ಬೆಂಗಳೂರು : ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಬಂಧನಕ್ಕೊಳಗಾಗಿದ್ದ ಹಿಂದೂ ಸಂಘಟನೆ ಮುಖಂಡ ಪುನೀತ್ ಕೆರೆಹಳ್ಳಿಗೆ ನಗರದ 5ನೇ ಎಸಿಎಂಎಂ ನ್ಯಾಯಾಲಯ ನಿನ್ನೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ತಡರಾತ್ರಿ ಅವರನ್ನು ಜೈಲಿಂದ ರಿಲೀಸ್ ಮಾಡಲಾಗಿದೆ.
ಕಾಟನ್ ಪೇಟೆ ಪೊಲೀಸರು ಜುಲೈ 26ರಂದು ಪುನೀತ್ ಕೆರೆಹಳ್ಳಿಯನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು. ಆದ್ರೆ ಇದೀಗ ಪುನೀತ್ ಕೆರೆಹಳ್ಳಿಗೆ ಜೈಲಲ್ಲಿ ಪೊಲೀಸರು ಟಾರ್ಚರ್ ನೀಡಿರುವ ಆರೋಪ ಕೇಳಿಬಂದಿದ್ದು, ಪುನೀತ್ ಕೆರೆಹಳ್ಳಿಯನ್ನು ಬೆತ್ತಲೆಗೊಳಿಸಿ ವಿಡಿಯೋ ಮಾಡಿ ಪೊಲೀಸರು ತೀವ್ರ ಹಿಂಸೆ ಕೊಟ್ಟಿದ್ದಾರೆ ಎನ್ನಲಾಗಿದೆ. ಇನ್ಮುಂದೆ ಬಾಲ ಬಿಚ್ಚಿದ್ರೆ ವಿಡಿಯೋ ವೈರಲ್ ಮಾಡೋದಾಗಿ ಪೊಲೀಸರು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಆರೋಪ ಕೇಳಿಬಂದ ಬೆನ್ನಲ್ಲೇ ಪುನೀತ್ ಕೆರೆಹಳ್ಳಿ ಬೆನ್ನಿಗೆ ಮಾಜಿ ಸಂಸದ ಪ್ರತಾಪ್ ಸಿಂಹ ನಿಂತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಪುನೀತ್ ಕೆರೆಹಳ್ಳಿಯನ್ನು ಬೆತ್ತಲೆಗೊಳಿಸಿ ಹಿಂಸೆ ಮಾಡಿದ್ದೀರಿ, ನಾಳೆ ಸ್ಟೇಷನ್ಗೆ ಬರ್ತೀನಿ, ನೀವು ಇರಬೇಕೆಂದು ACP ಚಂದನ್ಗೆ ಪ್ರತಾಪ್ ಸಿಂಹ ಸವಾಲ್ ಹಾಕಿದ್ದಾರೆ.
ACP ಚಂದನ್ಗೆ ಪ್ರತಾಪ್ ಸಿಂಗ್ ವಾರ್ನಿಂಗ್ ನೀಡಿದ್ದು, ಖುದ್ದು ನಾನು ಸ್ಟೆಷನ್ಗೆ ಬರ್ತೀನಿ.. ನೀವೂ ಬನ್ನಿ ಎಂದು ACP ಚಂದನ್ಗೆ ಎಚ್ಚರಿಸಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ವಿಜಯನಗರ ACP ಕಚೇರಿ ಬಳಿ ಬರೋದಾಗಿ ಪ್ರತಾಪ್ ಸಿಂಹ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : ಮಹಿಳೆ ಮೇಲೆ ಅತ್ಯಾಚಾರ ಆರೋಪ – ಹಾಸನದ ಪ್ರಸಿದ್ಧ ದೇಗುಲದ ಪೂಜಾರಿ ಬಂಧನ..!