ತಮ್ಮ ಅಮೋಘ ಅಭಿನಯ ಹಾಗೂ ಕಂಚಿನ ಕಂಠದ ಮೂಲಕ ಕನ್ನಡಿಗರ ಮನಗೆದ್ದಿರುವ ನಟ ವಸಿಷ್ಠ ಸಿಂಹ ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರಕ್ಕೆ ” ವಿಐಪಿ” ಎಂದು ಹೆಸರಿಡಲಾಗಿದೆ. ಮಕರ ಸಂಕ್ರಾಂತಿಯ ಪರ್ವಕಾಲದಲ್ಲಿ ಈ ನೂತನ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ.
ಕಲಾ ಸೃಷ್ಟಿ ಪ್ರೊಡಕ್ಷನ್ಸ್ ನಿರ್ಮಾಣದ, ಬ್ರಹ್ಮ ನಿರ್ದೇಶನದ ಈ ಚಿತ್ರ ವಿಭಿನ್ನ ಕಥಾಹಂದರ ಹೊಂದಿದೆ. ಮತ್ತೊಂದು ವಿಶೇಷವೆಂದರೆ “ವಿಐಪಿ” ಅಭಿಮಾನಿಗಳು ವಸಿಷ್ಠ ಸಿಂಹ ಅವರಿಗೆ ರಾಯಲ್ ಸ್ಟಾರ್ ಎಂಬ ಬಿರುದು ನೀಡಿದ್ದಾರೆ. ವಸಿಷ್ಠ ಸಿಂಹ ಈ ಚಿತ್ರದಿಂದ ರಾಯಲ್ ಸ್ಟಾರ್ ವಸಿಷ್ಠ ಸಿಂಹ ಆಗಿ ಮಿಂಚಲಿದ್ದಾರೆ.
ಬೆಂಗಳೂರಿನ ಸುತ್ತಮುತ್ತಾ “ವಿಐಪಿ” ಚಿತ್ರದ ಚಿತ್ರೀಕರಣ ಅದ್ದೂರಿಯಾಗಿ ಬಿರುಸಿನಿಂದ ಸಾಗಿದೆ. ಕೊಡಗು, ಸಕಲೇಶಪುರದಲ್ಲೂ ಚಿತ್ರೀಕರಣ ನಡೆಯಲಿದೆ.
ಕಲಾಸೃಷ್ಠಿ ಪ್ರೊಡಕ್ಷನ್ಸ್ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಿದು. ಈ ಚಿತ್ರಕ್ಕೆ ಅಫ್ಜಲ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಗಿಣಿ ಅಭಿನಯದ “ಸಾರಿ” ಕರ್ಮ ರಿಟರ್ನ್ಸ್ ಚಿತ್ರದ ನಿರ್ದೇಶಕ ಬ್ರಹ್ಮ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಕ್ರೈಮ್ ಥ್ರಿಲ್ಲರ್ ಹಾಗೂ ರಿವೆಂಜ್ ಕಥಾಹಂದರ ಹೊಂದಿರುವ ಈ ಚಿತ್ರ ಹಾಲಿವುಡ್ ಸ್ಟೈಲ್ ನಲ್ಲಿ (ನಾನ್ ಲೀನಿಯರ್ ಸ್ಕ್ರೀನ್ ಪ್ಲೇ) ಮೇಕಿಂಗ್ ಇರಲಿದೆ. ಮೋಹನ್ ಕುಮಾರ್ “ವಿಐಪಿ” ಚಿತ್ರಕ್ಕೆ ಕಥೆ ಬರೆದಿದ್ದಾರೆ. ರಾಜೀವ್ ಗಣೇಶನ್ ಚಿತ್ರಕಥೆ ಬರೆದು ಛಾಯಾಗ್ರಾಹಕರಾಗೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನ, ಸತೀಶ್ ಚಂದ್ರಯ್ಯ ಸಂಕಲನ ಹಾಗೂ ಕೆಜಿಎಫ್ ಖ್ಯಾತಿಯ ವಿಕ್ರಮ್ ಮೋರ್ ಸಾಹಸ ನಿರ್ದೇಶನ ಚಿತ್ರದಲ್ಲಿರಲಿದೆ.
ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ಕಾರ್ಯಕಾರಿ ನಿರ್ಮಾಪಕ ಅಫ್ಜಲ್ ತಿಳಿಸಿದ್ದಾರೆ.
ಇದನ್ನೂ ಓದಿ : ಅಯೋಧ್ಯೆಯಲ್ಲಿ ಕರ್ನಾಟಕದ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆಗೆ ಫೈನಲ್..!