ಬೆಂಗಳೂರು : ನಟ ರಾಘವೇಂದ್ರ ರಾಜ್ಕುಮಾರ್ರವರ ಮಗ ಯುವರಾಜ್ ಕುಮಾರ್ ಜೂನ್ 6ನೇ ತಾರೀಖು ಡಿವೋರ್ಸ್ಗೆ ಅರ್ಜಿ ಸಲ್ಲಿಸಿ, ಕೋರ್ಟ್ ಮೆಟ್ಟಿಲೇರಿದ್ದರು. ಮಾತ್ರವಲ್ಲದೆ ಪತ್ನಿಯ ಕುರಿತಾಗಿ ಅನೇಕ ಆರೋಪಗಳನ್ನು ಮಾಡಿದ್ದರು. ಹೀಗಾಗಿ 1ನೇ ಹೆಚ್ಚುವರಿ ಕೌಟುಂಬಿಕ ಕೋರ್ಟ್ನಲ್ಲಿ ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಿತ್ತು. ಅದರಂತೆಯೇ ಇಂದು ವಿಚಾರಣೆ ನಡೆಯಬೇಕಿತ್ತು. ಆದರೆ ಇದೀಗ ಕೋರ್ಟ್ ಆಗಸ್ಟ್ 23ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಕೋರ್ಟ್ಗೆ ಅರ್ಜಿ ಸಲ್ಲಿಸಿ ಯುವ ಶ್ರೀದೇವಿಗೆ ನೋಟಿಸ್ ಕಳಿಸಿದ್ದ. ಯುವ ನೋಟಿಸ್ಗೆ ಶ್ರೀದೇವಿ ಉತ್ತರವನ್ನೂ ಕೊಟ್ಟಿದ್ದರು. ಡಿವೋರ್ಸ್ ಅರ್ಜಿಗೆ ಶ್ರೀದೇವಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಿ,
ಆಕ್ಷೇಪಣೆ ಬಗ್ಗೆ ವಾದ ಮಾಡಲು ಅವಕಾಶ ಕೇಳಿದ್ದರು.
ಮೀಡಿಯೇಷನ್ ಕೌನ್ಸಿಲಿಂಗ್ ಮುಗಿದ ನಂತರ ವಾದಕ್ಕೆ ಅವಕಾಶ ನೀಡಿದ್ದರು. ಬಳಿಕ ಕೋರ್ಟ್ ಆಕ್ಷೇಪಣೆಯ ವಾದ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ. ಆಗಸ್ಟ್ 23ಕ್ಕೆ ಮೀಡಿಯೇಷನ್ ದಿನಾಂಕ ನಿಗದಿ ಮಾಡೋದಾಗಿ ಕೋರ್ಟ್ ಸೂಚನೆ ನೀಡಿದೆ. ಹಾಗಾಗಿ ನ್ಯಾಯಾಧೀಶರಾದ ಕಲ್ಪನಾ ಆಗಸ್ಟ್ 23ಕ್ಕೆ ವಿಚಾರಣೆ ಮುಂದೂಡಿದ್ದಾರೆ.
ಇದನ್ನೂ ಓದಿ : ಬಗೆದಷ್ಟೂ ಬಯಲಾಗುತ್ತಿದೆ ಮುಡಾ ಕರ್ಮಕಾಂಡ – ಈ ಮೂವರೇ ಸೈಟ್ ಅಕ್ರಮದ ಕಿಂಗ್ಪಿನ್ಗಳು..!