ಕನ್ನಡದಲ್ಲಿ ಬಿಗ್ ಬಾಸ್ ಕಲರವ ಮತ್ತೆ ಶುರು ಆಗಿದೆ. ಇನ್ನು ಒಂದು ತಿಂಗಳಲ್ಲಿಯೇ ಶೋ ಪ್ರಸಾರ ಆಗಲು ಸಜ್ಜಾಗಿದೆ. ಬಿಗ್ ಬಾಸ್ ಸೀಸನ್-11 ಶುರುವಾಗುತ್ತಿರುವ ಹಿನ್ನೆಲೆ ಒಂದೆರಡು ವರ್ಷಗಳಿಂದ ಪ್ರಸಾರ ಆಗುತ್ತಿರೋ ಸೀರಿಯಲ್‌ಗಳು ಎಂಡ್ ಆಗುತ್ತಿವೆ. 100 ದಿನಗಳ ಬಿಗ್ ಬಾಸ್‌ಗಾಗಿಯೇ ಫೇಮಸ್ ಸೀರಿಯಲ್‌ಗಳು ಕೊನೆ ಹಂತಕ್ಕೆ ಬಂದಿದೆ.
ಹೌದು, ಕಲರ್ಸ್ ಕನ್ನಡದಲ್ಲಿ ಈಗಾಗಲೇ ಅಂತರಪಟ ಸೀರಿಯಲ್ ಬರ್ತಿದ್ದು, ಇದು ಕಳೆದ ವರ್ಷದಿಂದಲೂ ಪ್ರಸಾರ ಆಗುತ್ತಿದೆ. ಒಂದು ಹಂತಕ್ಕೆ ಚೆನ್ನಾಗಿಯೇ ಹೋಗುತ್ತಿದೆ. ಆದರೆ, ಈ ಸೀರಿಯಲ್ ಎಂಡ್ ಆಗುತ್ತಿದೆ. ಈ ಮೂಲಕ ಈ ಸೀರಿಯಲ್ ಬಿಗ್ ಬಾಸ್ ಸೀಸನ್-11 ಕ್ಕೆ ದಾರಿ ಮಾಡಿಕೊಡುತ್ತಿದೆ.
ಇನ್ನು ಕೆಂಡಸಂಪಿಗೆ ಸೀರಿಯಲ್ ಕೂಡ ಕೊನೆ ಹಂತಕ್ಕೆ ಬಂದಿದೆ. ಕಳೆದ ಎರಡು ವರ್ಷದಿಂದಲೇ ಈ ಸೀರಿಯಲ್ ಪ್ರಸಾರ ಆಗುತ್ತಿದೆ. ಆದರೆ, ಕಲರ್ಸ್ ಕನ್ನಡ ಚಾನೆಲ್ ಈಗ ಈ ಸೀರಿಯಲ್ ಅನ್ನು ಎಂಡ್ ಮಾಡುತ್ತಿದೆ. ಹಾಗಾಗಿ ಈ ಸೀರಿಯಲ್ ಕೂಡ ಬಿಗ್ ಬಾಸ್‌ಗೆ ದಾರಿ ಮಾಡಿಕೊಡುತ್ತಿದೆ.
ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 11ರ ಶೋನಲ್ಲಿ ಈ ಸಲ ಯಾರೆಲ್ಲ ಇರ್ತಾರೆ ಅನ್ನುವ ಕುತೂಹ ದಿನೇ ದಿನೇ ಹೆಚ್ಚಾಗುತ್ತಿದೆ. ಇದರ ಮಧ್ಯೆ ಈ ಶೋವನ್ನ ಯಾರು ಹೋಸ್ಟ್ ಮಾಡುತ್ತಾರೆ ಅನ್ನೋ ಪ್ರಶ್ನೆ ಕೂಡ ಇದೆ. ಅದರ ಬೆನ್ನಲ್ಲಿಯೇ ರಿಷಬ್ ಶೆಟ್ಟಿ, ರಮೇಶ್ ಅರವಿಂದ್ ಹಾಗೂ ಕಿಚ್ಚ ಸುದೀಪ್ ಹೆಸರು ಕೂಡ ಕೇಳಿ ಬರುತ್ತಿದೆ. ಆದರೆ, ಯಾರು ಅನ್ನುವ ಕುತೂಹಲವನ್ನ ಕಲರ್ಸ್ ಕನ್ನಡ ಇನ್ನು ಬಿಟ್ಟುಕೊಟ್ಟಿಲ್ಲ. ಕುತೂಹಲ ಹಾಗೆ ಉಳಿಸಿಕೊಂಡು ಇದೀಗ ಒಂದು ಪ್ರೋಮೋ ಬಿಟ್ಟಿದೆ. ಈ ಪ್ರೊಮೋದ ಹ್ಯಾಶ್ ಟ್ಯಾಗ್‌ನಲ್ಲಿ ಕಿಚ್ಚ ಸುದೀಪ್ ಹೆಸರು ಇರ್ತದೆ ಅನ್ನುವ ನಿರೀಕ್ಷೆ ಇತ್ತು. ಆದರೆ, ಅಲ್ಲಿ ಏನೂ ಕಾಣಿಸುತ್ತಿಲ್ಲ. ಹಾಗಾಗಿಯೇ ಈಗ ಈ ವಿಚಾರ ಕೂಡ ಮತ್ತಷ್ಟು ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ದರ್ಶನ್‌ಗಾಗಿ ಶಕ್ತಿದೇವತೆಯ ಮೊರೆ ಹೋದ ಪತ್ನಿ ವಿಜಯಲಕ್ಷ್ಮಿ..!