Download Our App

Follow us

Home » ಸಿನಿಮಾ » ರಾಜ್​​ಕುಮಾರ್​​​ ಫ್ಯಾಮಿಲಿಯಲ್ಲಿ ಡಿವೋರ್ಸ್​ ಬಿರುಗಾಳಿ – ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಯುವರಾಜ್​​ಕುಮಾರ್..!

ರಾಜ್​​ಕುಮಾರ್​​​ ಫ್ಯಾಮಿಲಿಯಲ್ಲಿ ಡಿವೋರ್ಸ್​ ಬಿರುಗಾಳಿ – ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಯುವರಾಜ್​​ಕುಮಾರ್..!

ಬೆಂಗಳೂರು : ಚಂದನ್ ಶೆಟ್ಟಿ – ನಿವೇದಿತಾ ಗೌಡ ಡಿವೋರ್ಸ್ ವಿಚಾರ​ ಸುದ್ದಿಯಲ್ಲಿರುವಾಗಲೇ ಇದೀಗ ಸ್ಯಾಂಡಲ್​​ವುಡ್​​ನಲ್ಲಿ ಮತ್ತೊಂದು ಡಿವೋರ್ಸ್ ಸದ್ದು ಮಾಡುತ್ತಿದೆ. ರಾಜ್​​ಕುಮಾರ್​​​ ಫ್ಯಾಮಿಲಿಯಲ್ಲಿ ಡಿವೋರ್ಸ್​ ಬಿರುಗಾಳಿ ಎದ್ದಿದ್ದು, ರಾಘವೇಂದ್ರ ರಾಜ್​ಕುಮಾರ್​​ ಪುತ್ರ ಯುವರಾಜ್​​ಕುಮಾರ್​ ಡಿವೋರ್ಸ್​ಗೆ​ ಅರ್ಜಿ ಸಲ್ಲಿಸಿದ್ದಾರೆ.

ಕಳೆದ ತಿಂಗಳು 6ರಂದು ಯುವ ರಾಜ್​​ಕುಮಾರ್ ಡಿವೋರ್ಸ್ ಅರ್ಜಿ ಸಲ್ಲಿಸಿದ್ದರು. ಯುವ ರಾಜ್​ಕುಮಾರ್​​ ಪತ್ನಿ ಶ್ರೀದೇವಿ ವಿರುದ್ಧ ಕೋರ್ಟ್​ ಮೊರೆ ಹೋಗಿದ್ದು, ಫ್ಯಾಮಿಲಿ ಕೋರ್ಟ್​ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಯುವ ರಾಜ್​ಕುಮಾರ್ 4 ವರ್ಷಗಳ ಹಿಂದೆ ಮೈಸೂರು ಮೂಲದ ಶ್ರೀದೇವಿ ಜೊತೆ ವಿವಾಹವಾಗಿದ್ದರು. ಕಳೆದ 6 ತಿಂಗಳಿನಿಂದ ಯುವರಾಜ್​​​-ಶ್ರೀದೇವಿ ಬೇರೆಯಾಗಿದ್ದು, ಸದ್ಯ ಯುವರಾಜ್​ಕುಮಾರ್​ ಪತ್ನಿ ಶ್ರೀದೇವಿ ವಿದೇಶದಲ್ಲಿದ್ದಾರೆ.

ಉನ್ನತ ವ್ಯಾಸಂಗಕ್ಕಾಗಿ ಶ್ರೀದೇವಿ ಆಕ್ಸ್​ಫರ್ಡ್​ ವಿವಿಗೆ ಸೇರಿದ್ದು, ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈಗಾಗಲೇ ಫ್ಯಾಮಿಲಿ ಕೋರ್ಟ್ ಶ್ರೀದೇವಿಗೆ ನೋಟಿಸ್​ ನೀಡಿದ್ದು, 2019ರಲ್ಲಿ ಮೈಸೂರಿನಲ್ಲಿ ಯುವರಾಜ್​ಕುಮಾರ್​​-ಶ್ರೀದೇವಿ ವಿವಾಹವಾಗಿತ್ತು. ಇದೀಗ ದಂಪತಿ ಸೋಷಿಯಲ್​ ಮೀಡಿಯಾದಲ್ಲಿ ಅನ್​ಫಾಲೋ ಮಾಡಿದ್ದಾರೆ.

ಇದನ್ನೂ ಓದಿ : ಸುದ್ದಿಗೋಷ್ಠಿ ಕರೆದ ಚಂದನ್ ಶೆಟ್ಟಿ-ನಿವೇದಿತಾ ಗೌಡ : ಡಿವೋರ್ಸ್​ ಕಾರಣ ಬಿಚ್ಚಿಡ್ತಾರಾ ಮಾಜಿ ದಂಪತಿ?

Leave a Comment

DG Ad

RELATED LATEST NEWS

Top Headlines

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸಿ.ಎಸ್.ಷಡಕ್ಷರಿ ಮರು ಆಯ್ಕೆ..!

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸಿ.ಎಸ್.ಷಡಕ್ಷರಿ ಅವರು ಮರು ಆಯ್ಕೆಯಾಗಿದ್ದಾರೆ. 2024-29ನೇ ಅವಧಿಯ ಅಧ್ಯಕ್ಷ ಹಾಗೂ ರಾಜ್ಯ ಖಜಾಂಚಿ ಸ್ಥಾನಕ್ಕೆ ಇಂದು ಕಬ್ಬನ್‌ ಪಾರ್ಕ್‌ನ

Live Cricket

Add Your Heading Text Here