Download Our App

Follow us

Home » ಸಿನಿಮಾ » ವ್ಯವಸಾಯದ ಸಮಸ್ಯೆ ಸಾರುವ ‘ಕಬಂಧ’ ಚಿತ್ರಕ್ಕೆ ಹಾರರ್ ಟಚ್..!

ವ್ಯವಸಾಯದ ಸಮಸ್ಯೆ ಸಾರುವ ‘ಕಬಂಧ’ ಚಿತ್ರಕ್ಕೆ ಹಾರರ್ ಟಚ್..!

ಸತ್ಯನಾಥ್ ನಿರ್ದೇಶನದ ’ಕಬಂಧ’ ಚಿತ್ರ ಕುಂಜಾರ ಫಿಲಂಸ್ ಲಾಂಛನದಲ್ಲಿ ರೆಡಿಯಾಗಿದೆ. ಈ ಚಿತ್ರದ ಗೆಳೆತನ ಕುರಿತಾದ ಲಿರಿಕಲ್ ಸಾಂಗ್ ರಿಲೀಸ್ ಕಾರ್ಯಕ್ರಮ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಕೆ.ಕಲ್ಯಾಣ್ ಸಾಹಿತ್ಯ, ಸಾನಿತೇಜ್ ಸಂಗೀತದಲ್ಲಿ ವಾಸುಕಿ ವೈಭವ್ ಧ್ವನಿಯಾಗಿದ್ದಾರೆ. 

ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಸತ್ಯನಾಥ್ ಅವರು ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ ನಡೆದ ಪ್ರಕರಣ ರಾಜ್ಯಾದ್ಯಂತ ಭಯ ಹುಟ್ಟಿಸಿತ್ತು. ಇದನ್ನೇ ಬಳಸಿಕೊಂಡು ಒಂದಷ್ಟು ಹಾರರ್ ರೂಪಕೊಟ್ಟು ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ. ಅದರಲ್ಲೂ ವ್ಯವಸಾಯದ ಸಮಸ್ಯೆ ನಮಗೆ ಗೊತ್ತಿಲ್ಲದೆ ತುಂಬಾ ವರ್ಷದಿಂದ ಕಾಡ್ತಾ ಇದೆ. ಅದು ನಮ್ಮನೆವರೆಗೂ, ನಮ್ಮೋಳಗೂ ಹಾಗೂ ದೇಹಕ್ಕೂ ಬಂದಿದೆ. ಈಗಲೂ ಇದರ ಕಡೆ ಗಮನಹರಿಸದೆ ಹೋದರೆ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿಯಾಗುತ್ತದೆ. ಇಂತಹುದೆ ವಿಚಾರ, ವಿಷಯಗಳನ್ನು ಹೆಕ್ಕಿಕೊಂಡು ಬೋದನೆ ಮಾಡದೆ, ಮನರಂಜನೆ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಒಂದು ಸನ್ನಿವೇಶದಲ್ಲಿ ಮಗುವೊಂದು ’ನಂಗಾಗಿದ್ದೆ ನಿಂಗಾಗುತ್ತೆ’ ಎಂಬ ಡೈಲಾಗ್ ಕಥೆಗೆ ಪೂರಕವಾಗಿದೆ. ಅದು ಏನೆಂಬುದನ್ನು ಚಿತ್ರಮಂದಿರಕ್ಕೆ ಬಂದರೆ ತಿಳಿಯುತ್ತದೆ ಎಂದರು.

ನಾಯಕನಾಗಿ ಪ್ರಸಾದ್‌ ವಶಿಷ, ನಾಯಕಿಯಾಗಿ ಪ್ರಿಯಾಂಕ ಮಲ್ಲಾಡಿ, ರಿಯಲ್​​ ಆಗಿ ಕೃಷಿಕರಾಗಿರುವ ಕಿಶೋರ್‌ ಕುಮಾರ್ ರೀಲ್​​ನಲ್ಲೂ ಅದೇ ಪಾತ್ರವನ್ನು ನಿರ್ವಹಿಸಿರುವುದಾಗಿ ಹೇಳಿಕೊಂಡರು. ಉಳಿದಂತೆ ಅವಿನಾಶ್, ನಿರ್ದೇಶಕ ಯೋಗರಾಜ್ ಭಟ್, ವಂದನ, ವಚನ, ವಿಶಾಲ್, ನಾಗಾರ್ಜುನಸ್ವಾಮಿ, ಚಂದ್ರು, ಛಾಯಾಶ್ರೀ, ಪ್ರಶಾಂತ್‌ ಸಿದ್ದಿ ಮುಂತಾದವರು ಅಭಿನಯಿಸಿದ್ದಾರೆ. ಛಾಯಾಗ್ರಹಣ ವಿಷ್ಣುಪ್ರಸಾದ್, ಸಂಕಲನ ಸತ್ಯಜಿತ್‌ ಸಿದ್ದಕಾಂತ್ ಅವರದಾಗಿದೆ. ದಾವಣಗೆರೆ, ತುಮಕೂರು ಮುಂತಾದ ಕಡೆಗಳಲ್ಲಿ 40 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಶೇಕಡ 80ರಷ್ಟು ರಾತ್ರಿ ವೇಳೆ ಸೆರೆ ಹಿಡಿದಿರುವುದು ವಿಶೇಷ. ಶುಕ್ರ ಫಿಲಿಂಸ್‌ನ ಸೋಮಣ್ಣ ಮುಖಾಂತರ ಸಿನಿಮಾವು ಸದ್ಯದಲ್ಲೆ ತೆರೆಗೆ ಬರುವ ಸಾಧ್ಯತೆ ಇದೆ.

ಇದನ್ನೂ ಓದಿ : ‘ಎನ್ 1’ ಕ್ರಿಕೆಟ್ ಅಕಾಡೆಮಿಯಿಂದ ಹೊಸ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ..!

Leave a Comment

DG Ad

RELATED LATEST NEWS

Top Headlines

ಹಾಸನಾಂಬೆ ಸನ್ನಿಧಿಯಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಮಧ್ಯೆ ಮಾರಾಮಾರಿ..!

ಹಾಸನ : ಹಾಸನದ ಹಾಸನಾಂಬೆ ದೇವಿಯ ಉತ್ಸವ ಆರಂಭವಾಗಿದೆ. ಅಕ್ಟೋಬರ್ 24ರಂದು ದೇಗುಲದ ಬಾಗಿಲು ತೆರೆಯಲಾಗಿದೆ. ನವೆಂಬರ್ 3ರವರೆಗೆ ಉತ್ಸವ ನಡೆಯುತ್ತದೆ. ಲಕ್ಷಾಂತರ ಭಕ್ತರು ದೇವಿಯ ದರ್ಶನ

Live Cricket

Add Your Heading Text Here