ಕನ್ನಡ ಚಿತ್ರರಂಗದ ಅಭಿನಯ ಚರ್ಕವರ್ತಿ ಕಿಚ್ಚ ಸುದೀಪ್ ಅವರನ್ನು ಇತ್ತೀಚಿಗೆ ಯಶ್ ಅವರು ಹೆಸರಿಟ್ಟು ಕರೆದಿದ್ದರು. ಹಾಯ್ ಸುದೀಪ್ ಎಂದಿದ್ದಕ್ಕೆ ಸುದೀಪ್ ಫ್ಯಾನ್ಸ್ ಆಕ್ಷೇಪಿಸಿದ್ದರು. ಈ ಹಿನ್ನೆಲೆಯಲ್ಲಿ ನಟ ಸುದೀಪ್ ತಮ್ಮ ಅಭಿಮಾನಿಗಳ ನಡೆಯನ್ನು ಸಮರ್ಥಿಸಿಕೊಂಡು ಯಶ್ ಅವರಿಗೆ ಕೂಲ್ ಆಗಿಯೇ ನೀತಿಪಾಠ ಮಾಡಿದ್ದಾರೆ.
ಯಶ್ ಹಾಗೂ ನಾನು ಸಹನಟರು ಹೌದು, ಹೆಸರಿಡಿದು ಕರೆದಿದ್ದು ತಪ್ಪಲ್ಲ. ಅದೇ ರೀತಿ ಇದ್ರ ವಿರುದ್ಧ ಧ್ವನಿ ಎತ್ತಿದ ನನ್ನ ಅಭಿಮಾನಿಗಳದ್ದೂ ತಪ್ಪಿಲ್ಲ. ನನ್ನ ಅಭಿಮಾನಿಗಳು ವೈಸ್ ರೈಸ್ ಮಾಡಿದ್ದು ಸರಿಯಾಗಿಯೇ ಇದೆ. ಅದರಲ್ಲಿ ನನಗೆ ಯಾವುದೇ ತಪ್ಪು ಕಾಣಿಸ್ತಿಲ್ಲ.
ಪ್ರತಿ ನಟನಲ್ಲೂ ಫ್ಯಾನ್ಸ್ ಬದಲಾವಣೆ ಗಮನಿಸ್ತಾರೆ. ನನ್ನ ಅಭಿಮಾನಿಗಳಿಗೆ ಏನೋ ಬದಲಾವಣೆ ಕಂಡಿದೆ. ಹೀಗಾಗಿಯೇ ಅವರು ಆಕ್ರೋಶ ಹೊರಹಾಕಿದ್ದಾರೆ. ಸೀನಿಯರ್ಸ್ ಯಾವತ್ತಿಗೂ ಸೀನಿಯರ್ಸ್ ಆಗಿಯೇ ಇರ್ತಾರೆ. ತಾವು ಬೆಳೀತಾ ಬೆಳಿತಾ ಬೇರೆಯವರು ಯಾವಾಗ ಚಿಕ್ಕವರಾದ್ರು? ಈ ಪ್ರಶ್ನೆಯನ್ನು ಸುದೀಪ್ ಕೇಳಿದ್ದಾರೆ. ಶಿವಣ್ಣ ಅವ್ರನ್ನ ನಾವು ‘ಶಿವು’ ಅನ್ನೋಕೆ ಆಗುತ್ತಾ? ಆದರೆ, ಹಿರಿಯರಿಗೆ ಗೌರವ ಕೊಡಬೇಕು.
ಹಿರಿಯರ ಮಾರ್ಗದರ್ಶನದಲ್ಲೇ ನಾವು ಹೋಗ್ತಿದ್ದೇವೆ. ಅವ್ರು ನೋಡದೇ ಇರೋದನ್ನ ನಾವು ನೋಡ್ತಿಲ್ಲ. ಈ ಯಶಸ್ಸನ್ನು ಅವ್ರು ಯಾವತ್ತೋ ನೋಡಿರ್ತಾರೆ. ನನ್ನ ಕರ್ತವ್ಯ ನಾನು ಮಾಡಿದೀನಿ.. ಪ್ಯಾನ್‌ಗಳು ಅವ್ರ ಕರ್ತವ್ಯ ಅವ್ರು ಮಾಡಿದಾರೆ. ಈ ಎರಡರ ಮಧ್ಯೆನೇ ನಿಮ್ಗೆ ಉತ್ತರ ಇರಬಹುದು. ಯಶ್ ನನಗೆ ಸುದೀಪ್ ಅಂತ ಕರೆದಿದ್ದು ಬೇಜಾರಿಲ್ಲ.. ಅವ್ರು ನನಗೆ ‘ಸುದೀಪ್ ಸರ್’ ಅಂತ ಕರೀಬೇಕು ಅಂತಲ್ಲ. ಬದಲಾವಣೆ ಜನರಿಗೆ ಕಾಣುತ್ತೆ ಎಂದಿದ್ದಾರೆ.
ಯಾವತ್ತೋ ಒಂದಿನ ಅವ್ರ ಮುಂದಿನ ಜೂನಿಯರ್ಸ್ ಬೆಳದು ಈ ಹಂತಕ್ಕೆ ಬಂದಾಗ ಅವ್ರು ಹಾಗೆ ಕರೆದಾಗ ಅವ್ರ ಫ್ಯಾನ್ಸ್ ಕೂಡ ಹೀಗೇ ರಿಯಾಕ್ಟ್ ಮಾಡ್ತಾರೆ. ಇದು ನಿಯಮ ಅಂತಲ್ಲ, ಆಗೋದು ಸತ್ಯ ಅಷ್ಟೇ. ನಮ್ಮ ಸೀನಿಯರ್ಸ್ ಯಾವತ್ತಿದ್ರೂ ನಮ್ಮ ಸೀನಿಯರ್ಸ್ ಆಗಿಯೇ ಇರ್ತಾರೆ. ಅವ್ರಿಗಿಂತ ನಾವು ಎಷ್ಟೇ ಮುಂದಕ್ಕೆ ಹೋದ್ರೂ ನಾವು ಅವ್ರಿಗೆ ಯಾಕೆ ಗೌರವ ಕೊಡ್ತೀವಿ ಅಂದ್ರೆ ಅವ್ರು ದಾಟಿ ಹೋಗಿರೋದನ್ನೇ ನಾವ್ ನೋಡ್ತಾ ಇರೋದು. ಎಲ್ಲೋ ಒಂದು ಕಡೆ ನಮ್ಮನ್ನೇ ನಾವು ಪ್ರಶ್ನೆ ಮಾಡ್ಕೋಬೇಕಾಗುತ್ತೆ.. ಎಂದಿದ್ದಾರೆ ನಟ ಸುದೀಪ್.
ಇದನ್ನೂ ಓದಿ : ಬೆಂಗಳೂರು : ಡೆತ್ ನೋಟ್ ಬರೆದಿಟ್ಟು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಆತ್ಮಹತ್ಯೆ..!