Download Our App

Follow us

Home » ಮೆಟ್ರೋ » ತುಮಕೂರು ರಸ್ತೆ ಎಲಿವೇಟೆಡ್ ಫ್ಲೈ ಓವರ್ ಮೂರು ದಿನ ಬಂದ್..!

ತುಮಕೂರು ರಸ್ತೆ ಎಲಿವೇಟೆಡ್ ಫ್ಲೈ ಓವರ್ ಮೂರು ದಿನ ಬಂದ್..!

ತುಮಕೂರು : ಮೂರು ದಿನಗಳ ಕಾಲ ತುಮಕೂರು ರಸ್ತೆ ಎಲಿವೇಟೆಡ್ ಪ್ಲೈಓವರ್ ಬಂದ್ ಆಗಲಿದೆ. ಪ್ಲೈಓವರ್ ಮೇಲೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಜನವರಿ 16ರ ರಾತ್ರಿ 11 ಗಂಟೆಯಿಂದ ಜ.19ರ ಬೆಳಗ್ಗೆ 11 ಗಂಟೆಯವರೆಗೆ ಪ್ರವೇಶ ನಿಷೇಧ ಮಾಡಲಾಗುತ್ತದೆ ಎಂದು ಪೀಣ್ಯ ಸಂಚಾರ ಪೊಲೀಸರು ಆದೇಶ ಹೊರಡಿಸಿದ್ದಾರೆ.

 

ಕಾರಣವೇನು? ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಎಲಿವೇಟೆಡ್ ಪ್ಲೈಓವರ್ ಗೆ ಅಳವಡಿಸಲಾಗಿದ್ದ ವಯಾಡಕ್ಟ್ ಸಮಗ್ರತೆ ಪರಿಶೀಲನೆಗಾಗಿ ಲೋಡ್ ಟೆಸ್ಟಿಂಗ್ ದುರಸ್ತಿ ಕಾರ್ಯ ನಡೆಯಲಿದ್ದು, ಹೆದ್ದಾರಿ ಪ್ರಾಧಿಕಾರದ ಕೋರಿಕೆ ಮೇರೆಗೆ ಪ್ಲೈಓವರ್ ಮೇಲೆ ಸಂಚಾರಕ್ಕೆ ಮೂರು ದಿನಗಳ ಕಾಲ ನಿರ್ಬಂಧ ಹೇರಲಾಗಿದೆ.

ಪರ್ಯಾಯ ವ್ಯವಸ್ಥೆ – ಪೀಣ್ಯ ಎಲಿವೇಟೆಡ್ ಪ್ಲೈಓವರ್ ಬಂದ್ ಹಿನ್ನೆಲೆ, ತುಮಕೂರು ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.

ನೆಲಮಂಗಲ ಕಡೆಯಿಂದ ಬರುವ ವಾಹನಗಳು ಕೆನ್ನಮೆಟಲ್ ಬಳಿ ಹೆದ್ದಾರಿ ಸರ್ವೀಸ್ ರಸ್ತೆ ಮೂಲಕ 8ನೇ ಮೈಲಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ, ಎಸ್ಆರ್ ಎಸ್ ಜಂಕ್ಷನ್ ಮೂಲಕ ಗೊರಗುಂಟೆಪಾಳ್ಯ ತಲುಪುವುದು.

ನೆಲಮಂಗಲ ಕಡೆ ಸಂಚರಿಸುವ ವಾಹನಗಳು ಹೆದ್ದಾರಿ ಸರ್ವೀಸ್ ರಸ್ತೆ ಮೂಲಕ ಪೀಣ್ಯ ಪೊಲೀಸ್ ಠಾಣೆ, ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ, 8ನೇ ಮೈಲಿ ಮೂಲಕ ಸಂಚರಿಸಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ : ಸ್ಯಾಂಟ್ರೋ ರವಿಗೆ ಜೈಲೇ ಗತಿ.. ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ್ರೂ ಸಿಗಲಿಲ್ಲ ಬೇಲ್..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here