ಬೆಂಗಳೂರು : ಸೀರಿಯಲ್ ನಟ ವರುಣ್ ಆರಾಧ್ಯ ವಿರುದ್ಧ ಮಾಜಿ ಪ್ರೇಯಸಿ ಕಂಪ್ಲೇಟ್ ಮಾಡಿದ್ದರು. ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುವ ಬಗ್ಗೆ ಸೆಪ್ಟೆಂಬರ್ 7ರಂದು ಬೆಂಗಳೂರು ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆ ಸೆನ್ ಠಾಣೆಯಲ್ಲೇ ವರುಣ್ ವಿರುದ್ಧ FIR ಕೂಡಾ ದಾಖಲಾಗಿತ್ತು. ಆದರೀಗ ಮಾಜಿ ಪ್ರೇಯಸಿಯೇ ತನ್ನ ಇನ್ಸ್ಟಾದಲ್ಲಿ ಇದು ಸುಳ್ಳು ಸುದ್ದಿ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಮಾಧ್ಯಮದಲ್ಲಿ ನೋಡುತ್ತಿರುವುದು ಸುಳ್ಳು ಮಾಹಿತಿ. ಫೇಕ್ ಸುದ್ದಿ ಹರಡುವುದನ್ನ ನಿಲ್ಲಿಸಿ ಅಂತ ಇನ್ಸ್ಟಾದಲ್ಲಿ ವರುಣ್ ಆರಾಧ್ಯ ಮಾಜಿ ಪ್ರೇಯಸಿ ಇದೀಗ ಪೋಸ್ಟ್ ಹಂಚಿಕೊಂಡಿದ್ದಾರೆ. ಫೋಟೋ, ವಿಡಿಯೋ ಬಿಡ್ತೀನಿ ಅಂತಾ ವರುಣ್ ಆರಾಧ್ಯ ಹೇಳೇ ಇಲ್ಲ ಅನ್ನೋ ಸತ್ಯ ಇದೀಗ ಖುದ್ದು ರೀಲ್ಸ್ ರಾಣಿಯಿಂದಲೇ ಬಟಾಬಯಲಾಗಿದೆ.
ಸೆ.7ರಂದು ಮಾಜಿ ಪ್ರೇಯಸಿಯೇ ನಟ ವರುಣ್ ಆರಾಧ್ಯ ವಿರುದ್ಧ ದೂರು ದಾಖಲಿಸಿದ್ದರು. ನನ್ನ ಖಾಸಗಿ ವಿಡಿಯೋ ಆತ ಮೊಬೈಲ್ ನಲ್ಲಿ ತೆಗೆದುಕೊಂಡಿದ್ದಾನೆ. 2023ರ ಜುಲೈನಲ್ಲಿ ವರುಣ್ ಮೊಬೈಲ್ನಲ್ಲಿ ಮತ್ತೊಂದು ಹುಡುಗಿಯ ಖಾಸಗಿ ವಿಡಿಯೋ ಇತ್ತು. ಖಾಸಗಿ ವಿಡಿಯೋ ಹಾಗೂ ಫೋಟೋ ನೋಡಿ ಅಫೆರ್ ಬಗ್ಗೆ ಪ್ರಶ್ನೆ ಮಾಡಿದಾಗ ನನಗೆ ಬೆದರಿಕೆ ಹಾಕಿದ್ದಾನೆ. ಅಲ್ಲದೆ ವಾಟ್ಸ್ಆ್ಯಪ್ ನಲ್ಲಿ ನನ್ನ ಖಾಸಗಿ ಫೋಟೋ ಕೂಡ ಕಳುಹಿಸಿದ್ದಾನೆ.
ಯಾಕೆ ಕಳುಹಿಸುತ್ತೀಯಾ? ಅಂತ ಕೇಳಿದಾಗ ಇನ್ನೂ ಫೋಟೋ, ವಿಡಿಯೋ ಇವೆ ಅಂತ ಬೆದರಿಕೆ ಹಾಕಿದ್ದಾನೆ. ಅವುಗಳನ್ನ ಜಾಲತಾಣದಲ್ಲಿ ಹರಿಬಿಡ್ತೇನೆ. ಬೇರೆಯವರ ಜೊತೆ ಮದುವೆ ಆದರೆ ಆತನನ್ನ ಸೇರಿಸಿ ನಿನ್ನನ್ನೂ ಸಾಯಿಸ್ತೇನೆ ಅಂತ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಮಾಜಿ ಪ್ರೇಯಸಿ ದೂರಿನಲ್ಲಿ ಉಲ್ಲೇಖಿಸಿದ್ದರು. ಆದರೆ ತನ್ನ ಇನ್ಸ್ಟಾದಲ್ಲಿ ಮಾತ್ರ ಸುಳ್ಳು ಸುದ್ದಿ ಅಂತ ವರುಣ್ ಮಾಜಿ ಪ್ರೇಯಸಿ ಪೋಸ್ಟ್ ಮಾಡಿದ್ದಾಳೆ.
ಇದನ್ನೂ ಓದಿ : ಶೂಟಿಂಗ್ ಮನೆ ಮಾಡಲು ಹೋಗಿ ದೊಡ್ಡ ಲಾಸ್ ಆಗಿ 70 ಲಕ್ಷ ಸಾಲ ಮಾಡಿಕೊಂಡೆ – ನಟಿ ಅನುಪಮಾ ಗೌಡ..!