ದಾವಣಗೆರೆ : ಡೆಂಗ್ಯೂ ಜ್ವರಕ್ಕೆ ಮಹಿಳೆ ಸಾವನ್ನಾಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ನಡೆದಿದೆ. ಹೊನ್ನಾಳಿ ತಾಲೂಕಿನ ಲಿಂಗಾಪುರದ ವಿಮಲಾ(27) ಮೃತಪಟ್ಟ ಮಹಿಳೆ.
ಈ ಮೊದಲು ವಿಮಲಾ ಕುಟುಂಬದ ಮೂವರಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೋಂಡಿತ್ತು. ಈ ಮೂವರು ಚಿಕಿತ್ಸೆಯಿಂದ ಗುಣಮುಖರಾಗಿದ್ದರು. ಆದರೆ ವಿಮಲಾ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ವಿಮಲಾ ಅವರಿಗೆ ಚಿಕ್ಕ ವಯಸ್ಸಿನ ಮೂರು ಮಕ್ಕಳ ಇದ್ದು, ವಿಮಲಾ ನಿಧನದಿಂದ ಮಕ್ಕಳು ಅನಾಥವಾಗಿವೆ. ಇನ್ನು ಮೃತರ ಮನೆಗೆ ಭೇಟಿ ನೀಡಿದ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಅವರು, ವಿಮಲಾ ಸಾವಿಗೆ ಸರ್ಕಾರ ಮತ್ತು ಆರೋಗ್ಯ ಇಲಾಖೆ ನಿರ್ಲಕ್ಷವೇ ಕಾರಣವೆಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ರಾಮನಗರ : ಅತ್ತೆಗೆ ದನ ಬಡಿದಂತೆ ಬಡಿದ ಸೊಸೆ – ಅಮ್ಮನಿಗೆ ಹೊಡೆಯೋದನ್ನು ವಿಡಿಯೋ ಮಾಡಿದ ಪಾಪಿ ಮಗ..!
Post Views: 65