Download Our App

Follow us

Home » ರಾಜಕೀಯ » ವಕ್ಫ್ ಬೋರ್ಡ್ ಜಮೀನು ವಿವಾದ – ನ.4ರಂದು ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿದ ಬಿ.ವೈ ವಿಜಯೇಂದ್ರ‌..!

ವಕ್ಫ್ ಬೋರ್ಡ್ ಜಮೀನು ವಿವಾದ – ನ.4ರಂದು ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿದ ಬಿ.ವೈ ವಿಜಯೇಂದ್ರ‌..!

ಬೆಂಗಳೂರು : ವಿಜಯಪುರ ಜಿಲ್ಲೆಯ ರೈತರಿಗೆ ವಕ್ಫ್‌ ಬೋರ್ಡ್​ನಿಂದ ನೋಟಿಸ್ ವಿಚಾರ ಸದ್ಯ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ ವಕ್ಫ್ ಬೋರ್ಡ್ ವಿವಾದ  8 ಜಿಲ್ಲೆಗಳಿಗೆ ವಿಸ್ತರಿಸಿದೆ. ಇದರಿಂದ ಕೆರಳಿದ ರೈತರು ಹಲವು ದಿನಗಳಿಂದ ನಮ್ಮ ಭೂಮಿ ವಾಪಸ್ ಕೊಡಿಸಿ ಎಂದು ಜಿಲ್ಲೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದೀಗ ವಕ್ಫ್ ಬೋರ್ಡ್ ರೈತರಿಗೆ ನೋಟಿಸ್​​ ನೀಡಿದ ಹಿನ್ನಲೆ ನ.4ಕ್ಕೆ ರಾಜ್ಯಾದ್ಯಂತ ಹೋರಾಟಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ‌ ಕರೆ ನೀಡಿದ್ದಾರೆ.

ನೊಂದ ರೈತರ ಜೊತೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ತಹಶೀಲ್ದಾರ್ ಕಚೇರಿ ಮುಂದೆ ಹೋರಾಟ ನಡೆಸಲು ಸಜ್ಜಾಗಿರುವ ಬಿಜೆಪಿ ನಾಯಕರು, ವಕ್ಫ್ ಆಸ್ತಿ, ಪರಭಾರೆ ನಿಷೇಧಿಸಿದೆ ಎಂದು ನಮೂದಿಸಿರುವ ಪಹಣಿಗಳನ್ನ ಹಿಂಪಡೆಯಬೇಕು ಎಂದು ಒತ್ತಾಯಿಸಲಿದೆ.
ಅಷ್ಟೇ ಅಲ್ಲದೆ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿದ ಬಿಜೆಪಿ, ಸಚಿವ ಜಮೀರ್ ಅಹಮದ್ ಅವರನ್ನ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಹೋರಾಟ ನಡೆಸಲು ತೀರ್ಮಾನಿಸಿದೆ.

ಇದನ್ನೂ ಓದಿ : ಕಲಬುರಗಿ ಜಿಲ್ಲೆಗೂ ವ್ಯಾಪಿಸಿದ ವಕ್ಫ್ ಭೂಮಿ ವಿವಾದ – 45 ರೈತರಿಗೆ ನೋಟಿಸ್..!

Leave a Comment

DG Ad

RELATED LATEST NEWS

Top Headlines

ನಟ ಸಲ್ಮಾನ್ ಖಾನ್​ಗೆ ಮತ್ತೆ ಜೀವ ಬೆದರಿಕೆ.. 2 ಕೋಟಿ ರೂ.ಗೆ ಬೇಡಿಕೆ..!

ಮುಂಬೈ : ಬಾಲಿವುಡ್ ಸೂಪರ್‌ ಸ್ಟಾರ್ ಸಲ್ಮಾನ್ ಖಾನ್‌ ಅವರಿಗೆ ಮತ್ತೊಂದು ಕೊಲೆ ಬೆದರಿಕೆ ಬಂದಿದೆ. ಅನಾಮಧೇಯ ವ್ಯಕ್ತಿ 2 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟು, ಹಣ ಪಾವತಿಸದಿದ್ದರೆ ನಟನನ್ನು

Live Cricket

Add Your Heading Text Here