ಬಳ್ಳಾರಿ : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ 187 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಗಣಿನಾಡು ಬಳ್ಳಾರಿಯಲ್ಲಿ ಮಾಜಿ ಸಚಿವ ಬಿ. ನಾಗೇಂದ್ರರ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೆಲವು ದಿನಗಳ ಹಿಂದೆಯಷ್ಟೇ ಇಡೀ ದಿನ ದಾಳಿ ನಡೆಸಿ ಮಹತ್ವದ ದಾಖಲೆ ಸಂಗ್ರಹಿಸಿದ್ದರು. ಅಲ್ಲದೇ ನಾಗೇಂದ್ರ ಆಪ್ತರನ್ನ ಕರೆಸಿ ಗಂಟೆಗಳ ಕಾಲ ಡ್ರಿಲ್ ಮಾಡಿದರು. ನಿರಂತರ 12 ಗಂಟೆಗಳ ಕಾಲ ತಲಾಶ್ ನಡೆಸಿದ ಇಡಿ ಅಧಿಕಾರಿಗಳು ದಾಳಿ ಮುಗಿಸಿ, ಎರಡು ಬ್ಯಾಗ್ ದಾಖಲೆಗಳೊಂದಿಗೆ ತೆರಳಿದ್ದರು.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ ಆಪ್ತರಿಗೆ ಮತ್ತೆ ಜಾರಿ ನಿರ್ದೇಶನಾಲಯ ಶಾಕ್ ಕೊಟ್ಟಿದೆ. ಇಂದು ಬೆಳ್ಳಂಬೆಳಗ್ಗೆಯೇ ಬಳ್ಳಾರಿ, ಕೊಪ್ಪಳ, ರಾಯಚೂರಿನಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಜಾರ್ಜ್ಶೀಟ್ ಸಲ್ಲಿಕೆಗೆ ಮುನ್ನವೇ ದಾಳಿ ಚುರುಕುಗೊಳಿಸಿರುವ ಇಡಿ ಬಳ್ಳಾರಿಯ ವಿವಿಧೆಡೆ ಮತ್ತೊಮ್ಮೆ ರೇಡ್ ಮಾಡಿದೆ. ನಾಗೇಂದ್ರ ಆಪ್ತ ಎರಿಸ್ವಾಮಿ ಮನೆ ಸೇರಿ ಆಪ್ತ ಸಹಾಯಕರು ಮತ್ತು ಆಪ್ತರ ಮನೆಯಲ್ಲಿ ರೇಡ್ ಮಾಡಿ ತಪಾಸಣೆ ನಡೆಸಿದ್ದಾರೆ.
ಇದನ್ನೂ ಓದಿ : ಬಂಗಾಳಿ ಸಿನಿಮಾ ರಂಗದಲ್ಲೂ ಕಾಸ್ಟಿಂಗ್ ಕೌಚ್ ದಂಧೆ – ಸ್ವತಃ ನಾನೇ ಸಂತ್ರಸ್ತೆ ಎಂದ ನಟಿ ರಿತಾಭರಿ ಚಕ್ರವರ್ತಿ..!