Download Our App

Follow us

Home » ರಾಜಕೀಯ » ಒಂದ್​ ಫೂಟ್​​​​​​​​ ಜಮೀನು ವಕ್ಫ್​​ಗೆ ಬಿಟ್ಟು ಕೊಡಲ್ಲ- ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಕಿಡಿ..!

ಒಂದ್​ ಫೂಟ್​​​​​​​​ ಜಮೀನು ವಕ್ಫ್​​ಗೆ ಬಿಟ್ಟು ಕೊಡಲ್ಲ- ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಕಿಡಿ..!

ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ರೈತರ ಜಮೀನುಗಳನ್ನು ವಕ್ಫ್ ಬೋರ್ಡ್‌ಗೆ ಸೇರಿಸುವ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿದೆ. ಇದೀಗ ಈ ವಿಚಾರವಾಗಿ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೀಗ ಈ ವಿಚಾರವಾಗಿ ವಿಜಯಪುರದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಅವರು, ಒಂದ್​ ಫೂಟ್​​​​​​​​ ಜಮೀನು ವಕ್ಫ್​​ಗೆ ಬಿಟ್ಟು ಕೊಡಲ್ಲ.  ಜಮೀನು ಉಳಿಸಿಕೊಳ್ಳಲು ಪ್ರಾಣ ಹೋದ್ರೂ ಪರವಾಗಿಲ್ಲ ಎಂದಿದ್ದಾರೆ.

ಇನ್ನು16 ಸಾವಿರ ಎಕರೆ ಆಗೈತಿ, ಜಮೀರ ಬರುವ ಮೊದಲ 11 ಸಾವಿರ ಎಕರೆ ಅಂದಿದ್ದರು. ಈಗ 16 ಸಾವಿರ ಎಕರೆ ಅನ್ನಲಿಲಕತ್ತಾರ, ಮುಂದ 20 ಸಾವಿರ ಅಂತಾರ, ಮುಂದೆ ವಿಧಾನಸಭೆ ನಮ್ಮದು ಅಂತಾರೆ. ದೇವಸ್ಥಾನ ನಮ್ಮವು ಅಂತಾರೆ ಮೊದಲು ವಕ್ಪ್ ಕಾಯ್ದೆ ತೊಲಗಬೇಕಿದೆ ಎಂದು ಗುಡುಗಿದ್ದಾರೆ.

ನೋಟಿಸ್​ ಬಂದಿರೋ ರೈತರು ಆತಂಕ ಪಡೋದು ಬೇಡ. ನ್ಯಾಯ ಕೊಡಿಸಲು ಹೈಕೋರ್ಟ್​ನಲ್ಲಿ ಹೋರಾಟ ಮಾಡ್ತೀನಿ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಜನಜಾಗೃತಿ ಮಾಡುತ್ತೇವೆ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಯತ್ನಾಳ್​ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ : ಯಲಹಂಕದಲ್ಲಿ ಮತ್ತೆ ಭೂ ಮಾಫಿಯಾ ಸದ್ದು.. ಸೂರಿಗಾಗಿ ಬೀದಿಗೆ ಬಂದ ದೇಶ ಕಾದಿದ್ದ ನೂರಾರು ಸೈನಿಕರು..!

Leave a Comment

DG Ad

RELATED LATEST NEWS

Top Headlines

ಬಿಟಿವಿ ವರದಿಯ ಇಂಪ್ಯಾಕ್ಟ್ – ಬೆಂಗಳೂರು ದಕ್ಷಿಣ ಎಸಿ ರಜನಿಕಾಂತ್ ಎತ್ತಂಗಡಿ..!

ಬೆಂಗಳೂರು : ಖಾತಾ ಮಾಡಿಕೊಡಲು ಫೋನ್​ ಪೇ / ಆನ್ ಲೈನ್ ಮೂಲಕ ಲಂಚ ವಸೂಲಿ ಮಾಡಿದ್ದ ಬೆಂಗಳೂರು ದಕ್ಷಿಣ AC ರಜನಿಕಾಂತ್ ಅವರನ್ನು ವರ್ಗಾವಣೆ ಮಾಡಲಾಗಿದೆ.

Live Cricket

Add Your Heading Text Here