Download Our App

Follow us

Home » ಜಿಲ್ಲೆ » ರಾಮನಗರ : ಅತ್ತೆಗೆ ದನ ಬಡಿದಂತೆ ಬಡಿದ ಸೊಸೆ – ಅಮ್ಮನಿಗೆ ಹೊಡೆಯೋದನ್ನು ವಿಡಿಯೋ ಮಾಡಿದ ಪಾಪಿ ಮಗ..!

ರಾಮನಗರ : ಅತ್ತೆಗೆ ದನ ಬಡಿದಂತೆ ಬಡಿದ ಸೊಸೆ – ಅಮ್ಮನಿಗೆ ಹೊಡೆಯೋದನ್ನು ವಿಡಿಯೋ ಮಾಡಿದ ಪಾಪಿ ಮಗ..!

ರಾಮನಗರ : ಅತ್ತೆಗೆ ಸೊಸೆ ದನ ಬಡಿದಂತೆ ಬಡಿಯುತ್ತಿವುದನ್ನು ಮಗ ವಿಡಿಯೋ ಮಾಡಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಅಪ್ಪನ ಸುದ್ದಿಗೆ ಯಾಕ್​ ಬಂದೆ ಎಂದು ಸೊಸೆ ದೊಣ್ಣೆಯಿಂದ ಹೊಡೆದು, ಅತ್ತೆಯನ್ನ ಮನೆ ಬಿಟ್ಟು ಹೋಗುವಂತೆ ಹೇಳಿದ್ದಾಳೆ.

ಚನ್ನಪಟ್ಟಣದ ಮರಳಿ ಅಬ್ಬೂರುದೊಡ್ಡಿಯ ರವೀಂದ್ರ ಪತ್ನಿ ಸಂಜನಾ ಎಂಬಾಕೆ 60 ವರ್ಷದ ಶಾಂತಮ್ಮಗೆ ಥಳಿಸಿದ್ದಾಳೆ. ಮೊಮ್ಮಗನ ಎದುರೇ ಅಜ್ಜಿಗೆ ಹೊಡೆಯುತ್ತಿರುವ ದೃಶ್ಯ ಕಂಡು
ಮಗು ಕಿರುಚಿಕೊಂಡಿದೆ. ಈ ವೇಳೆ ಅಪ್ಪ ಮಗುವನ್ನು ಆಚೆಗೆ ಕರೆತಂದಿದ್ದಾನೆ. ಮಗ-ಸೊಸೆ ಗಲಾಟೆ ಮಾಡಿ ಅತ್ತೆಯನ್ನು ಹೊರಗಟ್ಟಿದ್ದು, ಶಾಂತಮ್ಮ ತವರು ಮನೆಗೆ ಹೋಗಿ ಮತ್ತೆ ವಾಪಸ್​ ಬಂದಿದ್ದಾರೆ.

ಈ ವೇಳೆ ವಾಪಸ್ ಬಂದಿದ್ಯಾಕೆ ಎಂದು ಸೊಸೆ ಸಂಜನಾ ಥಳಿಸಿದ್ದು, ತಾಯಿ ಕಿರುಚಾಡಿದ್ರೂ ಗಲಾಟೆ ಬಿಡಿಸದೆ ಪಾಪಿ ಮಗ ವಿಡಿಯೋ ಮಾಡಿದ್ದಾನೆ. ತವರಿಗೆ ಕರೆದೊಯ್ಯುವಂತೆ ಸೋದರಮಾವನಿಗೆ ಬೆದರಿಸಲು ವಿಡಿಯೋ ರೆಕಾರ್ಡ್​ ಮಾಡಿಕೊಂಡಿದ್ದು, ಈ ರಾಕ್ಷಸ ಕೃತ್ಯದ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​​ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರ ಮಗ-ಸೊಸೆ ವಿರುದ್ಧ ಸುಮೋಟೋ ಕೇಸ್ ಹಾಕುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ : KPSC ಮರು ಪರೀಕ್ಷೆಗೆ ಸಿಎಂ ಸಿದ್ದರಾಮಯ್ಯ ಸೂಚನೆ..!

Leave a Comment

DG Ad

RELATED LATEST NEWS

Top Headlines

4 ಅಂತಸ್ತಿನ ಕಟ್ಟಡ ಕುಸಿತ – ಕೂದಲೆಳೆ ಅಂತರದಲ್ಲಿ ಪಾರಾದ ತಾಯಿ, ಮಗು..!

ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ತಾಯಿ ಮಗು ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಆಘಾತಕಾರಿ ಘಟನೆಯ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೊದಲ್ಲಿ

Live Cricket

Add Your Heading Text Here