Download Our App

Follow us

Home » ಮೆಟ್ರೋ » ಇನ್ಮುಂದೆ ಟ್ರಾಫಿಕ್​ ರೂಲ್ಸ್ ಬ್ರೇಕ್ ಮಾಡಿದ್ರೆ ಕ್ಯೂ ಆರ್​ ಕೋಡ್​ ಸಹಿತ ಮನೆಗೆ ನೋಟಿಸ್..!​

ಇನ್ಮುಂದೆ ಟ್ರಾಫಿಕ್​ ರೂಲ್ಸ್ ಬ್ರೇಕ್ ಮಾಡಿದ್ರೆ ಕ್ಯೂ ಆರ್​ ಕೋಡ್​ ಸಹಿತ ಮನೆಗೆ ನೋಟಿಸ್..!​

ಬೆಂಗಳೂರು : ಬೆಂಗಳೂರು ಸಂಚಾರ ಪೊಲೀಸರು ಟ್ರಾಫಿಕ್​ ರೂಲ್ಸ್​​ ಬಗ್ಗೆ ಅರಿವು ಮೂಡಿಸುತ್ತಿದ್ದರೂ, ಕೆಲವರು ನಿಯಮಗಳನ್ನು ಉಲ್ಲಂಘನೆ ಮಾಡುತ್ತಲೇ ಇರುತ್ತಾರೆ. ಆದರೆ ಇನ್ಮುಂದೆ ಇದು ನಡೆಯಲ್ಲ. ಇಷ್ಟು ದಿನಗಳ ಕಾಲ ಸಂಚಾರಿ ನಿಯಮ ಉಲ್ಲಂಘಿಸಿದವರ ಮನೆಗೆ ನೋಟಿಸ್​​ ಹೋಗುತ್ತಿತ್ತು. ನೋಟಿಸ್​ ಬಂದರೂ ಹಲವರು ದಂಡ ಕಟ್ಟದೆ ತಕಾರಾರು ತೆಗೆಯುತ್ತಿದ್ದರು. ಇದರಿಂದ ಟ್ರಾಫಿಕ್​ ಪೊಲೀಸರು ಕಿರಿಕಿರಿ ಅನುಭವಿಸುತ್ತಿದ್ದರು. ಆದ್ರೀಗ ಸಿಲಿಕಾನ್​ ಸಿಟಿಯಲ್ಲಿ ಸಂಚಾರಿ ಪೊಲೀಸರು ಹೈಟೆಕ್​ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಇನ್ಮುಂದೆ ಟ್ರಾಫಿಕ್​ ರೂಲ್ಸ್ ಉಲ್ಲಂಘನೆ ಮಾಡಿದ್ರೆ ಕ್ಯೂ ಆರ್​ ಕೋಡ್​ ಸಹಿತ ನೋಟಿಸ್​ ಮನೆಗೆ ಬಾಗಿಲಿಗೆ ಬರಲಿದೆ. ಇದ್ರಿಂದ ನಿಯಮ ಉಲ್ಲಂಘನೆ ಬಗ್ಗೆ ಮಾಹಿತಿ ಪಡೆಯಲು ವಾಹನ ಸವಾರರಿಗೆ ಅನುಕೂಲ ಆಗಲಿದೆ.

ಈ QR ಕೋಡ್ ಸ್ಕ್ಯಾನ್ ಮಾಡಿದಲ್ಲಿ ವಾಹನ ಸವಾರರಿಗೆ ತಾವು ಮಾಡಿದ ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ನಿಯಮ ಉಲ್ಲಂಘನಾ ದಿನಾಂಕ, ಸಮಯ, ಯಾವ ರೀತಿ ಸಂಚಾರ ಉಲ್ಲಂಘನೆ ಹಾಗೂ ದಂಡದ ಮೊತ್ತದ ಜೊತೆಗೆ ನೋಟಿಸ್ ಬಲಭಾಗದಲ್ಲಿ ಕ್ಯೂ ಆರ್ ಕೋಡ್ ಅನ್ನು  ನಮೂದಿಸಲಾಗಿರುತ್ತದೆ. ವಾಹಾನ ಸವಾರರು ಇದನ್ನು ಸ್ಕ್ಯಾನ್ ಮಾಡಿ, ತಾವು ಉಲ್ಲಂಘನೆ ಮಾಡಿರುವ ಬಗ್ಗೆ ವಿಡಿಯೋ ಹಾಗೂ ಫೋಟೊ ವೀಕ್ಷಿಸಬಹುದಾಗಿದೆ.

ಅಲ್ಲದೆ ಇದೇ QR ಕೋಡ್ ಸ್ಕ್ಯಾನ್​ ಮಾಡಿ ದಂಡದ ಮೊತ್ತವನ್ನೂ ಪಾವತಿಸಬಹುದಾಗಿದೆ. ಇನ್ನು ಈ ನೋಟಿಸ್​ ಅನ್ನು ಬೆಂಗಳೂರು ಸಂಚಾರ ವಿಭಾಗ TTMC ಯಲ್ಲಿರುವ ಆಟೋಮೆಷನ್ ಸೆಂಟರ್ ಜಾರಿ ಮಾಡಲಿದೆ. 2021 ರ ನಂತರ ಉಲ್ಲಂಘಿಸಿದ ವಿಡಿಯೋ ಅಥವಾ ಫೋಟೊ ಇದರಲ್ಲಿ ಲಭ್ಯವಿರಲಿವೆ. ಈಗಾಗಲೇ 133 ಮಾಲೀಕರಿಗೆ ಈ ರೀತಿಯ ನೋಟಿಸ್ ಕಳುಹಿಸಿರುವುದಾಗಿ ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಪಾಕ್ ಪರ ಘೋಷಣೆ ಕೇಸ್ : ವರದಿ ಬಹಿರಂಗ ಪಡಿಸಲು ಮೀನಾಮೇಷ ಯಾಕೆ..? – ಸರ್ಕಾರದ ಮೇಲೆ ಆರ್.ಅಶೋಕ್ ಅನುಮಾನ..!

Leave a Comment

DG Ad

RELATED LATEST NEWS

Top Headlines

ಬೆಂಗಳೂರು : ಕುಡಿದ ಮತ್ತಲ್ಲಿ ಅಪಾರ್ಟ್​ಮೆಂಟ್​ನ ಬೇಸ್​ಮೆಂಟ್​​ನಲ್ಲಿ ಯುವಕರ ಮಧ್ಯೆ ಹೊಡೆದಾಟ – ವಿಡಿಯೋ ವೈರಲ್​..!

ಬೆಂಗಳೂರು : ಬೆಳಂದೂರಿನ ಜುನ್ನಸಂದ್ರದ ಅಪಾರ್ಟ್​ಮೆಂಟ್​ನ ಬೇಸ್​ಮೆಂಟ್​​ನಲ್ಲಿ ಯುವಕರ ಮಧ್ಯೆ ಗಲಾಟೆ ನಡೆದಿದೆ. ಕುಡಿದ ನಶೆಯಲ್ಲಿ ಹುಡುಗರು ಹೊಡೆದಾಡಿಕೊಂಡಿದ್ದು, ಪುಂಡರ ಕ್ವಾಟ್ಲೆಗೆ ಅಕ್ಕಪಕ್ಕದ ನಿವಾಸಿಗಳು ಹೈರಾಣಾಗಿದ್ದಾರೆ. ಯುವಕರ

Live Cricket

Add Your Heading Text Here