Download Our App

Follow us

Home » ರಾಷ್ಟ್ರೀಯ » ಇಂದಿನಿಂದ ಅಯೋಧ್ಯೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆರಂಭ.. ಇಲ್ಲಿದೆ ಸಂಪೂರ್ಣ ಮಾಹಿತಿ..

ಇಂದಿನಿಂದ ಅಯೋಧ್ಯೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆರಂಭ.. ಇಲ್ಲಿದೆ ಸಂಪೂರ್ಣ ಮಾಹಿತಿ..

ಅಯೋಧ್ಯೆ : ಅಯೋಧ್ಯೆ ರಾಮಲಲ್ಲಾ ಪ್ರತಿಷ್ಠಾಪನೆಗೆ ದಿನಗಣನೆ ಶುರುವಾಗಿದ್ದು, ಇಂದಿನಿಂದ ಜನವರಿ 22ರವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. 11 ಮಂದಿ ಯಜಮಾನರಿಂದ ವೈದಿಕ ಸಂಪ್ರದಾಯದಂತೆ ದಿನಕ್ಕೊಂದು ಪೂಜೆ ನೇರವೇರಿಸಲಾಗುತ್ತದೆ.

ಅಯೋಧ್ಯೆ ಬೀದಿಗಳಲ್ಲಿ ಜ.17 ರಂದು ಶ್ರೀರಾಮನ ಮೆರವಣಿಗೆ, ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮಗಳ ವೇಳಾಪಟ್ಟಿ ಇಲ್ಲಿದೆ

ರಾಮಮಂದಿರದ ಉದ್ಘಾಟನೆಗೆ ಒಂದು ವಾರ ಮುಂಚಿತವಾಗಿ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ. ಮಹಾಮಸ್ತಕಾಭಿಷೇಕದ ವಿಧಿವಿಧಾನಗಳು ಜನವರಿ 16 ರಂದು ಪ್ರಾರಂಭವಾಗಲಿದ್ದು, ಏಳು ದಿನಗಳ ಕಾಲ ಅಂದರೆ ಜನವರಿ 22 ರವರೆಗೆ ನಡೆಯಲಿದೆ. ಮಂದಿರದ ಟ್ರಸ್ಟ್ ಏಳು ದಿನಗಳ ಆಚರಣೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ..

  • ಜನವರಿ 16 ರಂದು ದೇವಾಲಯದ ಟ್ರಸ್ಟ್ ನೇಮಿಸಿದ ಪ್ರಾಯಶ್ಚಿತ್ತ ಸಮಾರಂಭ ನಡೆಯಲಿದೆ. ಸರಯೂ ನದಿಯ ದಡದಲ್ಲಿ ‘ದಶವಿಧ’ ಸ್ನಾನ ನಡೆಯಲಿದೆ. ವಿಷ್ಣು ಪೂಜೆ ಮತ್ತು ಗೋದಾನವನ್ನು ಒಳಗೊಂಡಿರುತ್ತದೆ.
  • ಜನವರಿ 17 ರಂದು ಬಾಲರಾಮನ ರೂಪದಲ್ಲಿರುವ ರಾಮನ ವಿಗ್ರಹವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಭಕ್ತರು ಮಂಗಳ ಕಲಶದಲ್ಲಿ ಸರಯು ಜಲ ತುಂಬಿಸಿ ಮೆರವಣಿಯಲ್ಲಿ ಸಾಗಲಿದ್ದಾರೆ.
  • ಜನವರಿ 18 ರಂದು ಗಣೇಶ ಅಂಬಿಕಾ ಪೂಜೆ, ವರುಣನ ಪೂಜೆ, ಮಾತೃಕಾ ಪೂಜೆ, ಬ್ರಾಹ್ಮಣ ವರಣ, ವಾಸ್ತು ಪೂಜೆ ಮೊದಲಾದ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ.
  • ಜನವರಿ 19 ರಂದು ಅಗ್ನಿ ಸ್ಥಾಪನೆ, ನವಗ್ರಹ ಸ್ಥಾಪನೆ ಮತ್ತು ಹವನ ನಡೆಯಲಿದೆ.
  • ಜನವರಿ 20 ರಂದು ರಾಮಮಂದಿರದ ಗರ್ಭಗುಡಿಯನ್ನು ಸರಯುವಿನ ಪವಿತ್ರ ನೀರಿನಿಂದ ತೊಳೆಯಲಾಗುತ್ತದೆ. ಇದಾದ ನಂತರ ವಾಸ್ತು ಶಾಂತಿ, ಅನ್ನದಾನ ಸೇರಿದಂತೆ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ.
  • ಜನವರಿ 21 ರಂದು ರಾಮನ ವಿಗ್ರಹಕ್ಕೆ 125 ಕಲಶಗಳೊಂದಿಗೆ ದೈವಿಕ ಸ್ನಾನ ನೆರವೇರಲಿದೆ.
  •  ಜನವರಿ 22ರಂದು ವಿಗ್ರಹಕ್ಕೆ ಪೂಜೆ ನೆರವೇರಲಿದೆ ಮತ್ತು ಮಧ್ಯಾಹ್ನ ಮೃಗಶಿರಾ ನಕ್ಷತ್ರದಲ್ಲಿ ಅಭಿಷೇಕ ನಡೆಯಲಿದೆ. ಶ್ರೀರಾಮಲಲ್ಲಾ ಮೂರ್ತಿಯನ್ನು ಪ್ರಧಾನಿ ಮೋದಿಯವರು ಪ್ರತಿಷ್ಠಾಪಿಸಲಿದ್ದಾರೆ.

