ನೆಲಮಂಗಲ : ವಿನೋದ್ ರಾಜ್ ಅವರು ಇತ್ತೀಚೆಗೆ ದರ್ಶನ್ ಅವರನ್ನು ಜೈಲಲ್ಲಿ ಭೇಟಿ ಆಗಿದ್ದರು. ಆ ಬಳಿಕ ರೇಣುಕಾ ಸ್ವಾಮಿ ಕುಟುಂಬದವರನ್ನೂ ಮೀಟ್ ಮಾಡಿದ್ದರು. ಹಾಗಾಗಿ ವಿನೋದ್ ರಾಜ್ ರಾಜಿ ಸಂಧಾನ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಈ ಬಗ್ಗೆ ವಿನೋದ್ ರಾಜ್ ಅವರು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ನೆಲಮಂಗಲದಲ್ಲಿ ವಿನೋದ್ ರಾಜ್ ಮಾತನಾಡಿ, ನಾನು ರಾಜೀ ಸಂಧಾನಕ್ಕೆ ಹೋಗಿಲ್ಲ, ಕೆಲ ದಿನಗಳ ಹಿಂದೆ ಜೈಲಿನಲ್ಲಿ ನಟ ದರ್ಶನ್ ಭೇಟಿ ಮಾಡಿದ್ದೆ. ರೇಣುಕಾಸ್ವಾಮಿ ಫ್ಯಾಮಿಲಿಗೆ ಸಾಂತ್ವನ ಹೇಳಬೇಕಿತ್ತು, ಹೀಗಾಗಿ ಅವರ ಕುಟುಂಬವನ್ನೂ ಭೇಟಿ ಮಾಡಿ ಬಂದಿದ್ದೇನೆ. ಕೆಲವರು ರಾಜೀ ಸಂಧಾನ ಅಂತೆಲ್ಲಾ ಮಾತನಾಡುತ್ತಿದ್ದಾರೆ, ಸೋಷಿಯಲ್ ಮೀಡಿಯಾಗಳಲ್ಲಿ ಕೆಲವರು ಆರೋಪ ಮಾಡ್ತಿದ್ದಾರೆ. ದರ್ಶನ್ ಒಬ್ಬ ಕಲಾವಿದ, ಹೀಗಾಗಿ ಕಲಾವಿದನಾಗಿ ನಾನು ಭೇಟಿ ಮಾಡಿದ್ದೆ ಎಂದಿದ್ದಾರೆ.
ರೇಣುಕಾಸ್ವಾಮಿ ಪತ್ನಿ ಗರ್ಭಿಣಿಯಾಗಿದ್ದಾರೆ, ಹುಟ್ಟುವ ಮಗುವಿಗೆ ಒಳ್ಳೆಯದನ್ನು ಮಾಡುವ ಉದ್ದೇಶ ನನಗಿತ್ತು. ನನ್ನ ಕೈಲಾದ ಧನ ಸಹಾಯ ಮಾಡುವ ಉದ್ದೇಶದಿಂದ ಭೇಟಿ ಮಾಡಿದ್ದೆ ಎಂದು
ನಟ ವಿನೋದ್ ರಾಜ್ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ : ಬೆಂಗಳೂರು TO ಮೈಸೂರು ಪಾದಯಾತ್ರೆಗೆ ಸ್ವಪಕ್ಷದಲ್ಲೇ ಅಪಸ್ವರ – ಪರ್ಯಾಯ ಪಾದಯಾತ್ರೆಗೆ ಸಜ್ಜಾದ ಯತ್ನಾಳ್, ಜಾರಕಿಹೊಳಿ..!