Download Our App

Follow us

Home » ಜಿಲ್ಲೆ » ವಿಜಯಪುರದಲ್ಲಿ ಕುಡಿಯುವ ನೀರಿಗಾಗಿ ಟವರ್ ಏರಿ ಯುವಕನ ಹುಚ್ಚಾಟ..!

ವಿಜಯಪುರದಲ್ಲಿ ಕುಡಿಯುವ ನೀರಿಗಾಗಿ ಟವರ್ ಏರಿ ಯುವಕನ ಹುಚ್ಚಾಟ..!

ವಿಜಯಪುರ : ಕುಡಿಯುವ ನೀರಿಗಾಗಿ ಯುವಕನೊಬ್ಬ ಟವರ್ ಏರಿ ಹುಚ್ಚಾಟ ಮೆರೆದಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಸತೀಶ್ ಚಂದ್ರಶೇಖರ ಕಡಣಿ ಎಂಬಾತ ಅರೆ ಬೆತ್ತಲಾಗಿ ಇಂಡಿ ಪಟ್ಟಣದ ಬಸವೇಶ್ವರ ಸರ್ಕಲ್​ನಲ್ಲಿರೋ ಮೊಬೈಲ್​​ ಟವರ್​​ ಏರಿ ಹೈಡ್ರಾಮಾ ಸೃಷ್ಟಿಸಿದ್ದಾನೆ.

ವಿಜಯಪುರದ ತೆಗ್ಗಿಹಳ್ಳಿ ಗ್ರಾಮದಲ್ಲಿ ಸುಮಾರು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಇದೆ ಈ ಬಗ್ಗೆ ಹಲವು ಬಾರಿ ಪಿಡಿಒ‌ ಮತ್ತು ತಾಲ್ಲೂಕು ಅಧಿಕಾರಿಗಳ ಗಮನಕ್ಕೆ ತಂದ್ರೂ ಕ್ರಮ ವಹಿಸಿಲ್ಲ ಇದರಿಂದ ಸತೀಶ್ ಬೇಸತ್ತು, ಅಧಿಕಾರಿಗಳ ಗಮನ ಸೆಳೆಯಲು ಬೆಳಗ್ಗೆ 4 ಗಂಟೆಗೆ ಮೊಬೈಲ್​​ ಟವರ್ ಏರಿದ್ದಾನೆ.

ಯುವಕ 250 ಅಡಿ ಎತ್ತರದ ಟವರ್‌ನ ತುದಿಗೆ ಏರಿದ್ದಾನೆ. ಕೆಳಗೆ ಬರವಂತೆ ಎಷ್ಟೇ ಮನವಿ ಮಾಡಿದರೂ ಆತ ಕೆಳಗಿಳಿದಿಲ್ಲ. ನನಗೆ ನನ್ನೂರಿನ ಸಮಸ್ಯೆ ಬಗೆಹರಿಯಬೇಕು, ಸಂಬಂಧಪಟ್ಟವರು ಇಲ್ಲಿಗೆ ಬಂದು ಭರವಸೆ ಕೊಡಬೇಕು. ಆಗ ಮಾತ್ರ ಇಳಿಯುತ್ತೇನೆ ಎಂದು ಹೇಳಿದ್ದಾನೆ. ಈ ವೇಳೆ ಟವರ್‌ ಹತ್ತಿ ಆತನನ್ನು ಕಾಪಾಡಲು ಮುಂದಾದರೆ, ಟವರ್‌ನಿಂದ ಹಾರಿ ಬಿಡುವುದಾಗಿ ಬೆದರಿಸಿದ್ದಾನೆ. ಕೂಡಲೇ ಸಾರ್ವಜನಿಕರು ಅಗ್ನಿಶಾಮಕ ದಳಕ್ಕೆ ಮಾಹಿತಿಯನ್ನು ನೀಡಿದ್ದಾರೆ. ನಂತರ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಯುವಕನನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ : ಚುನಾವಣಾಧಿಕಾರಿಗಳಿಗೆ ಬೇಕಿದೆ 1700 ವೆಹಿಕಲ್ಸ್ : ವಾಹನಗಳಿಗೆ ಫುಲ್ ಡಿಮ್ಯಾಂಡ್..!

Leave a Comment

DG Ad

RELATED LATEST NEWS

Top Headlines

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ : ಪುರುಷರ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟ ನವದೀಪ್ ಸಿಂಗ್..!

ಪ್ಯಾರಿಸ್ : ಪ್ಯಾರಾಲಿಂಪಿಕ್ಸ್​ನಲ್ಲಿ ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋ ಎಫ್​41 ಸ್ಪರ್ಧೆಯಲ್ಲಿ ಭಾರತದ ಜಾವೆಲಿನ್ ಎಸೆತಗಾರ ನವದೀಪ್ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ. 47.32 ಮೀಟರ್‌ ದೂರಕ್ಕೆ

Live Cricket

Add Your Heading Text Here