ಬೆಂಗಳೂರು : ಸೋಶಿಯಲ್ ಮೀಡಿಯಾ ಬಳಕೆದಾರರೇ ಎಚ್ಚರವಾಗಿರಿ. ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಅಕೌಂಟ್ಗಳನ್ನು ಹ್ಯಾಕ್ ಮಾಡಿ ವಂಚನೆ ಮಾಡುತ್ತಿದ್ದಾರೆ. ಹೌದು.. ಸೀರಿಯಲ್ ನಟ ಸ್ಕಂದ ಅಶೋಕ್ ಎಂಬುವವರ ಅಕೌಂಟ್ ಹ್ಯಾಕ್ ಮಾಡಿ ವಂಚಕರು ದುರ್ಬಳಕೆ ಮಾಡ್ತಿದ್ದರು.
ಈ ವಂಚನೆ ಪ್ರಕರಣ ಇದೀಗ ಮೈಕ್ರೋ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ವಂಚಕರು ನಟನ ಸೋಶಿಯಲ್ ಮೀಡಿಯಾ ಅಕೌಂಟ್ ಹ್ಯಾಕ್ ಮಾಡಿ ಫಾಲೋವರ್ಸ್ಗಳಿಗೆ ಮಿಸ್ ಲೀಡ್ ಮಾಡುತ್ತಿದ್ದರು. ಮೆಸೇಜ್ ಮಾಡುವ ಮೂಲಕ ಒಳ್ಳೆಯ ಲಾಭದ ಕೆಲಸ ಎಂದು ಮನವೊಲಿಸಿ ವಂಚನೆ ಮಾಡಿದ್ದರು.
ವಂಚಕರು ಹಣ ಡಿಮಾಂಡ್ ಮಾಡುವ ಮೂಲಕ ವಂಚನೆ ಮಾಡಿದ್ದು, ಲಾಗಿನ್ ಲೊಕೇಶನ್ ಚೆನೈ ಹಾಗೂ ಬೆಂಗಳೂರು ಮತ್ತು ನೈಜೀರಿಯ ಎಂದು ಪತ್ತೆಯಾಗಿದೆ. ಈ ಪ್ರಕರಣ ಮೈಕೋ ಲೇಔಟ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ : KSRTC ಬಸ್ ಹಾಗೂ ಓಮಿನಿ ನಡುವೆ ಭೀಕರ ಅಪಘಾತ : ಮೂವರು ಸಾ*ವು, ನಾಲ್ವರಿಗೆ ಗಂಭೀರ ಗಾಯ..!
Post Views: 186