Download Our App

Follow us

Home » ರಾಜಕೀಯ » ಜನರಿಗೆ ಉಪಕಾರ ಸ್ಮರಣೆ ಇಲ್ಲ, ಯಾರ್​​ ಏನೇ ಹೇಳಿದ್ರೂ ನೀರಿನ ದರ ಏರಿಕೆ ಮಾಡೇ ಮಾಡುತ್ತೇವೆ : ಡಿಸಿಎಂ ಡಿಕೆಶಿ..!

ಜನರಿಗೆ ಉಪಕಾರ ಸ್ಮರಣೆ ಇಲ್ಲ, ಯಾರ್​​ ಏನೇ ಹೇಳಿದ್ರೂ ನೀರಿನ ದರ ಏರಿಕೆ ಮಾಡೇ ಮಾಡುತ್ತೇವೆ : ಡಿಸಿಎಂ ಡಿಕೆಶಿ..!

ಬೆಂಗಳೂರು : ಯಾರ್​​ ಏನೇ ಹೇಳಿದ್ರೂ ನೀರಿನ ದರ ಹೆಚ್ಚಳ ಮಾಡಿಯೇ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮುಂಭಾಗದಲ್ಲಿ ಇಂದು ನಡೆದ ಕಾವೇರಿ ಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿರೋಧ ಪಕ್ಷದವರು ಏನಾದ್ರೂ ಹೋರಾಟ ಮಾಡಲಿ, ಟೀಕೆಗಳು ಬರಲಿ, ಟಿಪ್ಪಣಿಗಳು ಬರಲಿ ನೀರಿನ ರೇಟ್ ಹೆಚ್ಚಿಸೋದೆ, ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕಳೆದ 9-10 ವರ್ಷದಿಂದಲೂ ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಿಸಿಲ್ಲ.ಇವತ್ತು ಮಂಡಳಿಯಲ್ಲಿ ಕರೆಂಟ್​ ಬಿಲ್​ ಕಟ್ಟೋಕೂ ಆಗದ ಪರಿಸ್ಥಿತಿ ಇದೆ. ನೀರಿನ‌ ದರ ಹೆಚ್ಚಿಸಬೇಕು, ಅಂತರ್ಜಲ ಹೆಚ್ಚಳ ಆಗಬೇಕು. ಮಂಡಳಿ ನಷ್ಟದಲ್ಲಿದೆ, ಜಲ ಮಂಡಳಿಯಲ್ಲಿ ಸಂಬಳ ಕೊಡುವುದಕ್ಕೆ ಆಗುತ್ತಿಲ್ಲ.

ಎಷ್ಟು ದರ ಏರಿಕೆ ಮಾಡಬೇಕು ಎಂದು ಇನ್ನೂ ನಿರ್ಧಾರ ಮಾಡಿಲ್ಲ. ಕಮಿಟಿ‌ ಸಭೆ, ಸಂಪುಟ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ. ಮೊದಲು ಬೆಂಗಳೂರು ಜಲ ಮಂಡಳಿಯನ್ನು ಉಳಿಸಬೇಕು. ಎಲ್ಲರಿಗೂ ಹೆಚ್ಚಳ ಮಾಡಲ್ಲ, ಕೆಲವು ಸೆಕ್ಷನ್​ಗೆ ಹೆಚ್ಚಿಸುತ್ತೇವೆ. ಜನರಿಗೆ ಎಷ್ಟು ಮಾಡಿದ್ರೂ ಬೈಯೋದು ಬೈತಾರೆ, ನಾವು ಜನರಿಗೆ ಎಷ್ಟೇ ಉಪಕಾರ ಮಾಡಿದರೂ ನೆನಪಿಟ್ಟುಕೊಳ್ಳಲ್ಲ. ಸಾರ್ವಜನಿಕರಿಗೆ ಉಪಕಾರ ಸ್ಮರಣೆ ಇರೋದೇ ಇಲ್ಲ. ಯಾರು ಎಷ್ಟೇ ವಿರೋಧಿಸಿದರೂ ನೀರಿನ ಶುಲ್ಕ ಹೆಚ್ಚಿಸುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ : ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ಧ್ವಜ, ಚಿಹ್ನೆ ರಿವೀಲ್ ಮಾಡಿದ ತಳಪತಿ ವಿಜಯ್..!

Leave a Comment

DG Ad

RELATED LATEST NEWS

Top Headlines

ಸಿಎಂ ಸಿದ್ದರಾಮಯ್ಯಗೆ ಸದ್ಯಕ್ಕಿಲ್ಲ CBI ಸಂಕಷ್ಟ – ಮುಡಾ ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್​!

ಧಾರವಾಡ : ಇಂದು ಧಾರವಾಡ ಹೈಕೋರ್ಟ್​ನಲ್ಲಿ ಮುಡಾ ಕೇಸ್ ತನಿಖೆ ಸಿಬಿಐಗೆ ನೀಡುವಂತೆ ಕೋರಿ​ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆದಿದ್ದು, ವಾದ-ಪ್ರತಿವಾದ ಆಲಿಸಿದ  ಧಾರವಾಡ ಹೈಕೋರ್ಟ್​

Live Cricket

Add Your Heading Text Here