ಬಂಗಾಳಿ : ಮಾಲಿವುಡ್ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಜಸ್ಟೀಸ್ ಹೇಮಾ ಕಮಿಟಿ ನೀಡಿದ ವರದಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಮಾಲಿವುಡ್‌ನಲ್ಲಿ ಉದಯೋನ್ಮುಖ ನಟಿಯರು ಹಾಗೂ ಜನಪ್ರಿಯ ನಟಿಯರಿಗೆ ಕೂಡ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಲೇ ಇತ್ತು. ಈ ಆರೋಪಗಳೆಲ್ಲಾ ಸತ್ಯ ಎಂದು ಹೇಮಾ ಕಮಿಟಿ ವರದಿ ನೀಡಿತ್ತು. ಇದರ ಬೆನ್ನಲ್ಲೇ ಇದೀಗ ಬಂಗಾಳಿ ಸಿನಿಮಾ ರಂಗದಲ್ಲೂ ಕಾಸ್ಟಿಂಗ್ ಕೌಚ್(ಸೆಕ್ಸ್ ಹಗರಣ)ದ ಆರೋಪ ಕೇಳಿ ಬಂದಿದೆ. ಸ್ವತಃ ನಾನೇ ಸಂತ್ರಸ್ತೆ ಎಂದು ನಟಿ ರಿತಾಭರಿ ಚಕ್ರವರ್ತಿ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿ ಆರೋಪ ಮಾಡಿರುವ ರಿತಾಭರಿ ಅವರು, ಬಂಗಾಳಿ ಸಿನಿಮಾ ರಂಗದಲ್ಲೂ ಇದೇ ರೀತಿ ದಂಧೆ ಇದೆ. ಚಾನ್ಸ್ ಬೇಕಾದ್ರೆ ನಾವು ಸೆಕ್ಸ್ಗೆ ಒಪ್ಪಬೇಕು. ಕೇರಳ ರೀತಿಯಲ್ಲಿ ಬಂಗಾಳದಲ್ಲೂ ತನಿಖೆ ಆಗಲಿ ಎಂದು ಒತ್ತಾಯಿಸಿದ್ದಾರೆ.
ಫೇಸ್ಬುಕ್ನಲ್ಲಿ ಪೋಸ್ಟ್ ಹಾಕುವುದರ ಜೊತೆಗೆ ಖುದ್ದು ಸಿಎಂ ಮಮತಾ ಬ್ಯಾನರ್ಜಿಗೆ ಪೋಸ್ಟ್ ಮಾಡಿರುವ ನಟಿ, ನಾನು ಮತ್ತು ಇತರೆ ನಟಿಯರು ಇಂಥಾ ಪ್ರಸಂಗ ಎದುರಿಸುತ್ತೇವೆ. ಹೀರೋಗಳು, ನಿರ್ಮಾಪಕರು, ನಿರ್ದೇಶಕರು ಕೊಳಕು ವರ್ತನೆ ಮಾಡ್ತಾರೆ. ಹಲವು ನಟಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪ ಮಾಡಿದ್ದಾರೆ.
ಇನ್ನು ಮಲಯಾಳಂ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ವಿಷಯಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳು ಮಾಲಿವುಡ್ನ ಘನತೆ, ಗೌರವಕ್ಕೆ ಕಪ್ಪುಚುಕ್ಕೆ ತಂದ ಬೆನ್ನಲ್ಲೇ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಅಧ್ಯಕ್ಷ ಸ್ಥಾನಕ್ಕೆ ಮೋಹನ್ಲಾಲ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ನಟನ ಜೊತೆಗೆ ಸಂಘದ 17 ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನಿಡಿದ್ದಾರೆ.
ಈ ಮಧ್ಯೆ ನಟಿ ಮಿನು ಮುನೀರ್ ಸಿಪಿಎಂ ಶಾಸಕ ಹಾಗೂ ನಟ ಮುಖೇಶ್ ಸೇರಿ ಹಲವರ ವಿರುದ್ಧ ದೂರು ನೀಡಿದ್ದಾರೆ. 2013ರಲ್ಲಿ ನನ್ನನ್ನು ಲೈಂಗಿಕವಾಗಿ ಶೋಷಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದರು.
ಇದನ್ನೂ ಓದಿ : ಕ್ರಿಕೆಟ್ ಜಗತ್ತಿಗೆ ಜಯ್ ಶಾ ಸಾರಥಿ – ಐಸಿಸಿ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆ..!