ಮಂಡ್ಯ : ಕೆ.ಆರ್ ಪೇಟೆಯಲ್ಲಿ ಸೈಬರ್ ಕಳ್ಳರ ಹಾವಳಿ ಮಿತಿ ಮೀರಿದ್ದು, ಅಂಗಡಿ ಮಾಲೀಕರನ್ನು ಟಾರ್ಗೆಟ್ ಮಾಡಿ ಸೈಬರ್ ವಂಚಕರು ಹಣಕ್ಕೆ ಟಾರ್ಚರ್ ಕೊಡುತ್ತಿದ್ದಾರೆ. ಪುರಸಭೆಯ ಹೆಸರಲ್ಲಿ ಅಂಗಡಿ ಮಾಲೀಕರಿಗೆ ಟ್ರೇಡ್ ಲೈಸನ್ಸ್ ನವೀಕರಿಸುವಂತೆ ಪೋನ್ ಮೂಲಕ ಟಾರ್ಚರ್ ಕೊಡ್ತಿದ್ದು, ಟ್ರೇಡ್ ಲೈಸನ್ಸ್ ನವೀಕರಣ ಮಾಡಿಸಿ ಎಂದು ಅಂಗಡಿ ಮಾಲೀಕರಿಗೆ ಕ್ಯೂಆರ್ ಕೋಡ್ ಕಳಿಸಿ ಸ್ಕ್ಯಾನ್ ಮೂಲಕ ಹಣ ಪಾವತಿಗೆ ಒತ್ತಾಯಿಸಿದ್ದಾರೆ.
ಕ್ಯೂಆರ್.ಕೋಡ್ ಮೂಲಕ ಹಣ ಪಾವತಿಸಿದ್ದರೆ ಲಾಯರ್ ನೋಟೀಸ್ ಕಳಿಸುವುದಾಗಿ ಎಚ್ಚರಿಕೆ ನೀಡಿದ್ದು, ತಾವು ಕಳಿಸುವ ಕ್ಯೂರ್ ಕೋಡ್ಗೆ ಹಣ ಕಳಿಸಿ ಎಂದು ಪದೇ ಪದೇ ಪೋನ್ ಮಾಡಿ ಅಂಗಡಿ ಮಾಲೀಕರಿಗೆ ಟಾರ್ಚರ್ ಕೊಡುತ್ತಿದ್ದಾರೆ. ಇದರಿಂದ ಗಾಬರಿಗೊಂಡ ಅಂಗಡಿ ಮಾಲೀಕರು ಪುರಸಭೆಗೆ ಬಂದು ವಿಚಾರಿಸಿದಾಗ ಸೈಬರ್ ವಂಚಕರ ಜಾಲ ಬಯಲಿಗೆ ಬಂದಿದೆ. ಘಟನೆಯಿಂದ ಎಚ್ಚೆತ್ತ ಪುರಸಭೆ ಅಧಿಕಾರಿಗಳು ಪಟ್ಟಣ ಪೊಲೀಸರಿಗೆ ಸೈಬರ್ ವಂಚಕರ ವಿರುದ್ದ ದೂರು ನೀಡಲಾಗಿದೆ.
ಪಟ್ಟಣದ ವ್ಯಾಪ್ತಿಯ ಅಂಗಡಿ ಮಾಲೀಕರು ಅಪರಿಚಿತರು ಕಳಿಸುವ QR ಕೋಡ್ಗೆ ಸ್ಕ್ಯಾನ್ ಮಾಡಿ ಹಣ ಕಳಿಸದಂತೆ ಪುರಸಭೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಪಟ್ಟಣದಲ್ಲಿ ಸಕ್ರಿಯವಾಗಿರುವ ಸೈಬರ್ ವಂಚಕರ ವಿರುದ್ದ ಜಾಗೃತಿ ವಹಿಸುವಂತೆ ಅಧಿಕಾರಿಗಳು ಮತ್ತು ಪುರಸಭೆ ಸದಸ್ಯರು ಕರೆ ನೀಡಿದ್ದಾರೆ. ಸೈಬರ್ ವಂಚಕರ ಟಾರ್ಚರ್ಗೆ ಅಂಗಡಿ ಮಾಲೀಕರು ಕಂಗಾಲಾಗಿದ್ದಾರೆ. ಈ ಕುರಿತಾಗಿ ಪುರಸಭೆ ಯಾವುದೇ ಸಂದೇಶ, QR ಕೋಡ್ ಕಳಿಸಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ : ರಾಜ್ಯ ಕಾಂಗ್ರೆಸ್ನಲ್ಲಿ ಮತ್ತೆ ಭಾರೀ ಬಿರುಗಾಳಿ – ಫಾರಿನ್ನಲ್ಲಿ ಡಿಸಿಎಂ..ಆಪ್ತರ ಜೊತೆ ಸಿಎಂ..!