ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಶುರುವಾಗಿ 55ನೇ ದಿನಕ್ಕೆ ಕಾಲಿಟ್ಟಿದೆ. ಒಟ್ಟು 17 ಸ್ಪರ್ಧಿಗಳು ಬಿಗ್ಬಾಸ್ ಸೀಸನ್ 11ಕ್ಕೆ ಎಂಟ್ರಿ ಕೊಟ್ಟಿದ್ದರು. 17 ಸ್ಪರ್ಧಿಗಳಲ್ಲಿ ಸದ್ಯ 14 ಜನ ಬಿಗ್ ಮನೆಯಲ್ಲಿ ಉಳಿದುಕೊಂಡಿದ್ದಾರೆ.
ಇನ್ನೂ ಪ್ರತಿ ವಾರದಂತೆ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ಈ ವಾರವೂ 14 ಸ್ಪರ್ಧಿಗಳಲ್ಲಿ ಓರ್ವ ಸ್ಪರ್ಧಿಗೆ ‘ಕಿಚ್ಚನ ಚಪ್ಪಾಳೆ’ ಕೊಟ್ಟಿದ್ದಾರೆ. ಕಳೆದ ವಾರ ಕಿಚ್ಚನ ಚಪ್ಪಾಳೆಯನ್ನು ಗೋಲ್ಡ್ ಸುರೇಶ್ ಅವರು ಗಿಟ್ಟಿಸಿಕೊಂಡಿದ್ದರು. ಹೀಗಾಗಿ ಈ ವಾರ ಯಾವ ಸ್ಪರ್ಧಿಗೆ ಕಿಚ್ಚನ ಚಪ್ಪಾಳೆ ಬರುತ್ತೆ ಅಂತ ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದರು.
ಅದರಂತೆ ನಿನ್ನೆಯ ಎಪಿಸೋಡ್ನಲ್ಲಿ ವಾರದ ಪಂಚಾಯಿತಿ ನಡೆಸಿಕೊಟ್ಟ ಸುದೀಪ್, ಈ ವಾರದ ಕಿಚ್ಚನ ಚಪ್ಪಾಳೆಯನ್ನು ಉಗ್ರಂ ಮಂಜು ಅವರಿಗೆ ನೀಡಿದ್ದಾರೆ. ಇದೇ ಖುಷಿಯಲ್ಲಿ ಉಗ್ರಂ ಮಂಜು ಅವರು ಇಷ್ಟು ಸಾಕು ಅಣ್ಣ ಅಂತ ಹೆಮ್ಮೆಯಿಂದ ಮಾತಾಡಿದ್ದಾರೆ.
ಪ್ರಸ್ತುತ ಮಂಜು ಅವರು ಮನೆಯ ಕ್ಯಾಪ್ಟನ್ ಆಗಿದ್ದು, ಟಾಸ್ಕ್ಗಳಲ್ಲಿ ಗೇಮ್ ಚೇಂಜರ್ ಆಗಿದ್ದಾರೆ. ಪ್ರತಿ ವಾರದ ಟಾಸ್ಕ್ಗಳಲ್ಲಿ ಗೇಮ್ ಚೇಂಜರ್ ಆಗಿ ಎಲ್ಲರಿಗೂ ಬಿಸಿ ಮುಟ್ಟಿಸ್ತಾ ಇದ್ದಾರೆ.
ಇನ್ನು ಗೋಲ್ಡ್ ಸುರೇಶ್ಗೆ ಅವಾಚ್ಯ ಪದ ಬಳಸಿದ್ದ ರಜತ್ಗೆ ಸುದೀಪ್ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ : ಯಶ್ ‘ಟಾಕ್ಸಿಕ್’ ಸಿನಿಮಾದಲ್ಲಿ ಮತ್ತೊಬ್ಬ ಬಾಲಿವುಡ್ ಬೆಡಗಿ.. ಯಾರಿಕೆ? ವಿಡಿಯೋ ವೈರಲ್..!