Download Our App

Follow us

Home » ಮೆಟ್ರೋ » ಐಟಿಸಿಟಿಯಲ್ಲಿ 8 ವಾಹನಗಳ ಗ್ಲಾಸ್ ಒಡೆದು ಅಟ್ಟಹಾಸ ಮೆರೆದ ಪುಂಡರು..!

ಐಟಿಸಿಟಿಯಲ್ಲಿ 8 ವಾಹನಗಳ ಗ್ಲಾಸ್ ಒಡೆದು ಅಟ್ಟಹಾಸ ಮೆರೆದ ಪುಂಡರು..!

ಬೆಂಗಳೂರು : 8 ವಾಹನಗಳ ಗ್ಲಾಸ್ ಒಡೆದು ಪುಂಡರು ಅಟ್ಟಹಾಸ ಮೆರೆದಿರುವ ಘಟನೆ ಐಟಿಸಿಟಿಯಲ್ಲಿ ನಡೆದಿದೆ. ನಿಂತಿದ್ದ ಕಾರನ್ನು ತಳ್ಳಿ, ಕಲ್ಲಿನಿಂದ ಗ್ಲಾಸ್​ ಒಡೆದು ಪುಂಡತನ ಮಾಡಿದ್ದಾರೆ. ಬೆಳಗಿನ ಜಾವ 3  ಗಂಟೆ ಸುಮಾರಿಗೆ ಬ್ಯಾಟರಾಯನಪುರ ಮುಖ್ಯರಸ್ತೆಯಲ್ಲಿ ಅಟ್ಯಾಕ್ ಮಾಡಿದ್ದಾರೆ.

ಸ್ವಿಫ್ಟ್, ಇನ್ನೋವಾ, ಟಾಟಾ ನೆಕ್ಸಾನ್ ಕಾರು ಸೇರಿ ಹಲವು ವಾಹನ ಜಖಂ ಆಗಿದ್ದು, ರಸ್ತೆ ಬದಿ ಬಿದ್ದಿದ್ದ ಕಲ್ಲನ್ನು ಪುಂಡರು ಕಾರ್​​​ಗಳ ಮೇಲೆ ಎತ್ತಿಹಾಕಿದ್ದಾರೆ. ಕಾರಿನ ಡ್ಯಾಶ್ ಬೋರ್ಡ್, ಸಿಸ್ಟಂ ಎಲ್ಲಾ ಒಡೆದು ಹಾಕಿ ವಿಕೃತಿ ಮೆರೆದಿದ್ದು, ಪುಂಡರು ಹ್ಯಾಂಡ್ ಬ್ರೇಕ್ ತೆಗೆದು ಸ್ವಿಫ್ಟ್ ಗಾಡಿಯನ್ನು ಕಳ್ಳತನ ಮಾಡಲು ಯತ್ನಿಸಿದ್ದಾರೆ. ಹಿಂದೆ ಚಲಿಸಿದ ವಾಹನ ಬೀದಿ ದೀಪದ​ ಕಂಬಕ್ಕೆ ಡಿಕ್ಕಿ ಹೊಡೆದು ಹಾನಿಯಾಗಿದೆ.

ಬ್ಯಾಟರಾಯನಪುರ ಪೊಲೀಸ್ ಠಾಣೆ ಮುಂದೆ ಪುಂಡರು ಬೈಕ್​ ಕಳ್ಳತನ ಮಾಡಲು ಯತ್ನಿಸಿದ್ದು, ಪುಂಡನೊಬ್ಬನನ್ನು ಹಿಡಿದು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗ – ಮತ್ತೊಂದು ಹೋರಾಟಕ್ಕೆ ಸಜ್ಜಾದ ಕರವೇ..!

Leave a Comment

DG Ad

RELATED LATEST NEWS

Top Headlines

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಡಿವೈಡರ್​​ಗೆ ಡಿಕ್ಕಿ ಹೊಡೆದ ಕಾರು – ತಾಯಿ, ಮಗ ಸ್ಥಳದಲ್ಲೇ ಸಾವು..!

ಮಂಡ್ಯ : ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ ವೇ ನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ತಾಯಿ ಮಗ ಬಲಿಯಾಗಿರುವ ಘಟನೆ ನಡೆದಿದೆ. ರುದ್ರಾಕ್ಷಿಪುರ ಗ್ರಾಮದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕಾರಿನಲ್ಲಿ

Live Cricket

Add Your Heading Text Here