Download Our App

Follow us

Home » ರಾಜ್ಯ » ಬೆಂಗಳೂರಲ್ಲಿ ತೀವ್ರಗೊಂಡ ನೀರಿನ ಸಮಸ್ಯೆ – ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ..!

ಬೆಂಗಳೂರಲ್ಲಿ ತೀವ್ರಗೊಂಡ ನೀರಿನ ಸಮಸ್ಯೆ – ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ..!

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ಆಯೋಜಿಸಿದೆ.

ಮಧ್ಯಾಹ್ನ 12 ಗಂಟೆಗೆ ಸಿಎಂ ಸಿದ್ದರಾಮಯ್ಯ ಬೆಂಗಳೂರು ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿ, ಪರಿಹಾರೋಪಾಯಗಳ ಬಗ್ಗೆ ಚರ್ಚಿಸಲಿದ್ದಾರೆ.‌ ಸಭೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಬಿಎಂಪಿ ಅಧಿಕಾರಿಗಳು, ಜಲಮಂಡಳಿ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಬೆಂಗಳೂರಿಗರ ನೀರಿನ ಸಮಸ್ಯೆಯನ್ನು ನೀಗಿಸುವ ಸಂಬಂಧ ವಿವಿಧ ರೀತಿಯ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲಿದ್ದಾರೆ.‌ ಕಳೆದ ಒಂದು ತಿಂಗಳಿಂದ ಬೆಂಗಳೂರಲ್ಲಿ ನೀರಿನ ಸಮಸ್ಯೆ ಉಲ್ಬಣಿಸುತ್ತಿದ್ದು, ಒಂದೆಡೆ ಕಾವೇರಿ ನೀರಿನ ಅಭಾವ, ಇನ್ನೊಂದೆಡೆ ಬರಿದಾದ ಕೊಳವೆ ಬಾವಿಗಳು, ಇದರ ಮಧ್ಯೆ ಖಾಸಗಿ ಟ್ಯಾಂಕರ್​​ಗಳಿಂದಾಗುತ್ತಿದ್ದ ಹಗಲು ದರೋಡೆಯಿಂದ ಬೆಂಗಳೂರಿಗರೂ ನೀರಿಗಾಗಿ ಪರದಾಡುವಂತಾಗಿದೆ.‌

ಇನ್ನು, ಕಾವೇರಿ ನದಿ ನೀರಿನ ಅಭಾವದಿಂದ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಜಾಸ್ತಿಯಾಗಿದೆ. ಬರದ ಹಿನ್ನೆಲೆ ಕೊಳವೆ ಬಾವಿಗಳೂ ಬರಿದಾಗುತ್ತಿವೆ.‌ ಪ್ರತಿಪಕ್ಷಗಳು ಸರ್ಕಾರದ ವೈಫಲ್ಯ ಆರೋಪಿಸಿ ಈಗಾಗಲೇ ಪ್ರತಿಭಟಿಸಿ ನಡೆಸುತ್ತಿವೆ. ಲೋಕಸಭೆ ಚುನಾವಣೆ ಬೆನ್ನಲ್ಲೇ ಬೆಂಗಳೂರಲ್ಲಿ ನೀರಿನ ಸಮಸ್ಯೆ ಕಾಂಗ್ರೆಸ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ.‌

ಈಗಾಗಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಅಧಿಕಾರಿಗಳ ಜೊತೆ ಸಭೆ ನಡೆಸಿ, ಬೆಂಗಳೂರು ನೀರಿನ ಸಮಸ್ಯೆ ಪರಿಹರಿಸಲು ಯತ್ನಿಸಿದ್ದರು. ಆದರೂ ಸಮಸ್ಯೆ ಇನ್ನಷ್ಟು ತೀವ್ರಗೊಳ್ಳುತ್ತಿದೆ. ಇದೀಗ ಸಿಎಂ ಸಿದ್ದರಾಮಯ್ಯನವರೇ ಬೆಂಗಳೂರಿನ ನೀರಿನ ಸಮಸ್ಯೆಗೆ ಪರಿಹಾರ ಹುಡುಕಲು ಇಂದು ಮಹತ್ವದ ಸಭೆ ನಡೆಸುತ್ತಿದ್ದಾರೆ.‌ ಸಭೆಯಲ್ಲಿ ಕೆಲ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ : ಯಡಿಯೂರಪ್ಪ ತವರಲ್ಲಿಂದು ಪ್ರಧಾನಿ ಮೋದಿ ರಣಕಹಳೆ – ಲೋಕಸಭಾ ಚುನಾವಣೆಗೆ ಮತಬೇಟೆ ಶುರು..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here