಲಕೃಷ್ಣ

ಎನ್. ನಾರಾಯಣಸ್ವಾಮಿ

ಸಲೀಂ ಅಹ್ಮದ್

ಬಸವನಗೌಡ ಬಾದರ್ಲಿ

ಎನ್. ಎ ಹ್ಯಾರಿಸ್

ಟಿ. ರಘುಮೂರ್ತಿ

ಮಾಗಡಿ ಬಾಲಕೃಷ್ಣ

ನರೇಂದ್ರಸ್ವಾಮಿ

ರೂಪಕಲಾ ಶಶಿಧರ್

ನಯನಾ ಮೋಟಮ್ಮ

ರಾಘವೇಂದ್ರ ಹಿಟ್ನಾಳ್

ಎ.ಆರ್ ಕೃಷ್ಣಮೂರ್ತಿ

ಇದನ್ನೂ ಓದಿ : ಉಪಮುಖ್ಯಮಂತ್ರಿ ಸ್ಥಾನಕ್ಕೆ ಇನ್ನೂ ಯಾವುದೇ ಪ್ರಪೋಜಲ್ ಬಂದಿಲ್ಲ – ಮಲ್ಲಿಕಾರ್ಜುನ ಖರ್ಗೆ!









