ಮಾಧುರಿ ದೀಕ್ಷಿತ್ ಹಾಗೂ ವಿದ್ಯಾ ಬಾಲನ್ ಅದ್ಭುತ ನಟಿಯರು ಜೊತೆಗೆ ಬಹಳ ಒಳ್ಳೆಯ ನೃತ್ಯಗಾರ್ತಿಯರು. ವಿದ್ಯಾ ಬಾಲನ್ ಮತ್ತು ಮಾಧುರಿ ದೀಕ್ಷಿತ್ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿರುವ ‘ಭೂಲ್ ಭುಲಯ್ಯ 3’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ.
ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭೂಲ್ ಭುಲೈಯಾ 3 ಚಿತ್ರದ ಹಾಡಿಗೆ ವಿದ್ಯಾ ಬಾಲನ್ ಅವರು ಮಾಧುರಿ ದೀಕ್ಷಿತ್ ಜೊತೆ ಗ್ರೇಸ್ ಫುಲ್ ಆಗಿ ಹೆಜ್ಜೆಹಾಕಿದ್ದಾರೆ. ಅದ್ಭುತ ನೃತ್ಯದ ಮೂಲಕ ಇಬ್ಬರೂ ತಾರಯರು ಪ್ರೇಕ್ಷಕರನ್ನು ರಂಜಿಸುತ್ತಿದ್ದರು.
ಆದರೆ ಏಕಾಏಕಿ ವಿದ್ಯಾ ಅವರು ಆಯ ತಪ್ಪಿ ಬಿದ್ದುಬಿಟ್ಟರು. ಆದರೆ ಅದೇ ವೇಳೆ ಸಮಯ ಪ್ರಜ್ಞೆ ಮೆರೆದ ನಟಿ, ಕೂಡಲೇ ಕುಳಿತಲ್ಲಿನಿಂದಲೇ ನೃತ್ಯಕ್ಕೆ ಸ್ಟೆಪ್ ಹಾಕಿ, ಏನೂ ಆಗಿಲ್ಲ ಎನ್ನುವಂತೆ ಎದ್ದುನಿಂತು ನೃತ್ಯ ಮುಂದುವರೆಸಿದ್ದಾರೆ.
ಈ ಸಮಯದಲ್ಲಿ ಈ ನೃತ್ಯ ನೋಡುತ್ತಿದ್ದವರು ಮೆಚ್ಚುಗೆಯ ಚಪ್ಪಾಳೆ ನೀಡಿದರು. ಈ ವಿಡಿಯೋ ಕ್ಲಿಪ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿದ್ಯಾ ಬಾಲನ್ ಅವರ ಪ್ರತಿಭೆ ಮತ್ತು ಸಮಚಿತ್ತತೆಗೆ ಎಲ್ಲರೂ ಮುಕ್ತಕಂಠದಿಂದ ಹೊಗಳುತ್ತಿದ್ದಾರೆ.
ಇದನ್ನೂ ಓದಿ : ಪತ್ನಿ ಸೋನಲ್ ಮೊಂಥೆರೋ ಜೊತೆ ಹಾಸನಾಂಬೆ ದರ್ಶನ ಪಡೆದ ನಿದೇರ್ಶಕ ತರುಣ್ ಸುಧೀರ್..!
Post Views: 9