ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಕಂಬಿ ಹಿಂದೆ ಲಾಕ್ ಆಗಿದೆ. ದರ್ಶನ್ & ಗ್ಯಾಂಗ್ ಮೇಲೆ ಕ್ರೂರವಾಗಿ ಕೊಲೆ ಮಾಡಿದ ಗಂಭೀರ ಆರೋಪಗಳಿವೆ. ಈ ಬಂಧನ ಹಾಗೂ ಪೊಲೀಸರ ತನಿಖೆ ಇಡೀ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ.
ಇದೀಗ ದರ್ಶನ್ ಅರೆಸ್ಟ್ ಕೇಸ್‌ಗೆ ಸಂಬಂಧಪಟ್ಟಂತೆ ನಿರ್ಮಾಪಕ ಉಮಾಪತಿ ಗೌಡ ಅವರು ಬಹಳ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ಮಾಡಿದ ಕರ್ಮ ದರ್ಶನ್ಗೇ ರಿಟರ್ನ್ ಆಗಿದೆ. ದುರಹಂಕಾರದಿಂದಲೇ ದರ್ಶನ್ಗೆ ಈ ದುರ್ಗತಿ ಬಂದಿದೆ ಎಂದು ಉಮಾಪತಿಗೌಡ ಬಿಗ್ ಬಾಂಬ್ ಸಿಡಿಸಿದ್ದಾರೆ.
ಈ ಬಗ್ಗೆ ಉಮಾಪತಿಗೌಡ BTV ಜೊತೆ ಮಾತನಾಡಿ, ದರ್ಶನ್ಗೆ ಬಂದಿರೋ ಈ ಸ್ಥಿತಿ ಅವರ ಅಂತ್ಯದ ಪರಮಾವಧಿ. ಅಮಾಯಕನನ್ನು ಕೊಲೆ ಮಾಡುವ ಅವಶ್ಯಕತೆ ಇರಲಿಲ್ಲ, ಕರೆದು ಬುದ್ದಿ ಹೇಳಬಹುದಿತ್ತು, ಕೊಲೆ ಮಾಡಿದ್ದು ತಪ್ಪು. ದರ್ಶನ್ ಅಭಿಮಾನಿಗಳು ಹಲವು ಬಾರಿ ಬೆದರಿಕೆ ಒಡ್ಡಿದ್ದಾರೆ, ಅಂದು ತಗಡು ಅಂದಿದ್ದವೇ ಇಂದು ಅನುಭವಿಸುತ್ತಿದ್ದಾರೆ. ತಾಳ್ಮೆಯಲ್ಲಿ ಇದ್ದಿದ್ದಿಂದ್ರಿಂದ ನಮಗೆ ಏನೂ ಆಗಿಲ್ಲ, ಅವರು ಮಾಡಿದ ತಪ್ಪಿಗೆ ತಕ್ಕ ಶಿಕ್ಷೆ ಅನುಭವಿಸಲೇಬೇಕು ಎಂದು ಹೇಳಿದ್ದಾರೆ.
ಯಾರೇ ತಪ್ಪು ಮಾಡಿದ್ದರೂ ಅದು ತಪ್ಪೇ, ಮೈಸೂರಿನಲ್ಲಿ ನನ್ನ ಹಣೆಗೂ ನಟ ದರ್ಶನ್ ಗನ್ ಇಟ್ಟಿದ್ದ. ಅಂದು ಅಲ್ಲಿ ಗಲಾಟೆ ಆದಾಗ ನನ್ನ ಪ್ರಾಣಕ್ಕೇ ಭೀತಿ ಇತ್ತು, ರಾಬರ್ಟ್ ಸೆಟ್ನಲ್ಲಿ ದರ್ಶನ್ ತುಂಬಾ ಜನಕ್ಕೆ ಹೊಡೆದಿದ್ದ ಎಂದು ಉಮಾಪತಿಗೌಡ ಹೇಳಿದ್ದಾರೆ.