Download Our App

Follow us

Home » ಜಿಲ್ಲೆ » ಬಿಸಿಲಿನ ತಾಪಕ್ಕೆ ಕೆ.ಆರ್.ಎಸ್ ಡ್ಯಾಂ ನೀರಿನ ಮಟ್ಟ ಭಾರೀ ಕುಸಿತ : ಜನರಲ್ಲಿ ಹೆಚ್ಚಿದ ಆತಂಕ..!

ಬಿಸಿಲಿನ ತಾಪಕ್ಕೆ ಕೆ.ಆರ್.ಎಸ್ ಡ್ಯಾಂ ನೀರಿನ ಮಟ್ಟ ಭಾರೀ ಕುಸಿತ : ಜನರಲ್ಲಿ ಹೆಚ್ಚಿದ ಆತಂಕ..!

ಮಂಡ್ಯ : ಬೇಸಿಗೆಯ ರಣರಣ ಬಿಸಿಲಿನ ತಾಪಕ್ಕೆ ಕೆ.ಆರ್.ಎಸ್ ಡ್ಯಾಂ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಡ್ಯಾಂ ನೀರಿನ ಮಟ್ಟ ಕುಸಿತದಿಂದ ಹಿನ್ನೀರಿನಲ್ಲಿ ಬಂಡೆಗಳ ಮತ್ತು ಬಯಲಿನ ದರ್ಶನವಾಗುತ್ತಿದೆ. ನೀರಿದ್ದಾಗ ಸಮುದ್ರದಂತೆ ಕಾಣ್ತಿದ್ದ KRS ಡ್ಯಾಂ ಇದೀಗ ನೀರಿಲ್ಲದೆ ಚಿಕ್ಕ ಕೆರೆಯ ರೀತಿ ಗೋಚರಿಸುತ್ತಿದೆ. 84 ಅಡಿಗೆ ಕುಸಿದ ಡ್ಯಾಂನ ನೀರಿನ ಮಟ್ಟದಿಂದಾಗಿ ಆತಂಕ ಎದುರಾಗಿದೆ.

ಪ್ರಸ್ತುತ ಇರುವ 12 TMC ನೀರಿನಲ್ಲಿ 5 TMC ನೀರಷ್ಟೆ ಬಳಕೆಗೆ ಯೋಗ್ಯವಾಗಿದ್ದು, ಉಳಿದ 7 TMC ನೀರು ಡೆಡ್ ಸ್ಟೋರೇಜ್ ನೀರು ಬಳಕೆಗೆ ಅಸಾಧ್ಯವಾಗಿದೆ. ಇರುವ 5 TMC ನೀರು ಕುಡಿಯಲು ಪೂರೈಕೆಯಾಗಿದೆ. ಮುಂದಿನ ದಿನಗಳಲ್ಲಿ ಮಳೆ ಬರದಿದ್ದರೆ ಕುಡಿಯುವ ನೀರಿಗೆ ಆಹಾಕಾರ ಶುರುವಾಗಲಿದ್ದು, ಮೈಸೂರು ಬೆಂಗಳೂರು ಸೇರಿ ಹಲವು ಪ್ರಮುಖ ನಗರಗಳಿಗೆ ನೀರಿನ ಸಮಸ್ಯೆ‌ ಎದುರಾಗಲಿದೆ.

ಡ್ಯಾಂ ನ ಇಂದಿನ ನೀರಿನ ಮಟ್ಟ :

  • ಗರಿಷ್ಟ ಮಟ್ಟ: 124.80 ಅಡಿ
  • ಇಂದಿನ ನೀರಿನ ಮಟ್ಟ: 84.41 ಅಡಿ
  • ಒಳಹರಿವು : 73 ಕ್ಯೂಸೆಕ್
  • ಹೊರಹರಿವು : 782 ಕ್ಯೂಸೆಕ್
  • ಪ್ರಸ್ತುತ ನೀರಿನ ಸಂಗ್ರಹ. : 12.869 TMC

ಇದನ್ನೂ ಓದಿ : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here