Download Our App

Follow us

Home » ಕ್ರೀಡೆ » ಡೇಂಜರಸ್​ ಬೆರಿಲ್​​​ ಸೈಕ್ಲೋನ್​ಗೆ​​ ಸಿಲುಕಿದ ವಿಶ್ವಕಪ್ ವಿಜೇತ ಟೀಂ ಇಂಡಿಯಾ – ಆಟಗಾರರು ತವರಿಗೆ ಬರೋದು ಯಾವಾಗ?

ಡೇಂಜರಸ್​ ಬೆರಿಲ್​​​ ಸೈಕ್ಲೋನ್​ಗೆ​​ ಸಿಲುಕಿದ ವಿಶ್ವಕಪ್ ವಿಜೇತ ಟೀಂ ಇಂಡಿಯಾ – ಆಟಗಾರರು ತವರಿಗೆ ಬರೋದು ಯಾವಾಗ?

ಬಾರ್ಬಡೋಸ್ : ದ್ವೀಪ ರಾಷ್ಟ್ರ ವೆಸ್ಟ್ ಇಂಡೀಸ್​ನ ಬಾರ್ಬಡೋಸ್ ಬ್ರಿಡ್ಜ್ ಟೌನ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆದರೆ ಇದೀಗ ವೆಸ್ಟ್ ಇಂಡೀಸ್​ಗೆ ಡೇಂಜರಸ್​ ‘ಬೆರಿಲ್’​​​ ಸೈಕ್ಲೋನ್ ಅಪ್ಪಳಿಸುತ್ತಿದ್ದು, ಟೀಂ ಇಂಡಿಯಾ ಸದಸ್ಯರು ಹಲವು ದಿನಗಳವರೆಗೆ ಬಾರ್ಬಡೋಸ್‌ನಲ್ಲಿ ಸಿಲುಕುವ ಸಾಧ್ಯತೆ ಇದೆ.

ವರದಿಗಳ ಪ್ರಕಾರ, T20 ವಿಶ್ವಕಪ್ ಫೈನಲ್‌ನಲ್ಲಿ ಟೀಂ ಇಂಡಿಯಾ ಗೆದ್ದ ಕೆಲವೇ ಗಂಟೆಗಳ ನಂತರ ಭಾನುವಾರ ಬೆಳಿಗ್ಗೆ ‘ಬೆರಿಲ್’ ಸೈಕ್ಲೋನ್ ವರ್ಗ ಗ್ರೇಡ್​ 3 ಸೈಕ್ಲೋನಾಗಿ ಪರಿವರ್ತನೆಗೊಂಡಿದೆ. ಈ ಹಿನ್ನೆಲೆ ಬಾರ್ಬಡೋಸ್​​​ನಲ್ಲಿ ಉಳಿದುಕೊಂಡಿರುವ ರೋಹಿತ್​ ಪಡೆಗೆ ಹೋಟೆಲ್​​ನಿಂದ ಹೊರ ಬರದಂತೆ ಸೂಚನೆ ನೀಡಲಾಗಿದೆ. ವಿಮಾನ ಸೇರಿದಂತೆ ಎಲ್ಲಾ ಸಂಚಾರ ಸಂಪರ್ಕ ಬಂದ್​ ಮಾಡಲಾಗಿದ್ದು, ಮುಂದಿನ 24 ಗಂಟೆಯಲ್ಲಿ ಸೈಕ್ಲೋನ್ ಬಾರ್ಬಡೋಸ್​ಗೆ ಅಪ್ಪಳಿಸಲಿದೆ ಎಂದು ವರದಿಯಾಗಿದೆ.

ಈ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಹೋಟೆಲ್​​ನಲ್ಲೇ ಇರಲು ಟೀಂ ಇಂಡಿಯಾ ಸದಸ್ಯರಿಗೆ ಸೂಚನೆ ನೀಡಲಾಗಿದೆ. ಹೊರಬಂದರೆ ಬಿರುಗಾಳಿ-ಮಳೆಯ ಹೊಡೆತಕ್ಕೆ ಸಿಲುಕುವ ಆತಂಕ ಶುರುವಾಗಿದೆ. ಬೃಹತ್ ಅಲೆಗಳು ಅಟ್ಲಾಂಟಿಕ್​ ಸಾಗರದಿಂದ ಅಪ್ಪಳಿಸಲಿದ್ದು, ಸದ್ಯ ಗಂಟೆಗೆ 210 ಕಿಲೋ ಮೀಟರ್​ ವೇಗದಲ್ಲಿ ಗಾಳಿ ಬೀಸುತ್ತಿದೆ ಎಂದು ತಿಳಿದು ಬಂದಿದೆ.

ಸೈಕ್ಲೋನ್​​ ಬಾರ್ಬಡೋಸ್​ನಿಂದ 400 ಕಿಮೀ ದೂರದಲ್ಲಿದ್ದು, ಈ ಹಿನ್ನೆಲೆ ಬ್ರಿಡ್ಜ್​​ಟೌನ್​​ನ ಏರ್​​ಪೋರ್ಟ್ ಸಂಪೂರ್ಣ​ ಬಂದ್ ಮಾಡಲಾಗಿದೆ. ಟೀಂ ಇಂಡಿಯಾ ಜೊತೆ 70 ಮಂದಿಯಿದ್ದು, ಈಗಾಗಲೇ ಎಮಿರೇಟ್ಸ್​ ವಿಮಾನದ ಮೂಲಕ ರೋಹಿತ್ ಶರ್ಮಾ ಪಡೆ ವಾಪಸ್ ಆಗಬೇಕಿತ್ತು. ನ್ಯೂಯಾರ್ಕ್​​ನಲ್ಲಿ ವಿಮಾನವೇರಿ ದುಬೈ ಮೂಲಕ ತವರಿಗೆ ಬರ್ಬೇಕಿತ್ತು. ಇದೀಗ ಸೈಕ್ಲೋನ್ ಸಿಲುಕಿ ಹಲವು ದಿನಗಳವರೆಗೆ ಟೀಂ ಇಂಡಿಯಾ ಬಾರ್ಬಡೋಸ್‌ನಲ್ಲಿ ಇರಬೇಕಾದ ಪರಿಸ್ಥಿತಿ ಎದುರಾಗಿದೆ.

ಇನ್ನು ಚಾರ್ಟರ್ಡ್​ ಫ್ಲೈಟ್​ ಮೂಲಕ ಟೀಂ ಇಂಡಿಯಾದ 70 ಮಂದಿಯನ್ನು ಕರೆಸಲು ಬಿಸಿಸಿಐ ಪ್ಲಾನ್​​ ಮಾಡಿದ್ದು, ಪ್ರಧಾನಿ ಮೋದಿ ಜೊತೆ ಚರ್ಚಿಸಿ ಚಾರ್ಟರ್ಡ್ ವಿಮಾನ ಕಲ್ಪಿಸಲು ಚಿಂತನೆ ನಡೆಸಲಾಗುತ್ತಿದೆ. ಬ್ರಿಡ್ಜ್​ಟೌನ್​ನಿಂದ ದೆಹಲಿಗೆ ಕರೆಸಲು ಬಿಸಿಸಿಐ ಪ್ಲಾನ್​​​ ಮಾಡಿಕೊಂಡಿದೆ.

 

 

 

 

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here