ಸ್ಯಾಂಡಲ್‌ವುಡ್‌ನ ರಿಯಲ್ ಸ್ಟಾರ್ ಉಪೇಂದ್ರ ಪ್ರೇಕ್ಷಕರ ತಲೆಗೆ ಹುಳ ಬಿಡುವುದರಲ್ಲಿ ಮೊದಲಿನಿಂದಲೂ ಫೇಮಸ್. ಶೀರ್ಷಿಕೆಯಿಂದಲೇ ವಿಭಿನ್ನ ಕುತೂಹಲವನ್ನು ಹುಟ್ಟುಹಾಕಿ, ನೋಡುಗರ ಆಲೋಚನೆಗಳನ್ನೇ ತಲೆ ಕೆಳಾಗಾಗುವಂತೆ ಮಾಡುವುದು ಅವರ ಸ್ಟೈಲ್.
ಕತೆಯಲ್ಲಿ ಭಿನ್ನತೆ ಎಂಬುದನ್ನು ನಿಜವಾಗಿಯೂ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಪರಿಚಯಿಸಿದ್ದು ನಿರ್ದೇಶಕ ಉಪೇಂದ್ರ. ಸಿನಿಮಾದ ಕತೆ, ಪಾತ್ರ ಪೋಷಣೆಗಳಲ್ಲಿ ಮಾತ್ರವಲ್ಲ ಸಿನಿಮಾದ ಹೆಸರಿನಲ್ಲಿಯೂ ರಿಯಲ್ ಸ್ಟಾರ್ ಪ್ರಯೋಗಗಳನ್ನು ಮಾಡಿದ್ದಾರೆ. ಸಿನಿಮಾ ವಿಚಾರಕ್ಕೆ ಬಂದ್ರೆ ಉಪೇಂದ್ರ ಅವರು ಏನೂ ಬಿಟ್ಟುಕೊಡುವುದಿಲ್ಲ. ಬಿಟ್ಟರೂ ಅಲ್ಲಿ ಚಿಂತನೆಗೆ ಹಚ್ಚುತ್ತಾರೆ. ಅದು ಸಿನಿಮಾ ಟೈಟಲ್‌ನಿಂದಲೇ ಶುರು ಆಗುತ್ತದೆ. ಇದೀಗ ಈ ವಿಚಾರ ಉಪೇಂದ್ರ ಅವರು ನಟಿಸಿ, ನಿರ್ದೇಶಿಸುತ್ತಿರುವ ‘UI’ ಸಿನಿಮಾದ ವಿಷಯದಲ್ಲೂ ಮುಂದುವರೆದಿದೆ.
ಉಪ್ಪಿಯ ಈ ಒಂದು ಯೋಚನೆಯನ್ನೆ ಎಲ್ಲರೂ ಹುಳ ಬಿಡೋದು ಅಂತಿದ್ದಾರೆ. ಆದರೆ, ಉಪೇಂದ್ರ ಇದನ್ನ ಒಪ್ಪಿಕೊಳ್ಳುತ್ತಿಲ್ಲ. ಹಾಗಾಗಿಯೇ ಯುಐ ಸಿನಿಮಾವೊಂದು ಹುಳ ಬಿಡೋ ಸಿನಿಮಾ ಅಲ್ಲ. ಇದು ಜನರ ಮನದಲ್ಲಿರೋ ಹುಳಗಳನ್ನ ತೆಗೆಯೋ ಸಿನಿಮಾ ಎಂದು ಉಪ್ರೇಂದ್ರ ಅವರು ತಿಳಿಸಿದ್ದಾರೆ.
‘UI’ ತಲೆಗೆ ಹುಳ ಬಿಡೋ ಸಿನಿಮಾ ಅಲ್ಲ, ಹುಳ ತೆಗೆಯೋ ಸಿನಿಮಾ ಎಂದು ಬಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ ಅವರು, UI ಸಿನಿಮಾದಲ್ಲಿ ಸಾಕಷ್ಟು ವಿಷಯ ಇದೆ. ಇದನ್ನ ತಿಳಿಯೋಕೆ ಸಿನಿಮಾನೇ ನೋಡಬೇಕಿದೆ. UI ಅಂದ್ರೆ ಏನು ಅನ್ನೋದನ್ನ ತಿಳಿಯೋಕೆ ಚಿತ್ರವನ್ನೆ ನೋಡಬೇಕಾಗುತ್ತದೆ. ಆಗಲೇ ನಿಮಗೆ UI ಸಿನಿಮಾ ಟೈಟಲ್ ಅರ್ಥ ಆಗುತ್ತದೆ. ಆದರೆ, ಸಿನಿಮಾ ಟೆಕ್ನಿಕಲಿ ಸ್ಟ್ರಾಂಗ್ ಆಗಿಯೇ ಇದೆ ಎಂದಿದ್ದಾರೆ.
ಇನ್ನು ಹಾಗೇನೆ ನೀವೆಲ್ಲ ನನ್ನ ರಿಯಲ್ ಸ್ಟಾರ್ ಅಂತಲೆ ಕರೆಯುತ್ತೀರಾ. ಆದರೆ, ಇದೀಗ ಅನ್ ರಿಯಲ್ ಟೆಕ್ನಾಲಜಿ ಮೂಲಕ UI ಸಿನಿಮಾ ರೆಡಿ ಆಗಿದೆ. ಟೆಕ್ನಾಲಜಿ ಎಷ್ಟು ಮುಂದು ಹೋಗಿದೆ ಅಂದ್ರೆ, ಇಬ್ಬರು ಕುಳಿತು ಇಡೀ ಒಂದು ಸಿನಿಮಾವನ್ನ ಒಂದು ರೂಮ್‌ನಲ್ಲಿಯೇ ಕುಳಿತು ಮಾಡಬಹುದಾಗಿದೆ ಅಂತಲೇ ಉಪ್ಪಿ ತಿಳಿಸಿದ್ದಾರೆ.
ಇದನ್ನೂ ಓದಿ : ಹೃದಯಾಘಾತದಿಂದ ಕೊನೆಯುಸಿರೆಳೆದ ಹಿರಿಯ ನಟಿ ಶಕುಂತಲಾ..!