ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಆಂಡ್ ಗ್ಯಾಂಗ್ ಜೈಲು ಸೇರಿದ್ದಾರೆ. ಇತ್ತ ಅಭಿಮಾನಿಗಳು ಹಲವು ರೀತಿಯಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ ಕೆಲವರು ನಾವು ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡು ಹುಚ್ಚಾಟ ಮೆರೆಯುತ್ತಿದ್ದಾರೆ.
ವಿಚಾರಣಾಧೀನ ಖೈದಿ ಆಗಿರುವ ನಟ ದರ್ಶನ್ಗೆ ಜೈಲಿನಲ್ಲಿ ನೀಡಿರುವ 6106 ನಂಬರನ್ನೇ ಅಭಿಮಾನಿಗಳು ವಾಹನಕ್ಕೆ ನೋಂದಣಿ ಮಾಡಿಸುತ್ತಿರುವುದು, ಟ್ಯಾಟೂ ಹಾಕಿಸಿಕೊಳ್ಳುವುದು ಇದರೊಂದಿಗೆ ಏನೂ ಅರಿಯದ ಕಂದಮ್ಮನಿಗೆ ಖೈದಿಯಂತೆ ಬಿಂಬಿಸಿ ಪೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಘಟನೆಯು ನಡೆದಿತ್ತು.
ಇದರ ಬೆನ್ನಲೇ ಅಭಿಮಾನಿಯೋರ್ವ ದರ್ಶನ್ ಖೈದಿ ನಂಬರ್ ಆಟೋ ಮೇಲೆ ಹಾಕ್ಕೊಂಡು ನಡು ರಸ್ತೆಯಲ್ಲಿ ವೀಲ್ಹಿಂಗ್ ಮಾಡಿರುವ ಘಟನೆ ನಡೆದಿದೆ. ವಾಹನಗಳು ಓಡಾಡುವ ರಸ್ತೆಯಲ್ಲೇ ಆಟೋ ವೀಲ್ಹಿಂಗ್ ಮಾಡಿದ್ದು, ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Jaga boss ಇನ್ಸ್ಟಾ ಐಡಿಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ರಾಜರೋಷವಾಗಿ ವ್ಹೀಲಿಂಗ್ ವಿಡಿಯೋ ಅಪ್ಲೋಡ್ ಮಾಡಿದ್ರೂ, ಸೋಷಿಯಲ್ ಮೀಡಿಯಾ ಮೇಲೆ ಪೊಲೀಸರು ನಿಗಾ ಇಟ್ಟಿದ್ರು ಯಾವುದೇ ಯೂಸ್ ಇಲ್ಲ. ಇನ್ನು ಮಿತಿಮೀರಿದ ದರ್ಶನ್ ಅಭಿಮಾನಿಗಳ ಹುಚ್ಚಾಟದಿಂದ ಅಮಾಯಕರ ಪ್ರಾಣಕ್ಕೆ ಕುತ್ತು ಬರೋ ಸಾಧ್ಯತೆಯಿದೆ. ಸದ್ಯ ಆರೋಪಿ ಪತ್ತೆಗೆ ಮುಂದಾಗಿರುವ ಟ್ರಾಫಿಕ್ ಪೊಲೀಸರು ಆಟೋ ನಂಬರ್ ಆಧರಿಸಿ ಆರೋಪಿಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ : ‘ಭೈರವನ ಕೊನೆಯ ಪಾಠ’ ಸಿನಿಮಾದ ಫಸ್ಟ್ ಲುಕ್ ರಿಲೀಸ್ – ಹೊಸ ಅವತಾರದಲ್ಲಿ ಶಿವಣ್ಣ ಎಂಟ್ರಿ..!