ಚಿಕ್ಕಬಳ್ಳಾಪುರ : ಮಾಸ್ಕ್ ಧರಿಸಿ ಬೈಕ್ನಲ್ಲಿ ಬಂದ ಕಳ್ಳರು ಮಹಿಳೆಯ ಕತ್ತಿನಲ್ಲಿರುವ ಚೈನ್ ಕದ್ದು ಎಸ್ಕೇಪ್ ಆಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ನಗರದ ಗಾಯತ್ರಿ ಮತ್ತು ಲಕ್ಷ್ಮಿ ಎಂಬ ಮಹಿಳೆಯರು ಇಂದು ಬೆಳಗಿನ ಜಾವ ವಾಕಿಂಗ್ ಮಾಡುತ್ತಿದ್ದರು.
ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಗಾಯತ್ರಿ ಎನ್ನುವವರ ಕತ್ತಿನಲ್ಲಿದ್ದ ಮಾಂಗಲ್ಯ ಸರಕ್ಕೆ ಕೈ ಹಾಕಿದ್ದಾರೆ. ಇದರಿಂದ ಕಿರುಚಾಡಿದ ಮಹಿಳೆ ಚೈನ್ನನ್ನ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಚೈನ್ ಎಳೆಯುವಾಗ ನಾಲ್ಕು ಗುಂಡುಗಳು ಕಳ್ಳರ ಪಾಲಾಗಿದೆ.
ನಂತರ ಜೊತೆಗಿದ್ದ ಸ್ನೇಹಿತೆ ಲಕ್ಷ್ಮಿ ಕುತ್ತಿಗೆಗೂ ಕೈ ಹಾಕಲು ಮುಂದಾಗಿದ್ದು, ಸಾಧ್ಯವಾಗದ ಹಿನ್ನಲೆ ತಕ್ಷಣ ಸ್ಥಳದಿಂದ ಕಳ್ಳರು ಎಸ್ಕೇಪ್ ಆಗಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ನಗರಠಾಣಾ PSI ನಂಜುಂಡಯ್ಯ ಹಾಗೂ ಸಿಬ್ಬಂದಿ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದು ಕಳ್ಳರಿಗಾಗಿ ಬಲೆ ಬೀಸಿದ್ದಾರೆ.
ಇದನ್ನೂ ಓದಿ : ಪುನೀತ್ ಕೆರೆಹಳ್ಳಿ ಬೆತ್ತಲು ಮಾಡಿದ ಪ್ರಕರಣ – ACP ಚಂದನ್ ಕುಮಾರ್ ವಿರುದ್ಧ ಪ್ರತಾಪ್ ಸಿಂಹ ದೂರು..!