Download Our App

Follow us

Home » ಅಪರಾಧ » ಬಿಬಿಎಂಪಿ ಅಧಿಕಾರಿ ಬಸವರಾಜ್​ ಮಗ್ಗಿ ಮನೆಯಲ್ಲಿ ಹುಲಿ ಉಗುರು ಪತ್ತೆ..!

ಬಿಬಿಎಂಪಿ ಅಧಿಕಾರಿ ಬಸವರಾಜ್​ ಮಗ್ಗಿ ಮನೆಯಲ್ಲಿ ಹುಲಿ ಉಗುರು ಪತ್ತೆ..!

ಕಲಬುರಗಿ : ಬಿಬಿಎಂಪಿ ಸಹಾಯಕ ಆಯುಕ್ತ ಬಸವರಾಜ್​ ಮಗ್ಗಿ ಅವರ ಮನೆ ಮೇಲೆ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ಮಾಡಿದೆ. ಬಸವರಾಜ್ ಮಗ್ಗಿ ಮಹಾದೇವಪುರ ವಲಯದ ಕಂದಾಯ ವಿಭಾಗದ ಸಹಾಯಕ‌ ಆಯುಕ್ತರಾಗಿದ್ದು, ಅಪಾರ ಪ್ರಮಾಣದ ಬೇನಾಮಿ‌ ಆಸ್ತಿ ಸಂಪಾದನೆ ಹಿನ್ನಲೆಯಲ್ಲಿ ಬಸವರಾಜ್​ ಮನೆ ಮೇಲೆ ದಾಳಿ ಮಾಡಲಾಗಿದೆ. ಲೋಕಾಯುಕ್ತ ರೇಡ್ ವೇಳೆ ಬಸವರಾಜ್ ಮಗ್ಗಿ ಮನೆಯಲ್ಲಿ ಹುಲಿ ಉಗುರು ಪತ್ತೆಯಾಗಿದೆ.

ಬಸವರಾಜ್ ಮಗ್ಗಿ ಅವರ ಬೆಂಗಳೂರಿನ ನಿವಾಸದಲ್ಲಿ ಎರಡು ಹುಲಿ ಉಗುರು ಪತ್ತೆಯಾಗಿದ್ದು, ಹುಲಿ ಉಗುರಿನ ಸತ್ಯಾಸತ್ಯತೆ ಅರಿಯಲು ಲೋಕಾಯುಕ್ತ ಅರಣ್ಯ ಅಧಿಕಾರಿಗಳನ್ನು ಕರೆಯಿಸಿ ಪರಿಶೀಲನೆ ಮಾಡಿದ್ದಾರೆ. ಅಧಿಕಾರಿಗಳು ಬಸವರಾಜ್ ಮಗ್ಗಿ ಬೆಂಗಳೂರಿನ ಮನೆಯನ್ನ ಇಂಚಿಂಚೂ ಜಾಲಾಡುತ್ತಿದ್ದಾರೆ.

ಚಿನ್ನಾಭರಣ, ನಗದು, ಆಸ್ತಿ-ಪಾಸ್ತಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿದ್ದು, ಬೆಂಗಳೂರು, ಕಲಬುರಗಿಯ 9 ಕಡೆ ಮಗ್ಗಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ರೇಡ್​ ಮಾಡಿದ್ದಾರೆ. ಮನೆ, ಕಚೇರಿ, ಫಾರ್ಮ್​​ಹೌಸ್​, ಫ್ಲಾಟ್​ಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರಿನ ಕುಮಾರಕೃಪ ರಸ್ತೆಯ ಮೋತಿ ಅಪಾರ್ಟ್‌ಮೆಂಟ್, ಫ್ಲಾಟ್ ನಂ-2 ರಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಪರಿಶೀಲನೆ ನಡೆಸಿದ್ದಾರೆ.

ಕಲಬುರಗಿಯ ಮಗ್ಗಿ ಹುಟ್ಟೂರು ಪಾಳದಲ್ಲಿರುವ ಮನೆಯಲ್ಲೂ ಇಂಚಿಂಚೂ ಜಾಲಾಡಿದ್ದು, ಈ ವೇಳೆ ಚಿನ್ನಾಭರಣ, ಕ್ಯಾಸಿನೋ ಕಾಯಿನ್ ಕೂಡ​​ ಪತ್ತೆಯಾಗಿದೆ. BBMP ಮಹದೇವಪುರ ವಲಯದ ಕಚೇರಿಯಲ್ಲೂ ಲೋಕಾ ಶೋಧ ನಡೆದಿದ್ದು, ಕಂದಾಯಧಿಕಾರಿ ಬಸವರಾಜ್ ಮಗ್ಗಿಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲನೆ ನಡೆಸಿದ್ದಾರೆ. ಖುದ್ದು ಕಲಬುರಗಿ ಲೋಕಾಯುಕ್ತ ಎಸ್ ಪಿ ಜಾನ್ ಆಂಟನಿ ನೇತೃತ್ವದಲ್ಲಿ ತಪಾಸಣೆ ನಡೆದಿದ್ದು, ಲೋಕಾಯುಕ್ತ ಅಧಿಕಾರಿಗಳು ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಬಸವರಾಜ್ ಮಗ್ಗಿ ಮನೆಯನ್ನು ಎಸ್ ಪಿ ಜಾನ್ ಆಂಟನಿ, ಡಿ ವೈ ಎಸ್ ಪಿ ಗೀತಾ ಬೇನಾಳ ನೇತೃತ್ವದಲ್ಲಿ ಪರಿಶೀಲನೆ ನಡೆಯುತ್ತಿದೆ.

ಇದನ್ನೂ ಓದಿ : ಸೈಡ್ ಬಿ ಟ್ರೈಲರ್​​ನಲ್ಲೂ ಸೆಸ್ಸೇಷನ್ ಕ್ರಿಯೇಟ್ ಮಾಡಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರ..!

Leave a Comment

DG Ad

RELATED LATEST NEWS

Top Headlines

ಚಿತ್ರದುರ್ಗದಲ್ಲಿ ಖಾಸಗಿ ಬಸ್ಸನ್ನೇ ಕದ್ದು ಎಸ್ಕೇಪ್ ಆಗಿರೋ ಖತರ್ನಾಕ್ ಕಳ್ಳರು..!

ಚಿತ್ರದುರ್ಗ : ಖಾಸಗಿ ಬಸ್​​ವೊಂದನ್ನು ಕದ್ದು ಕಳ್ಳರು ಎಸ್ಕೇಪ್ ಆಗಿರುವ ಘಟನೆ ಚಿತ್ರದುರ್ಗದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದೆ. ನಾಯಕನಹಟ್ಟಿ ಮೂಲದ SRE ಬಸ್ ಮಾಲೀಕ ಸಯ್ಯದ್

Live Cricket

Add Your Heading Text Here