Download Our App

Follow us

Home » ರಾಜಕೀಯ » ವಾಲ್ಮೀಕಿ ಹಗರಣ – ಬಿ.ನಾಗೇಂದ್ರ ಸೇರಿ ಐವರು ಆರೋಪಿಗಳ ವಿರುದ್ದ ಚಾರ್ಜ್​ಶೀಟ್ ಸಲ್ಲಿಕೆ..!

ವಾಲ್ಮೀಕಿ ಹಗರಣ – ಬಿ.ನಾಗೇಂದ್ರ ಸೇರಿ ಐವರು ಆರೋಪಿಗಳ ವಿರುದ್ದ ಚಾರ್ಜ್​ಶೀಟ್ ಸಲ್ಲಿಕೆ..!

ಬೆಂಗಳೂರು : ವಾಲ್ಮೀಕಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಜಾರಿ ನಿರ್ದೇಶನಾಲಯ (ED) ಬಿ.ನಾಗೇಂದ್ರ ವಿರುದ್ಧ ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದೆ.  82ನೇ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ ಜಾರಿ ನಿರ್ದೇಶನಾಲಯ, ಹಗರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರು ಭಾಗಿಯಾಗಿದ್ದಾರೆ ಎಂದು ಉಲ್ಲೇಖಿಸಿದೆ.

ED ಅಧಿಕಾರಿಗಳು ದೋಷಾರೋಪ ಪಟ್ಟಿಯಲ್ಲಿ ಹಗರಣ ಹೇಗೆ ನಡೆಯಿತೆಂದು ಎಳೆಎಳೆಯಾಗಿ ಬರೆದಿದ್ದಾರೆ. ಪ್ರಕಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅವರೇ ಮಾಸ್ಟರ್ ಮೈಂಡ್ ಎಂದು ಚಾರ್ಜ್ ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ. ಮಾಜಿ ಸಚಿವ ಬಿ. ನಾಗೇಂದ್ರ ಅವರ ಅಣತಿಯಂತೆ ಸಂಪೂರ್ಣ ಹಣದ ವಹಿವಾಟು ನಡೆದಿದೆ. 21 ಕೋಟಿ ರೂ. ಹಣವನ್ನು ಲೋಕಸಭಾ ಚುನಾವಣೆಗೆ ಬಳಸಿದ್ದಾರೆ.

ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಮನಿಟ್ರಯಲ್ ನಡೆದಿದೆ ಎಂದು ತನಿಖೆ ವೇಳೆ ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಿ ನಾಗೇಂದ್ರ ಸೇರಿದಂತೆ ಐವರು ಆರೋಪಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಬಿ. ನಾಗೇಂದ್ರ ಅವರು ಹಗರಣದ ಆರೋಪಿ, ಹೈದರಾಬಾದ್​ನ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್​ನ ಎಂಡಿ ಸತ್ಯನಾರಾಯಣವರ್ಮಾ ಜೊತೆ ನಿಕಟ ಸಂಪರ್ಕ ಹೊಂದಿದ್ದು, ಹಣದ ಬಳಕೆಯ ಬಗ್ಗೆ ಚಾರ್ಜ್ ಶೀಟ್​ನಲ್ಲಿ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ : ಬಿಗ್​​ಬಾಸ್​ ಸೀಸನ್‌ 11ಕ್ಕೆ ಕೌಂಟ್​ಡೌನ್ – ಮುಕ್ತಾಯ ಹಂತಕ್ಕೆ ತಲುಪಿತು ಕಲರ್ಸ್ ಕನ್ನಡದ ಈ 2 ಸೀರಿಯಲ್​ಗಳು..!

Leave a Comment

DG Ad

RELATED LATEST NEWS

Top Headlines

ಪ್ರಭಾಸ್‌ ಜೊತೆಗೆ ಒಂದಲ್ಲ ಎರಡಲ್ಲ ಮೂರು ಸಿನಿಮಾಗಳನ್ನು ಘೋಷಿಸಿದ ಹೊಂಬಾಳೆ ಫಿಲಂಸ್‌..!

ಕನ್ನಡ ಚಿತ್ರಂಗಕ್ಕೆ ಮಾತ್ರ ಸೀಮಿತವಾಗದ ಹೊಂಬಾಳೆ ಫಿಲಂಸ್‌ ಸಂಸ್ಥೆ ಪರಭಾಷೆ ಸಿನಿಮಾಗಳಿಗೆ ಬಂಡವಾಳ ಹೂಡುವ ಮೂಲಕ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಕೆಜಿಎಫ್‌, ಕೆಜಿಎಫ್‌ 2, ಕಾಂತಾರ, ಸಲಾರ್‌, ಈಗ

Live Cricket

Add Your Heading Text Here