ಅಕ್ಕ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ಅನುಪಮಾ ಗೌಡ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಎರಡು ಸಲ ಸ್ಪರ್ಧಿಸಿ ಆನಂತರ ಹಲವಾರು ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿದ್ದಾರೆ. ಹಿರಿತೆರೆ, ಕಿರುತೆರೆ ಎರಡರಲ್ಲಿಯೂ ಸಕತ್ ಆ್ಯಕ್ಟೀವ್ ಆಗಿರುವ ನಟಿ ಅನುಪಮಾ ಗೌಡ ನಟನೆಗೂ ಸೈ, ನಿರೂಪಣೆಗೂ ಸೈ ಎನ್ನುವುದನ್ನು ಇದಾಗಲೇ ತೋರಿಸಿಕೊಡುತ್ತಿದ್ದಾರೆ. ಈ ಮೂಲಕ ನಟಿ ಕಮ್ ನಿರೂಪಕಿ ಎಂದೇ ಫೇಮಸ್ ಆಗಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿದ ಅನುಪಮಾ ಗೌಡ ಅವರು ನಾನು ಸ್ಟ್ರಾಂಗ್ ಆಗಿ ಇಂಡಿಪೆಂಡೆಂಟ್ ಆಗಿ ಜೀವನ ನಡೆಸಲು ಕಾರಣವೇ ದೇವರ ಶಕ್ತಿ ಮತ್ತು ಎದುರಿಸಿದ ಸವಾಲುಗಳು ಎಂದಿದ್ದಾರೆ.
ನನಗೆ ದೇವರ ಪೂಜೆ ಮಾಡಲು ಬರುತ್ತದೆ ಆದರೆ ಒಂದೂ ದೇವರ ಮಂತ್ರ ಬರುವುದಿಲ್ಲ. ಇವತ್ತು ರಾತ್ರಿ ಮಲಗಿದವರು ನಾಳೆ ಬೆಳಗ್ಗೆ ಎದ್ದೇಳುತ್ತಾರೆ ಇಲ್ಲ ಅನ್ನೋ ಪರಿಸ್ಥಿತಿಯಲ್ಲಿ ಇದ್ದೀವಿ ನಾವು, ಇವತ್ತು ನಾನು ಎದ್ದಿದ್ದೀನಿ ಅಂದ್ರೆ ದೇವರಿಗೆ ಕೃತಜ್ಞತೆಗಳನ್ನು ತಿಳಿಸುತ್ತೀನಿ ಅಷ್ಟೇ ಅಲ್ಲ ಏನೋ ಉದ್ದೇಶವಿದ್ದು ನಾನು ಈ ದಿನ ಅರಂಭಿಸುತ್ತಿರುವೆ ಅನಿಸುತ್ತದೆ. ಕಳೆದ 6 ವರ್ಷಗಳ ಹಿಂದೆ ನನಗೆ ಈ ಬುದ್ಧಿ ಇದ್ದಿದ್ದರೆ ನಾನು ತುಂಬಾ ಬದಲಾಗುತ್ತಿದೆ. ದೇವರ ಪೂಜೆ ಹೀಗೆ ಮಾಡಬೇಕು ಹಾಗೆ ಮಾಡಬೇಕು ಅನ್ನೋದು ನಾನು ನಂಬುವುದಿಲ್ಲ ಆದರೆ ಮನಸ್ಸಿನಿಂದ ಪೂಜೆ ಮಾಡುತ್ತೀನಿ.
