ಬೀದರ್ : ಬಸ್ ಸೀಟಿಗಾಗಿ ಮಹಿಳೆಯರು ಕಚ್ಚಾಡಿಕೊಂಡಿರುವ ಘಟನೆ ಬೀದರ್ನಲ್ಲಿ ನಡೆದಿದೆ. ಬೀದರ್ನಿಂದ ಕಲಬುರಗಿಗೆ ಹೋಗುವ ಬಸ್ನಲ್ಲಿ ಮಹಿಳೆಯರು ವಾಗ್ವಾದ ಮಾಡಿ ಕೈ ಮಿಲಾಯಿಸಿದ್ದಾರೆ.
ಎರಡು ದಿನಗಳ ಹಿಂದೆ ಈ ಫೈಟ್ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ಇಬ್ಬರು ಪರಸ್ಪರ ಮಾತಿನಲ್ಲಿ ಜಗಳ ಮಾಡುತ್ತಿದ್ದರು. ಗಲಾಟೆ ಜೋರಾಗುತ್ತಿದ್ದಂತೆ ಓರ್ವ ಮಹಿಳೆ ತನ್ನ ಚಪ್ಪಲಿ ತೆಗೆದು ಜಗಳ ಮಾಡುತ್ತಿದ್ದ ಮಹಿಳೆಗೆ ಹೊಡೆದಿದ್ದಾಳೆ. ಸಹ ಪ್ರಯಾಣಿಕರು ಎಷ್ಟೇ ಹೇಳಿದ್ರೂ ಕೇಳದೇ ಮಹಿಳೆಯರಿಬ್ಬರು ಒಬ್ಬರಿಗೊಬ್ಬರು ಹಲ್ಲೆ ಮಾಡಿ, ಬಟ್ಟೆ ಹಿಡಿದು ಎಳೆದಾಡಿ ಕಚ್ಚಾಡಿಕೊಂಡಿದ್ದಾರೆ.
ಇದನ್ನೂ ಓದಿ : ಎಸ್-ವ್ಯಾಸ ವಿಶ್ವವಿದ್ಯಾನಿಲಯದಿಂದ ಆಗಸ್ಟ್ನಲ್ಲಿ ನೂತನ ಕೋರ್ಸ್ಗಳು ಆರಂಭ..!
Post Views: 109