ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ ಮತ್ತು ನಟಿ ತ್ರಿಶಾ ಜೊತೆಗಿರುವ ಫೋಟೋಗಳು ವೈರಲ್ ಆಗಿದ್ದು, ಇದು ತೀವ್ರ ಚರ್ಚೆಗೆ ಕಾರಣವಾಗಿದೆ. ಯಾರ ಜೊತೆಗೂ ಯಾವುದೇ ಫೋಟೋಸ್ ಅಷ್ಟಾಗಿ ಹಾಕದ ತ್ರಿಶಾ ಅವರು ವಿಜಯ್ ಜೊತೆಗೆ ಹಲವಾರು ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿಯೂ ಶೇರ್ ಮಾಡಿದ್ದಾರೆ. ಹಾಗಾಗಿ ಇವರಿಬ್ಬರು ರಿಲೇಷನ್ಶಿಪ್ನಲ್ಲಿದ್ದಾರೆ ಅನ್ನೋ ರೂಮರ್ಸ್ ಹಬ್ಬಿತ್ತು. ಇದರ ಬೆನ್ನಲ್ಲೇ ತ್ರಿಶಾ ಶಾಕಿಂಗ್ ಸುದ್ದಿಯೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ನಟಿ ತ್ರಿಶಾ ಅವರು ಮಗನನ್ನು ಕಳೆದುಕೊಂಡಿದ್ದಾರೆ ಎಂದು ಪೋಸ್ಟ್ ಹಾಕಿದ್ದಾರೆ. ನನ್ನ ಮಗನನ್ನು ಕಳೆದುಕೊಂಡೆ ಎಂದು ನಟಿ ಬರೆದಿದ್ದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಇನ್ನೂ ಮದುವೆಯಾಗದ ನಿಮಗೆ ಮಗು ಎಲ್ಲಿಂದ ಎಂದು ಕೇಳುತ್ತಿದ್ದಾರೆ.
ನಟಿ ತ್ರಿಶಾ ಕೃಷ್ಣನ್ ಅವರು ತಮ್ಮ ಜೀವನದ ಕೇಂದ್ರ ಭಾಗವಾಗಿದ್ದ ತಮ್ಮ ಪ್ರೀತಿಯ ನಾಯಿ ಜೋರೊವನ್ನು ಕಳೆದುಕೊಂಡಿದ್ದಾರೆ. ಝೋರೋ ಸಾವಿನಿಂದ ಕಂಗೆಟ್ಟಿರುವ ನಟಿ ತನ್ನ ಅಭಿಮಾನಿಗಳೊಂದಿಗೆ ದುಃಖದ ಸುದ್ದಿಯನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ತ್ರಿಶಾ ತಮ್ಮ ಆಘಾತವನ್ನು ವ್ಯಕ್ತಪಡಿಸಿದ್ದಾರೆ. ದುಃಖಿಸಲು ಮತ್ತು ಸಾರ್ವಜನಿಕರ ಕಣ್ಣುಗಳಿಂದ ದೂರವಿರಲು ಕೆಲಸದಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.
ನನ್ನ ಮಗ ಜೋರೋ ಈ ಕ್ರಿಸ್ಮಸ್ ಮುಂಜಾನೆ ನಿಧನರಾಗಿದ್ದಾರೆ. ನನ್ನನ್ನು ಚೆನ್ನಾಗಿ ತಿಳಿದಿರುವವರಿಗೆ ಇನ್ನು ಮುಂದೆ ನನ್ನ ಜೀವನವು ಶೂನ್ಯ ಅರ್ಥವನ್ನು ಹೊಂದಿದೆ ಎಂದು ತಿಳಿದಿದೆ. ನನ್ನ ಕುಟುಂಬ ಮತ್ತು ನಾನು ಸಂಪೂರ್ಣ ನೊಂದಿದ್ದೇವೆ. ಆಘಾತದ ಸ್ಥಿತಿಯಲ್ಲಿದ್ದೆವು. ಕೆಲಸದಿಂದ ಸ್ವಲ್ಪ ಸಮಯ ವಿರಾಮ ತೆಗೆದುಕೊಳ್ಳುತ್ತೇನೆ ಎಂದು ನಟಿ ಬರೆದಿದ್ದಾರೆ.
ಇದನ್ನೂ ಓದಿ : ಮುನಿ’ಹನಿ’ ಮೇಲೆ ಮೊಟ್ಟೆ ಅಟ್ಯಾಕ್ – ಕಾರಿನ ಮೇಲೆ ‘ಕೈ’ ಕಲ್ಲೆಸೆತ..!