2026ರಲ್ಲಿ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೂ ಮುನ್ನ ಅಲ್ಲಿನ ರಾಜಕೀಯ ರಂಗದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಈ ಹಿಂದೆ ರಾಜಕೀಯಕ್ಕೆ ಎಂಟ್ರಿ ಕೊಡೋದಾಗಿ ಹೇಳಿದ್ದ ಟಾಲಿವುಡ್ ನಟ ತಳಪತಿ ವಿಜಯ್, ಇದೀಗ ಅಧಿಕೃತವಾಗಿ ಪಾಲಿಟಿಕ್ಸ್‌ಗೆ ಎಂಟ್ರಿ ಕೊಟ್ಟಿದ್ದಾರೆ.
ತಳಪತಿ ವಿಜಯ್ ಅವರು “ತಮಿಳಗ ವೆಟ್ರಿ ಕಳಗಂ” ಎಂಬ ರಾಜಕೀಯ ಪಕ್ಷ ಸ್ಥಾಪನೆ ಮಾಡುವ ಮೂಲಕ ತಮಿಳುನಾಡಿನಲ್ಲಿ ಹೊಸ ಸಂಚಲನ ಮೂಡಿಸಿದ್ದು, ಈ ನೂತನ ಪಕ್ಷದ ಚಿಹ್ನೆ ಮತ್ತು ಧ್ವಜವನ್ನು ಇಂದು ತಮ್ಮ ಪಕ್ಷದ ಮುಖ್ಯ ಕಚೇರಿಯಲ್ಲಿ ಅನಾವರಣಗೊಳಿಸಿದ್ದಾರೆ. ಕಡುಗೆಂಪು ಮತ್ತು ಹಳದಿ ಬಣ್ಣದ ಧ್ವಜವು ಎರಡು ಆನೆಗಳ ನಡುವೆ ನವಿಲನ್ನು ಒಳಗೊಂಡಿದೆ.
ಪಕ್ಷದ ಚಿಹ್ನೆ ಮತ್ತು ಧ್ವಜವನ್ನು ಅನಾವರಣಗೊಳಿಸಿದ ಬಳಿಕ ಪಣಯೂರಿನ ಸಪಕ್ಷದ ಕಚೇರಿಯಲ್ಲಿ ನಟ ಹಾಗೂ ‘ತಮಿಳಗ ವೇಟ್ರಿ ಕಳಗಂ’ ವಿಜಯ್ ಅವರು ಪಕ್ಷದ ಧ್ವಜಾರೋಹಣ ನೆರವೇರಿಸಿದ್ದಾರೆ. ಈ ವೇಳೆ ಪಕ್ಷದ ಧ್ವಜಗೀತೆಯನ್ನು ಸಹ ಹಾಡಲಾಗಿದೆ. ಈ ಧ್ವಜ ಗೀತೆಯನ್ನು ಜನಪ್ರಿಯ ಸಂಗೀತ ನಿರ್ದೇಶಕ ಎಸ್ ಥಮನ್ ಸಂಯೋಜಿಸಿದ್ದು, ಸಾಹಿತ್ಯವನ್ನು ವಿ ವಿವೇಕ್ ಬರೆದಿದ್ದಾರೆ.
ಇದನ್ನೂ ಓದಿ : ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಆರೋಪಿ ಪವಿತ್ರಾ ಗೌಡಗೆ ಜೈಲಾ.. ಬೇಲಾ? – ಇಂದು ತೀರ್ಪು ಪ್ರಕಟ..!