ಇದುವರೆಗೂ ದೇವರ ಬಳಿ ನಾನೂ ಏನೂ ಬೇಡಿಕೊಂಡಿಲ್ಲ, ಇರೋಕೆ ಮನೆ ಇದೆ ಬಾಡಿಗೆ ಕಟ್ಟಲು ದೇವರು ಶಕ್ತಿ ಕೊಟ್ಟಿದ್ದಾನೆ, ಕೆಲಸ ಮಾಡಲು ಯೋಗ್ಯತೆ ಕೊಟ್ಟಿದ್ದಾನೆ. ಜನ ನನ್ನನ್ನು ಇನ್ನು ನೋಡುತ್ತಿದ್ದಾರೆ ಹಾಗೇ ನನಗೆ ಮೂರು ಹೊತ್ತು ಊಟ ಇದೆ. ಇದಕ್ಕಿಂತ ಜೀವನದಲ್ಲಿ ನನಗೆ ಏನು ಬೇಕು? ನನ್ನ ಸುತ್ತ ಪಾಸಿಟಿವ್ ವಾತಾವರಣ ಮಾಡಿಕೊಟ್ಟಿರುವುದು ಆ ದೇವರೆ. ಇತ್ತೀಚಿಗೆ ಯಾವತ್ತೂ ಯಾವ ಬಗ್ಗೆನೂ ನೆಗೆಟಿವ್ ಆಗಿ ಮಾತನಾಡುವುದಿಲ್ಲ ಹೀಗಾಗಿ ನಾನು ಸದಾ ಪಾಸಿಟಿವ್ ಆಗಿರುವೆ. ಜನರು ಮಾತನಾಡಿದಾಗ ನೆಗೆಟಿವ್ ಎನರ್ಜಿ ನನಗೂ ಅಫೆಕ್ಟ್ ಆಗುತ್ತೆ ಆದರೂ ನಾನು ದೇವರ ಪೂಜೆ ಮಾಡಿ ಮುಂದುವರೆಸಿದೆ ಎಂದು ಹೇಳಿದ್ದಾರೆ.
ಕುಟುಂಬದ ಜೊತೆ ಸೇರಿಕೊಂಡು ನಾನು ಶೂಟಿಂಗ್ ಮನೆ ಮಾಡಲು ಹೋಗಿ ದೊಡ್ಡ ಲಾಸ್ ಆಗಿ ನಾನು 70 ಲಕ್ಷ ಸಾಲ ಮಾಡಿಕೊಂಡೆ. 7-8 ವರ್ಷ ಹಿಂದೆ ಈ ಘಟನೆ ನಡೆಯಿತ್ತು. ಅಕ್ಕ ಸೀರಿಯಲ್ ಸಮಯದಲ್ಲಿ ದುಡಿಯುತ್ತಿದೆ ದಾರಿ ಮಾಡಿಕೊಂಡು ಸಾಲ ತೀರಿಸಬೇಕಿತ್ತು. ಫ್ರೆಂಡ್ಸ್ ಬಿಟ್ಟು ನನಗೆ ಸಪೋರ್ಟ್ ಆಗಿ ಯಾರು ನಿಲ್ಲಲಿಲ್ಲ. ದೊಡ್ಡ ಶಕ್ತಿ ಆಗಿದ್ದು ನನ್ನ ಫ್ರೆಂಡ್ ನೇಹಾ ಗೌಡ. ಅದೇ ಸಮಯಕ್ಕೆ ನನಗೆ ಬಿಗ್ ಬಾಸ್ ಸೀಸನ್ 5 ಆಫರ್ ಕೈಗೆ ಬಂತು ಅಲ್ಲಿಂದ ನನ್ನ ಜೀವನದ ದಾರಿ ಬದಲಾಗಿತ್ತು ಎಂದು ಅನುಪಮಾ ಗೌಡ ಹೇಳಿದ್ದಾರೆ.
ಇದನ್ನೂ ಓದಿ : ಬೆಂಗಳೂರು : ರಾತ್ರಿ ವೇಳೆ ಲಾಂಗ್ ಡ್ರೈವ್ ಹೋಗಿದ್ದ ಮೂವರು ವಿದ್ಯಾರ್ಥಿಗಳು ಹಿಟ್ ಆ್ಯಂಡ್ ರನ್ಗೆ ಬಲಿ..!