ಜನವರಿ 22ರಂದು ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ.  ಗರ್ಭಗುಡಿಯಲ್ಲಿ ಪ್ರಧಾನಿ ಮೋದಿ ಸೇರಿ ಹಲವರಿಗೆ ಅವಕಾಶವಿರಲಿದೆ.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​​​,  RSS ಸರ ಸಂಘಚಾಲಕ ಮೋಹನ್​ ಭಾಗವತ್​​​ ಮತ್ತು ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿ ಬೆನ್​​ ಪಟೇಲ್​​ , ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲದಾಸ್ ಸಾಥ್​​ ನೀಡಲಿದ್ದಾರೆ.

ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ 150 ಪಂಥಗಳ ಸ್ವಾಮೀಜಿಗಳು ಸಾನಿಧ್ಯ ವಹಿಸಲಿದ್ದಾರೆ. ದೇಗುಲ ನಿರ್ಮಿಸಿದ 500 ಮಂದಿ, ಟ್ರಸ್ಟ್​ ಸದಸ್ಯರು ಹಾಜರಿರುತ್ತಾರೆ. ಕಾರ್ಯಕ್ರಮಕ್ಕೆ ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಆಧ್ಯಾತ್ಮಿಕ ಕ್ಷೇತ್ರದ ಅನೇಕ ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸಲಾಗಿದೆ. ಸುಮಾರು 4,000 ಸಂತರು ಮತ್ತು 2,200 ಇತರ ಅತಿಥಿಗಳನ್ನು ಆಹ್ವಾನಿಸಲಾಗಿದೆ. ಗಣ್ಯ ವ್ಯಕ್ತಿಗಳ ಆಗಮನ ಹಿನ್ನೆಲೆ ಗುಪ್ತಚರ ತಂಡಗಳು ಅಯೋಧ್ಯೆಯಲ್ಲಿ ಬೀಡು ಬಿಟ್ಟಿದ್ದು ಭದ್ರತೆ ಕುರಿತಂತೆ ಸಿದ್ಧತೆ ಆರಂಭಿಸಿವೆ.

ಇದನ್ನೂ ಓದಿ : ಅಯೋಧ್ಯೆಯಲ್ಲಿ ಕರ್ನಾಟಕದ ಶಿಲ್ಪಿ ಅರುಣ್​ ಯೋಗಿರಾಜ್ ಕೆತ್ತಿರುವ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆಗೆ ಫೈನಲ್..!

 

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here